ಡಿಸಿಇಟಿ: ಪ್ರವೇಶ ಪರೀಕ್ಷೆ ಅಂಕ 100ಕ್ಕೆ ಇಳಿಕೆ: ಈ ವರ್ಷದಿಂದಲೇ ಹೊಸ ನಿಯಮ
ಪ್ರಶ್ನೆಪತ್ರಿಕೆ ಬಗ್ಗೆ ಅಧಿಸೂಚನೆ ವೇಳೆಗೆ ಅಂತಿಮ
Team Udayavani, Sep 18, 2022, 7:40 AM IST
ಬೆಂಗಳೂರು: ಡಿಪ್ಲೊಮಾ ಸಿಇಟಿ (ಡಿಸಿಇಟಿ) ಕೋರ್ಸ್ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಹತ್ವದ ಬದಲಾವಣೆ ಮಾಡಿದೆ. ಪ್ರವೇಶ ಪರೀಕ್ಷೆ ಅಂಕಗಳನ್ನು 180ರಿಂದ 100ಕ್ಕೆ ಇಳಿಸಿದ್ದು, ಡಿಪ್ಲೊಮೊ ವ್ಯಾಸಂಗಕ್ಕೆ ಅಪ್ಲೆ„ಡ್ ವಿಜ್ಞಾನ ಮತ್ತು ಗಣಿತವಿಷಯಗಳನ್ನು ಮಾತ್ರ ಪರಿಗಣಿಸಿ ಎಲ್ಲ ಕೋರ್ಸ್‌ಗಳಿಗೆ ಅನ್ವಯವಾಗು ವಂತೆ ಪರೀಕ್ಷೆ ನಡೆಸಲಿದೆ.
ಯಾವುದೇ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಅಭ್ಯರ್ಥಿಗಳು ಬೇರೆ ಯಾವುದೇ ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಅರ್ಹರು ಎಂದು ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿ ಷತ್ತು (ಎಐಸಿಟಿಇ) 2020ರಲ್ಲಿ ನಿಯಮಗಳನ್ನು ಬದಲಾವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೂತನ
ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ ಡಿಸಿಇಟಿ- 2022ರ ಪರೀಕ್ಷೆಗೆ ಮಾತ್ರ ಪರಿಗಣಿಸಿ ಪರೀಕ್ಷಾ ಪ್ರಾಧಿಕಾರವು ನಿಯಮಗಳನ್ನು ಆದೇಶಿಸಿದೆ.
ಹೊಸ ನಿಯಮಗಳೇನು?
ಡಿಸಿಇಟಿ-2022ರ ಪರೀಕ್ಷೆಯಲ್ಲಿ ಡಿಪ್ಲೊಮಾ ವ್ಯಾಸಂಗದಲ್ಲಿ ಅಭ್ಯಾಸ ಮಾಡಿರುವ ಅಪ್ಲೆ„ಡ್ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಮಾತ್ರ ಪರಿಗಣಿಸಿ ಎಲ್ಲ ವಿಷಯ ಗಳಿಗೆ ಅನ್ವಯವಾಗುವಂತೆ ಒಂದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಡಿಸಿಇಟಿ-2022ರ ಪರೀಕ್ಷೆಯನ್ನು 100 ಅಂಕಗಳಿಗೆ 3 ಗಂಟೆಯ ಅವಧಿಯ ಪರೀಕ್ಷೆಯನ್ನು ನಡೆಸುವುದು.
ಡಿಪ್ಲೊಮಾ ಅಂತಿಮ ವರ್ಷದ 5 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಯ ತೇರ್ಗಡೆಯಾದ ಫಲಿತಾಂಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದು. ಡಿಸಿಇಟಿ-2022ರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 100 ಅಂಕಗಳಿಗೆ ಗಳಿಸಿದ ಅಂಕಗಳ ಶೇ.50ರಷ್ಟು ಅಂಕಗಳನ್ನು ಪರಿಗಣಿಸುವುದು. ಅದೇ ರೀತಿ ಅಂತಿಮ ವರ್ಷದ ಡಿಪ್ಲೊಮಾ ತೇರ್ಗಡೆಯಾಗಿ ಪಡೆದ ಒಟ್ಟಾರೆ ಅಂಕಗಳ ಶೇ.50ರಷ್ಟು ಅನ್ನು ಪರಿಗಣನೆಗೆ ತೆಗೆದುಕೊಂಡು ಎರಡನ್ನೂ ಸೇರಿಸಿ ವಿದ್ಯಾರ್ಥಿಗಳ ರ್‍ಯಾಂಕ್ ಅನ್ನು ನಿಗದಿಪಡಿಸಲಾಗುತ್ತದೆ.
ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಏನು?
ಡಿಪ್ಲೊಮಾದಲ್ಲಿ ಬೇರೆ ಬೇರೆ ಕೋರ್ಸ್‌ಗಳನ್ನು ಕಲಿಯುವವರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸ ಬೇಕಿದೆ. ಈ ಹಿನ್ನೆಲೆಯಲ್ಲಿ 100 ಅಂಕಗಳಲ್ಲಿ ಯಾವ ವಿಷಯಕ್ಕೆ ಎಷ್ಟು ಅಂಕಗಳ ಪ್ರಶ್ನೆಗಳನ್ನು ನೀಡಬೇಕು ಎಂಬುದು ಇನ್ನಷ್ಟೇ ನಿರ್ಣಯ ವಾಗಬೇಕಿದೆ. ಈವರೆಗೆ 180 ಅಂಕಗಳಿಗಿದ್ದ ಪರೀಕ್ಷೆಯನ್ನು 100 ಅಂಕಗಳಿಗೆ ಮತ್ತು ಎಲ್ಲ ಕೋರ್ಸ್‌ಗಳಿಗೆ ಅನ್ವಯ ಆಗಬೇಕಿರುವುದರಿಂದ ಪ್ರಶ್ನೆಪತ್ರಿಕೆ ಮಾದರಿಯನ್ನು ತಜ್ಞರೊಂದಿಗೆ ಚರ್ಚಿಸಿ ಅಧಿಸೂಚನೆ ವೇಳೆಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು ಕೆಇಎ ಮೂಲಗಳು ತಿಳಿಸಿವೆ.
– ಎನ್. ಎಲ್. ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.