ಕಾಣಿಯೂರು-ಕಾಞಂಗಾಡ್ ರೈಲ್ವೇ ಮಾರ್ಗಕ್ಕೆ ಶಾಶ್ವತ ಹಿನ್ನಡೆ
Team Udayavani, Sep 19, 2022, 6:10 AM IST
ಸುಳ್ಯ: ಕಾಞಂಗಾಡ್ – ಕಾಣಿಯೂರು ರೈಲ್ವೇ ಮಾರ್ಗ ಪ್ರಸ್ತಾವವನ್ನು ಈ ಹಿಂದೆ ರೈಲ್ವೇ ಇಲಾಖೆಯೂ ತಿರಸ್ಕರಿಸಿದ್ದು, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದಿತ್ತು. ಈಗ ರಾಜ್ಯ ಸರಕಾರ ಇದನ್ನು ತಿರಸ್ಕರಿಸಿದೆ.
ಕೇರಳ ಮತ್ತು ಕರ್ನಾಟಕ ಹಾಗೂ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ಅನೇಕ ವರ್ಷಗಳ ಹಿಂದೆಯೇ ಈ ಪ್ರಸ್ತಾವ ಚಾಲನೆಗೆ ಬಂದಿತ್ತು.
ಸರ್ವೇ ನಡೆಸಲು ಬಜೆಟ್‌ನಲ್ಲಿ ಹಣವನ್ನೂ ಮೀಸಲಿರಿಸಲಾಗಿತ್ತು. ರೈಲ್ವೇ ಮಾರ್ಗದ ಅನುಷ್ಠಾನಕ್ಕೆ ಕೇರಳ ಸರಕಾರ ಹೆಚ್ಚಿನ ಉತ್ಸುಕತೆ ತೋರಿತ್ತಲ್ಲದೆ ಕೇರಳದ ಪಾಣತ್ತೂರಿನವರೆಗೆ ಸರ್ವೇ ಪೂರ್ತಿಗೊಳಿಸಿತ್ತು.
ಈ ಯೋಜನೆ ನನೆಗುದಿಗೆ ಬೀಳುವ ಹಂತದಲ್ಲಿದ್ದಾಗ ಸುಳ್ಯ ಭಾಗದ ಕೆಲವು ಮುಖಂಡರು ಕ್ರಿಯಾಸಮಿತಿ ರಚಿಸಿ ಕಾಞಂಗಾಡ್ ಭಾಗದ ಜನಪ್ರತಿನಿಧಿಗಳೊಂದಿಗೆ ಕೇಂದ್ರ – ರಾಜ್ಯ ಸಚಿವರನ್ನು ಭೇಟಿ ಮಾಡಿದ್ದರು. ಆಗ ಭರವಸೆಗಳು ದೊರೆತಿದ್ದವು. ಆದರೆ ರಾಜ್ಯ ಸರಕಾರ ತಿರಸ್ಕರಿಸುವುದರೊಂದಿಗೆ ಯೋಜನೆ ಶಾಶ್ವತವಾಗಿ ಬದಿಗೆ ಸರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.