ಸೆ.23ರಿಂದ ರೋಜರ್ ಫೆಡರರ್ ವಿದಾಯ ಕೂಟ ಲೇವರ್ ಕಪ್
Team Udayavani, Sep 18, 2022, 11:00 PM IST
ಲಂಡನ್: ಟೆನಿಸ್ ದಂತಕಥೆ ರೋಜರ್ ಫೆಡರರ್ ಪಾಲಿನ ವಿದಾಯ ಪಂದ್ಯಾವಳಿಯಾಗಿರುವ ಲೇವರ್ ಕಪ್ಗೆ ಇಬ್ಬರು ಮೀಸಲು ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.
ಟೀಮ್ ಯೂರೋಪ್ಗೆ ಮ್ಯಾಟಿಯೊ ಬೆರೆಟಿನಿ, ಟೀಮ್ ವರ್ಲ್ಡ್’ಗೆ ಟಾಮಿ ಪೌಲ್ ಸೇರ್ಪಡೆಗೊಂಡಿದ್ದಾರೆ. ಟೀಮ್ ಯೂರೋಪ್ ತಂಡವನ್ನು ಬೋರ್ಗ್ ಮುನ್ನಡೆಸಲಿದ್ದಾರೆ. ಥಾಮಸ್ ಎನ್ಕ್ವಿಸ್ಟ್ ಉಪನಾಯಕ. ಇಲ್ಲಿನ ಆಟಗಾರರೆಂದರೆ ನೊವಾಕ್ ಜೊಕೊವಿಚ್, ರಫಾಯೆಲ್ ನಡಾಲ್, ಸ್ಟೆಫಾನಸ್ ಸಿಸಿಪಸ್, ಕ್ಯಾಸ್ಪರ್ ರೂಡ್, ರೋಜರ್ ಫೆಡರರ್ ಮತ್ತು ಆ್ಯಂಡಿ ಮರ್ರೆ.
ಟೀಮ್ ವರ್ಲ್ಡ್ ನಾಯಕ ಜಾನ್ ಮೆಕೆನ್ರೊ. ಉಪನಾಯಕ ಪ್ಯಾಟ್ರಿಕ್ ಮೆಕೆನ್ರೊ. ಉಳಿದವರೆಂದರೆ ಫೆಲಿಕ್ಸ್ ಆಗರ್ ಅಲಿಯಾಸಿಮ್, ಟೇಲರ್ ಫ್ರಿಟ್ಜ್, ಡಿಯೆಗೊ ಶಾರ್ಟ್ಸ್ ಮನ್, ಅಲೆಕ್ಸ್ ಡಿ ಮಿನೌರ್, ಫ್ರಾನ್ಸೆಸ್ ಥಿಯಾಫೊ ಮತ್ತು ಜಾಕ್ ಸಾಕ್. ತಂಡದಲ್ಲಿ ಯಾರಾದರೂ ಗಾಯಾಳಾಗಿ ಹೊರಗುಳಿಯುವ ಸಂದರ್ಭ ಎದುರಾದರಷ್ಟೇ ಮ್ಯಾಟಿಯೊ ಬೆರೆಟಿನಿ ಮತ್ತು ಟಾಮಿ ಪೌಲ್ ಆಡಲಿಳಿಯುವರು. ಲೇವರ್ ಕಪ್ ಪಂದ್ಯಾವಳಿ ಸೆ. 23ರಿಂದ 25ರ ತನಕ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.