ಟಿ20 ಕ್ರಿಕೆಟ್ ಗೆ ಬಂದಿದೆ ಮತ್ತೊಂದು ನಿಯಮ; ಏನಿದು ಸೂಪರ್ ಸಬ್?
Team Udayavani, Sep 17, 2022, 4:53 PM IST
ಮುಂಬೈ: ಕಳೆದೆರಡು ದಶಕದಲ್ಲಿ ಕ್ರಿಕೆಟ್ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದರಲ್ಲೂ ಟಿ20 ಕ್ರಿಕೆಟ್ ನ ಉಗಮದ ಬಳಿಕ ಅತಿ ವೇಗದಲ್ಲಿ ಹಲವು ರೀತಿ ಬದಲಾವಣೆಗಳು ಆಗುತ್ತಿವೆ. ಇದೀಗ ಮತ್ತೊಂದು ನಿಯಮ ಬಂದಿದ್ದು, ಅದೇ ಸೂಪರ್ ಸಬ್ ಅಥವಾ ಇಂಪಾಕ್ಟ್ ಪ್ಲೇಯರ್.
2005ರಲ್ಲಿ ಐಸಿಸಿ ಏಕದಿನ ಕ್ರಿಕೆಟ್ ನಲ್ಲಿ ಈ ನಿಯಮವನ್ನು ಪರಿಚಯಿಸಿತ್ತು. ಒಂದು ವರ್ಷದ ಬಳಿಕ ಈ ನಿಯಮವನ್ನು ತೆಗೆದು ಹಾಕಲಾಗಿತ್ತು.
ಶುಕ್ರವಾರ ಆರಂಭವಾದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಸೂಪರ್-ಸಬ್ ನಿಯಮವನ್ನು ಪರಿಚಯಿಸಲಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ ಇಂಡಿಯಾ ಮಹಾರಾಜಸ್ ಮತ್ತು ಟೀಮ್ ವರ್ಲ್ಡ್ ಜೈಂಟ್ಸ್ ನಡುವಿನ ವಿಶೇಷ ಪಂದ್ಯದಲ್ಲಿ ಬಿಸಿಸಿಐ ಈ ನಿಯಮ ಪರಿಚಯಿಸಿದೆ. ಇದನ್ನು ದೇಶಿಯ ಟಿ20 ಲೀಗ್ ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲೂ ಬಿಸಿಸಿಐ ಅಳವಡಿಸಲಿದೆ.
ಏನಿದು ಸೂಪರ್ ಸಬ್:
ಸೂಪರ್ ಸಬ್ ಎಂದರೆ ಬದಲಿ ಆಟಗಾರ ಎಂದರ್ಥ. ತಂಡವು ತನ್ನ ಆಡುವ 11 ಆಟಗಾರರ ಪಟ್ಟಿ ಮತ್ತು ನಾಲ್ವರು ಬದಲಿ ಆಟಗಾರರ ಹೆಸರನ್ನು ಟಾಸ್ ವೇಳೆ ಸೂಚಿಸಬೇಕು. ಪಂದ್ಯದ ಆರಂಭದ ನಂತರ ತಂಡಗಳು ಈ 4 ಆಟಗಾರರಲ್ಲಿ ಯಾರನ್ನಾದರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇನಿಂಗ್ಸ್ನ 14ನೇ ಓವರ್ಗೂ ಮೊದಲು ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು.
ಇದನ್ನೂ ಓದಿ:ನಾನು ಬಾಲಿವುಡ್ ಗೆ ಬರಲು ಇವರೇ ಕಾರಣ: ರಶ್ಮಿಕಾ ಹೇಳಿದ್ದು ಯಾರ ಬಗ್ಗೆ?
ಬದಲಿ ಆಟಗಾರನನ್ನು ಕಣಕ್ಕಿಳಿಸಿದರೆ, ಒಬ್ಬ ಆಟಗಾರ ಹೊರ ಹೋಗಬೇಕು. ಆದರೆ ಹೊರಹೋದ ಆಟಗಾರ ಆ ಬಳಿಕ ಯಾವುದೇ ರೂಪದಲ್ಲಿ ಪಂದ್ಯದ ಭಾಗವಾಗಲು ಸಾಧ್ಯವಾಗುವುದಿಲ್ಲ. ಅಂದರೆ ಬದಲಿ ಫೀಲ್ಡರ್ ಆಗಿಯೂ ಕೂಡ ಅಡಲು ಅವಕಾಶ ಇರುವುದಿಲ್ಲ.
ಬ್ಯಾಟಿಂಗ್ ತಂಡವು, ವಿಕೆಟ್ ಪತನದ ಸಮಯದಲ್ಲಿ ಅಥವಾ ಇನ್ನಿಂಗ್ಸ್ ವಿರಾಮದ ವೇಳೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಪರಿಚಯಿಸಬಹುದು. ಒಂದು ವೇಳೆ ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್ ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ ನಾಲ್ಕು ಓವರ್ ಗಳನ್ನು ಬೌಲ್ ಮಾಡಲು ಅನುಮತಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.