ದ್ರಾಕ್ಷಿ ಬೆಳೆಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಿ
ಅಥಣಿ ತಾಲೂಕಿನ 12 ಸಾವಿರ ಎಕರೆಯಲ್ಲಿ ದ್ರಾಕ್ಷಿ ಬೆಳೆ; ಸರ್ಕಾರದಿಂದ ತೋಟಗಾರಿಕೆ ಬೆಳೆಗೆ ವಿವಿಧ ಯೋಜನೆ
Team Udayavani, Sep 19, 2022, 2:56 PM IST
ತೆಲಸಂಗ: ರಾಜ್ಯದಲ್ಲಿ ವಿಜಯಪೂರ ಜಿಲ್ಲೆ ನಂತರ ಅಥಣಿಯಲ್ಲಿಯೇ ಹೆಚ್ಚು ದ್ರಾಕ್ಷಿ ಬೆಳೆ ಮಾಡುತ್ತಿದ್ದು, ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುವ ದ್ರಾಕ್ಷಿ ಬೆಳೆಗಾರರು, ವೈಜ್ಞಾನಿಕತೆ ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬೆಳೆ ಮಾಡುವಲ್ಲಿ ಬದಲಾಗಬೇಕಿದೆ ಎಂದು ತಾಲೂಕು ತೋಟಗಾರಿಕಾ ಅಧಿಕಾರಿ ಶ್ವೇತಾ ಹಾಡಕರ್ ಹೇಳಿದರು.
ಗ್ರಾಮದಲ್ಲಿ ದ್ರಾಕ್ಷಿ ಬೆಳೆಗಾರರ ಸಂಘ ಆಯೋಜಿಸಿದ್ದ ಒಂದು ದಿನದ ದ್ರಾಕ್ಷಿ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲೂಕಲ್ಲಿ 12 ಸಾವಿರ ಎಕರೆ ಭೂಮಿಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಇಲ್ಲಿಯ ವಾತಾವರಣಕ್ಕೆ ದ್ರಾಕ್ಷಿ ಬೆಳೆ ಸೂಕ್ತವಾಗಿದೆ. 2 ವರ್ಷದಿಂದ ಹವಾಮಾನ ವೈಪರೀತ್ಯ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದನ್ನು ಎದುರಿಸಿ ಹೆಚ್ಚು ಇಳುವರಿ ಪಡೆಯುವುದು ಹೇಗೆ ಎಂದು ತಿಳಿಸಲು ಅಕ್ಟೋಬರ್ ಚಾಟ್ನಿ ಹೊಸ್ತಿಲಲ್ಲೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಸಂಘಟಕರ ಕಾರ್ಯ ಶ್ಲಾಘನೀಯ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ದ್ರಾಕ್ಷಿ ಬೆಳೆ ಮಾಡುವವರಿಗೆ, ಹನಿ ನೀರಾವರಿ, ಹೊಂಡ ನಿರ್ಮಾಣಕ್ಕೆ ಇಲಾಖೆ ಪ್ರೋತ್ಸಾಹಧನ ಇದೆ. ದ್ರಾಕ್ಷಿ ಬೆಳೆಗಾರರಿಗೆ ಮಾರ್ಗದರ್ಶನ ನೀಡಲು ಇಲಾಖೆ ಸನ್ನದ್ಧವಾಗಿದೆ ಎಂದರು.
ಮಣ್ಣು ವಿಜ್ಞಾನಿ ಡಾ.ಪ್ರಸನ್.ಎಸ್.ಎಂ ಮಾತನಾಡಿ, ಇಲ್ಲಿಯದು ತೋಟಗಾರಿಕೆಗೆ ಹೇಳಿ ಮಾಡಿಸಿದಂತಹ ಮಣ್ಣು ಎಂದರು.
ಡಾ| ಸಿದ್ದಪ್ಪ ಥೋಕೆ ಮಾತನಾಡಿ, ದ್ರಾಕ್ಷಿ ಎಂದರೆ ಖರ್ಚು ಹೆಚ್ಚು ಎನ್ನೋದಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿಗಾಗಿ ಮೇಲ್ಚಾವಣಿ ನಿರ್ವಹಣೆ, ಆರೋಗ್ಯ ಕಾಪಾಡುವುದು, ರೋಗನಿರೋಧಕ ಶಕ್ತಿ ಗಿಡದಲ್ಲಿ ಹೆಚ್ಚಿಸಬೇಕು. ಅಂದಾಗಲೇ 70ರಷ್ಟು ದ್ರಾಕ್ಷಿ ಬೆಳೆ ಗೆದ್ದಂತೆ. ದ್ರಾಕ್ಷಿ ಬೆಳೆ ಸಂಪೂರ್ಣ ಹವಾಮಾನ ಆಧರಿಸಿರುವುದರಿಂದ ಪ್ರಸಕ್ತ ವರ್ಷ ಸೆ.30ರವರೆಗೆ ಚಾಟ್ನಿಗೆ ಬಹಳಷ್ಟು ಸೂಕ್ತ ವಾತಾವರಣ ಇದೆ ಎಂದರು.
ಗ್ರಾಪಂ ಅಧ್ಯಕ್ಷ ವಿಲಾಸ್ ಮೋರೆ, ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಸ್.ಆಯ್. ಅಥಣಿ, ತೋಟಗಾರಿಕಾ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ, ಕೀಟ ಶಾಸ್ತ್ರ ಪ್ರಾಧ್ಯಾಪಕ ಡಾ| ವೆಂಕಟೇಶಲು, ಸಸ್ಯ ರೋಗ ಶಾಸ್ತ್ರ ಪ್ರಾಧ್ಯಾಪಕ ಡಾ| ಬಸವರಾಜಪ್ಪ ಎಂ.ಪಿ, ಅರ್ಥ ಶಾಸ್ತ್ರ ಪ್ರಾಧ್ಯಾಪಕ ಡಾ| ಶ್ರೀಪಾದ ವಿಶ್ವೇಶ್ವರ, ಹಣ್ಣು ವಿಭಾಗ ಪ್ರಾಧ್ಯಾಪಕ ಡಾ| ಆನಂದ ನಂಜಪ್ಪನವರ್, ಡಾ| ಸಂಗನಬಸವ ಗೊಳ್ಳಗಿ, ಡಾ|ರಾಘವೇಂದ್ರ ಆಚಾರ್ಯ, ಅರವಿಂದ ಗೋಲವಾನೆ ಸೇರಿದಂತೆ ಅನೇಕ ತಜ್ಞರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.