ಗಾಣಿಗ ಸಮಾಜದ ಮಕ್ಕಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬೇಕು: ಬಿಎಸ್ ವೈ
Team Udayavani, Sep 18, 2022, 7:49 PM IST
ಬೈಲಹೊಂಗಲ: ಗಾಣಿಗ ಸಮಾಜದ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವಂತೆ ಪಾಲಕರು ಪ್ರೇರೆಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದ ಮುರಗೋಡ ರಸ್ತೆಯ ಪೃಥ್ವಿ ಗಾರ್ಡನಲ್ಲಿ ಭಾನುವಾರ ಬೆಳಗಾವಿ ಜಿಲ್ಲಾ ಗಾಣಿಗ ಸಂಘ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಮತ್ತು ತಾಲೂಕಾ ಘಟಕದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಗಾಣಿಗ ಸಮಾಜ ಹಾಗೂ ನೌಕರರ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಗಾಣಿಗ ಸಮಾಜವನ್ನು 3ಬಿ ವರ್ಗದಿಂದ 2 ಎ ವರ್ಗಕ್ಕೆ ತರಲು ಪ್ರಯತ್ನಿಸಿದೆನು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಹೆಣ್ಣು ಮಕ್ಕಳ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಿದ್ದೇನು. ಯಾವುದೇ ಸಮಾಜಕ್ಕೆ ನಿಗಮ, ಮಂಡಳಿ ನಿರ್ಮಾಣ ಮಾಡದೆ ಸಮಾಜಕ್ಕೆ ಕೆಲಸ ಮಾಡಬಹುದು. ಗಾಣಿಗ ಸಮಾಜಕ್ಕೆ ಶಿವಮೊಗ್ಗ, ಮುದೋಳದಲ್ಲಿ ನಿವೇಶನ ದೊರಕಿಸಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಿದ್ದೇನೆ. ಬೈಲಹೊಂಗಲದಲ್ಲಿ ಪುರಸಭೆಯಿಂದ ಗಾಣಿಗ ಸಮಾಜ ಭವನ ನಿರ್ಮಾಣಕ್ಕೆ 8 ಗುಂಟೆ ಜಮೀನು ನೀಡಿದೆ. ಇಲ್ಲಿ ಎರಡು ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಬೇಕೆಂದು ಸರಕಾರಕ್ಕೆ ನಿವೇದಿಸಿಕೊಂಡು ಪ್ರಾಮಾಣಿಕ ಕಾರ್ಯ ಮಾಡುತ್ತೇನೆಂದರು.
ವಿಜಯಪುರದ ಗಾಣಿಗ ಗುರು ಪೀಠದ ಪೀಠಾಧ್ಯಕ್ಷ ಡಾ.ಜಯಬಸವ ಕುಮಾರಸ್ವಾಮಿಗಳು, ಕೋಲ್ಹಾರ ಜಗದ್ಗುರು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು, ಭಗಳಾಂಬಾದೇವಿ ದೇವಸ್ಥಾನದ ವೀರಯ್ಯಾ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಸಂಸದೆ ಮಂಗಲಾ ಅಂಗಡಿ, ಶಾಸಕ ಮಹಾಂತೇಶ ಕೌಜಲಗಿ, ಗಾಣಿಗ ಸಂಘದ ರಾಜ್ಯ ಉಪಾಧ್ಯಕ್ಷ ಸೋಮಲಿಂಗ ಮೆಟಗಟ್ಟಿ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಉಟಗಿ, ಸಂಘದ ಜಿಲ್ಲಾಧ್ಯಕ್ಷ ಪ್ರವೀಣ ಗಾಣಿಗೇರ, ತಾಲೂಕಾಧ್ಯಕ್ಷ ಗಂಗಾಧರ ಗಿರಿಜಣ್ಣವರ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಮಹಾಂತೇಶ ದೊಡಗೌಡ್ರ, ರಮೇಶ ಬೂಸನೂರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಎಸ್.ಕೆ.ಬೆಳ್ಳುಬ್ಬಿ, ಬಿ.ಜಿ.ಪಾಟೀಲ ಹಲಸಂಗಿ, ಗೂಳಪ್ಪ ಹೊಸಮನಿ, ಶೇಖರ ಸಜ್ಜನ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ,ಬಾಬು ಕುಡಸೋಮನ್ನವರ, ಜ್ಯೋತಿ ಕೋಲ್ಹಾರ, ಶೋಭಾ ಗಾಣಿಗೇರ, ಮಲ್ಲಪ್ಪ ಗಾಣಿಗೇರ ,ಅಶೋಕ ಮುಗದುಮ್ಮ, ಯಲ್ಲಪ್ಪ ಕಡಕೋಳ, ಬಸವರಾಜ ಗಾಣಿಗೇರ, ವಿರೂಪಾಕ್ಷ ಕಟ್ಟಿಮನಿ, ಶಂಕರ ಗಾಣಿಗೇರ, ಶಿವಪುತ್ರ ಹತ್ತರಕಿ,ಗೋಪಾಲ ಕಟ್ಟಿಮನಿ, ರೇವಪ್ಪ ಗಾಣಿಗೇರ, ಮಲ್ಲಿಕಾರ್ಜುನ ಗಾಣಿಗೇರ, ಪ್ರಕಾಶ ಗಾಣಿಗೇರ, ಯಲ್ಲಪ್ಪ ಗಾಣಗಿ, ಗಂಗಾಧರ ಕಲ್ಯಾಣಿ, ರಾಜು ಗಾಣಗಿ, ಅಶೋಕ ಗಾಣಗಿ , ಮಡ್ಡೆಪ್ಪ ಗಾಣಿಗೇರ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಗಾಣಿಗ ಸಮಾಜ ಭಾಂದವರು ಉಪಸ್ಥಿತರಿದ್ದರು. ಸೌಭಾಗ್ಯಗೌಡ ಪ್ರಾರ್ಥಿಸಿದರು. ಲೀನಾ ವಕ್ಕುಂದ, ಪ್ರವೀಣ ಗಾಣಿಗೇರ ನಿರೂಪಿಸಿದರು.
ಸಾಧಕ ಪ್ರಗತಿಪರ ರೈತರು, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ವೈದ್ಯರನ್ನು, ಗಣ್ಯರನ್ನು ಸನ್ಮಾನಿಸಲಾಯಿತು.
ಗಾಣಿಗ ಸಮಾಜದ ನಿಗಮ ಸ್ಥಾಪಿಸಬೇಕೆಂದು ಬಿ.ಎಸ್.ಯಡಿಯೂರಪ್ಪನವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಇದಕ್ಕೂ ಮೊದಲು ಪಟ್ಟಣದ ಶಿವಬಸವ ಕಲ್ಯಾಣಮಂಟಪದಿಂದ ಶ್ರೀಗಳ ಬೆಳ್ಳಿ ಸಾರೋಟಿನ ಮೆರವಣಿಗೆ ಮುರಗೋಡ ರಸ್ತೆಯ ವೇದಿಕೆ ವರೆಗೆ ಜರುಗಿತು. ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭಮೇಳ, ಕುದುರೆ ಕುಣಿತ ನೋಡುಗರ ಗಮನ ಸೆಳೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.