ವಿಜಯ್‌ ದೇವರಕೊಂಡರಿಗೆ ಆ ದೋಷವಿದೆ, ಅವರು ಎಂದೂ.. ಜೋತ್ಯಿಷಿ ಹೇಳಿದ ಹಳೆಯ ಮಾತು ಮತ್ತೆ ವೈರಲ್

Team Udayavani, Sep 19, 2022, 1:01 PM IST

thumb vijaYADEVARAKONDA

ಹೈದರಾಬಾದ್:‌ ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಅವರ ʼಲೈಗರ್‌ʼ ಎಷ್ಟು ಅಬ್ಬರದಿಂದ ರಿಲೀಸ್‌ ಆಗಿತ್ತೋ, ಅಷ್ಟೇ ವೇಗದಿಂದ ಥಿಯೇಟರ್‌ ನಿಂದ ದೂರ ಹೋಗಿದೆ. ನಿರೀಕ್ಷೆ ಹುಟ್ಟಿಸಿದ ಸಿನಿಮಾ ಎಷ್ಟೋ ಮಂದಿಗೆ ನಿರಾಸೆ ಮೂಡಿಸಿ, ಬಾಕ್ಸ್‌ ಆಫೀಸ್‌ ನಲ್ಲೂ ಸೋತಿದೆ.

ಆ.25 ರಂದು ರಿಲೀಸ್‌ ಆದ ಸಿನಿಮಾಕ್ಕೆ ಮೊದಲಿನಿಂದಲೂ ಹೈಪ್‌ ಇತ್ತು. ಭರ್ಜರಿ ಫೈಟ್‌ ಸೀನ್‌ ಗಳಿರುವ ಚಿತ್ರದಲ್ಲಿ ವಿಜಯ್‌ ಜಬರ್‌ ದಸ್ತ್‌ ಬಾಡಿ ಬಿಲ್ಡ್‌ ಮಾಡಿ ಚಿತ್ರಕ್ಕಾಗಿ ತಯಾರಿ ನಡೆಸಿದ್ದರು. ಆದರೆ ಚಿತ್ರ ರಿಲೀಸ್‌ ಆದ ಬಳಿಕ ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆಯಿದ್ದ ನಿರೀಕ್ಷೆ ಹುಸಿಯಾಯಿತು. ನಿರ್ದೇಶಕ ಪುರಿ ಜಗನ್ನಾಥ್‌ ಸಿಕ್ಕಾಪಟ್ಟೆ ಹೈಪ್‌ ಸೃಷ್ಟಿಸಿ ಪ್ರೇಕಕ್ಷಕರಿಗೆ ಮೋಸ ಮಾಡಿದರು ಎನ್ನುವ ಮಾತುಗಳೂ ಕೇಳಿ ಬಂತು.

ವಿಜಯ್‌ ದೇವರಕೊಂಡ ಅವರಿಗೆ ʼಲೈಗರ್‌ʼ ಸೋಲು ದೊಡ್ಡ ಹಿನ್ನೆಡೆಯಾಗಿದೆ. ಈ ಹಿಂದಿನ ಚಿತ್ರಗಳಾದ ʼವರ್ಲ್ಡ್‌ ಫೇಮಸ್‌ ಲವರ್‌, ʼ ʼನೋಟʼ ಕೂಡ ಅಟ್ಟರ್‌ ಫ್ಲಾಫ್‌ ಸಾಲಿಗೆ ಸೇರಿತ್ತು. ಈ ಸರಣಿ ಸೋಲಿನ ಹಿಂದಿನ ಕಾರಣದ ಬಗ್ಗೆ ಟಿಟೌನ್‌ ನಲ್ಲಿ ಮಾತುಗಳು ಆರಂಭವಾಗಿದೆ.

ತೆಲಂಗಾಣದ ಜೋತ್ಯಿಷಿಯೊಬ್ಬರು ವಿಜಯ್‌ ದೇವರಕೊಂಡ ಬಗ್ಗೆ ಹೇಳಿದ ಮಾತುಗಳು ಸತ್ಯವೆಂದು ಜನರೀಗ ಮಾತಾನಾಡಿಕೊಳ್ಳುತ್ತಿದ್ದಾರೆ. ವೇಣುಸ್ವಾಮಿ ಎಂಬ ಜ್ಯೋತಿಷಿಯೊಬ್ಬರು ಈ ಹಿಂದೆ ವಿಜಯ್‌ ದೇವರಕೊಂಡ ಭವಿಷ್ಯವನ್ನು ನುಡಿದಿದ್ದರು. ವಿಜಯ್‌ ದೇವರಕೊಂಡ ಅವರಿಗೆ ಅಷ್ಟಮ ಶನಿ ವಕ್ಕರಿಸಿದೆ. ವಿಜಯ್ ನಟರಾದ ಅರವಿಂದ ಸ್ವಾಮಿ, ಉದಯ್‌ ಕಿರಣ್‌ ರಂತೆ  ಮೊದಲು ಮಿಂಚಿ ನಂತರ ಬದಿಗೆ ಸರಿಯುತ್ತಾರೆ. ಅವರು ಮುಂದಿನ ನಿರ್ಧಾರಗಳನ್ನು ತುಂಬಾ ಜಾಗ್ರತೆಯಿಂದ ತೆಗೆದುಕೊಳ್ಳಬೇಕು. ಅವರು ದೊಡ್ಡ ಹೀರೋ ಆಗಲು ಸಾಧ್ಯ ವಿಲ್ಲ ಎಂದು ಹೇಳಿದ್ದರು.

ಈ ಹಳೆಯ ಮಾತು ಈಗ ʼಲೈಗರ್‌ʼ ಸೋಲಿನ ಬಳಿಕ ಮತ್ತೆ ವೈರಲ್‌ ಆಗುತ್ತಿದೆ. ಕೆಲವರು ಸ್ವಾಮೀಜಿ ಹೇಳಿದ ಮಾತುಗಳೇ ಸತ್ಯವೆಂದು ಮಾತಾನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಇದೇ ವೇಣು ಸ್ವಾಮಿ ಸಮಂತಾ – ನಾಗ ಚೈತನ್ಯ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂದು ಮೊದಲೇ ಹೇಳಿದ್ದರು. ರಶ್ಮಿಕಾ ಅವರ ಯಶಸ್ಸಿನ ಬಗ್ಗೆಯೂ ಭವಿಷ್ಯವನ್ನು ನುಡಿದಿದ್ದರು.

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

1-rupali

Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

1-ree

Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್‌’

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.