ಐ ಫೋನ್ 14 ಖರೀದಿಗಾಗಿ ಕೊಚ್ಚಿಯಿಂದ ದುಬೈಗೆ ಪಯಣ: ಈತ ಹೀಗೆ ಮಾಡಿರುವುದು ಇದೇ ಮೊದಲಲ್ಲ!
Team Udayavani, Sep 19, 2022, 2:11 PM IST
ದುಬೈ: ಮೊಬೈಲ್ ಗಳಲ್ಲಿ ಅತ್ಯಂತ ದುಬಾರಿ ಫೋನ್ ಎಂದು ಕರೆಯಲ್ಪಡುವ ಐ-ಫೋನ್ 14 ನೇ ಆವೃತ್ತಿ ಬಿಡುಗಡೆಯಾಗಿದೆ. 4 ಮಾಡೆಲ್ ಗಳಾದ ಐಪೋನ್ 14, ಐಪೋನ್ ಪ್ಲಸ್, ಐಫೋನ್ 14 ಪ್ರೋ, ಐ ಫೋನ್ 14 ಪ್ರೋ ಮ್ಯಾಕ್ಸ್ ಮಾರುಕಟ್ಟೆಗೆ ಬಂದಿದೆ. ಈ ನಾಲ್ಕು ಮಾಡೆಲ್ ಗಳಿಗೆ ಭಿನ್ನವಾದ ಬೆಲೆ ನಿಗದಿಯಾಗಿದೆ.
ಐ ಫೋನ್ ಕೊಳ್ಳಬೇಕೆನ್ನುವುದು ಎಷ್ಟೋ ಜನರಿಗೆ ಒಂದು ಕ್ರೇಜ್. ಕೊಚ್ಚಿಯ ಉದ್ಯಮಿಯೊಬ್ಬರು ಐಫೋನ್ ಕೊಳ್ಳಲು ವಿಮಾನವೇರಿ ದುಬೈಗೆ ಪಯಣ ಬೆಳೆಸಿದ್ದಾರೆ. ಐಫೋನ್ 14 ಪ್ರೋಗಾಗಿ ಉದ್ಯಮಿ ಧೀರಜ್ ಪಲ್ಲಿಯಿಲ್ ದುಬೈಗೆ ಹೋಗಿ ಮೊಬೈಲ್ ಖರೀದಿಸಿದ್ದಾರೆ.
ಭಾರತದಲ್ಲಿ ಐಫೋನ್ 14 ಪ್ರೋಗೆ 1,59,900 ( 512GB) ಬೆಲೆಯಿದೆ. ಭಾರತಕ್ಕಿಂತ ದುಬೈ ನಲ್ಲಿ 14ನೇ ಆವೃತ್ತಿಯ ಐಫೋನ್ ಮೊದಲೇ ರಿಲೀಸ್ ಆಗಿದೆ. ದುಬೈನ ಬೆಲೆಯಲ್ಲಿ ಐಫೋನ್ 14 ಪ್ರೋಗೆ 5,949 AED (1,29,000) ಬೆಲೆಯಿದೆ. ಈ ಕಾರಣಕ್ಕಾಗಿ ಭಾರತದಲ್ಲಿ ಐಫೋನ್ ಖರೀಸುವರರಲ್ಲಿ ನಾನು ಮೊದಲಿಗನಾಗಬೇಕೆಂದು ಧೀರಜ್ ದುಬೈನಲ್ಲಿ ಐಫೋನ್ 14 ಪ್ರೋ ( (512GB) ಖರೀದಿಸಿದ್ದಾರೆ.
ಧೀರಜ್ ಐಫೋನ್ 14 ಪ್ರೋಗೆ ಭಾರತದಲ್ಲಿ ಇರುವ ಬೆಲೆಗಿಂತ 10 ಸಾವಿರ ರೂ. ಜಾಸ್ತಿ ಖರ್ಚು ಮಾಡಿದ್ದಾರೆ. ( 1,69,900 ಲ.ರೂ) ಅದಕ್ಕೆ ಕಾರಣ ಧೀರಜ್ ವಿಮಾನದ ಟಿಕೆಟ್ ಗಾಗಿ 40 ಸಾವಿರ ರೂ. ವ್ಯಯಿಸಿರುವುದು.
ಇನ್ನು ಧೀರಜ್ ಈ ರೀತಿ ಐಫೋನ್ ಖರೀದಿಸಲು ದುಬೈಗೆ ಪ್ರಯಾಣಿಸಿರುವುದು ಇದೇ ಮೊದಲಲ್ಲ. ಈ ಹಿಂದೆ 2017 ರಲ್ಲಿ ಐಫೋನ್ 8 ಖರೀದಿಸಲು ದುಬೈಗೆ ತೆರಳಿದ್ದರು.ಹಾಗೆ ಐ ಫೋನ್ 11 ಪ್ರೋಮ್ಯಾಕ್ಸ್ ಗಾಗಿ 2019 ರಲ್ಲಿ ಭಾರತದಲ್ಲಿ ಬಿಡುಗಡೆ ಆಗುವ ಒಂದು ವಾರಕ್ಕಿಂತ ಮೊದಲು ದುಬೈನಲ್ಲಿ ಖರೀದಿಸಿದ್ದೆ. ದುಬೈನಲ್ಲಿ ಐ ಫೋನ್ 12, 13 ಮಾರಾಟ ಆರಂಭವಾದಾಗ ನಾನು ಮೊದಲ ಗ್ರಾಹಕನಾಗಿದ್ದೆ ಎಂದು ಧೀರಜ್ ಹೇಳಿದ್ದಾರೆ.
ದುಬೈನ ಮಿರ್ಡಿಫ್ ಸಿಟಿ ಸೆಂಟರ್‌ನಲ್ಲಿರುವ ಪ್ರಿಮಿಯಂ ಆ್ಯಪಲ್ ಸ್ಟೋರ್ ನಲ್ಲಿ ಐಫೋನ್ 14 ಪ್ರೋ ( 512GB) ಖರೀದಿಸಿದ್ದಾರೆ. ಧೀರಜ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಐಫೋನ್ ಖರೀದಿಸಿದ ಬಗ್ಗೆ ಪೋಟೋ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.