ಅಂಕೋಲಾ ಅಪರಾಧ ಸುದ್ದಿಗಳು : ಮಟ್ಕಾ ಅಡ್ಡೆ ಮೇಲೆ ದಾಳಿ
ಯುವಕ ಆತ್ಮಹತ್ಯೆ, ಅಡಿಕೆ ಕಳವು
Team Udayavani, Sep 19, 2022, 10:18 PM IST
ಅಂಕೋಲಾ : ತಾಲೂಕಿನ ಅವರ್ಸಾದ ಮೀನು ಮಾರುಕಟ್ಟೆಯ ಬಳಿ ಮಟ್ಕಾ ಆಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸಕಲಬೇಣದ ನಿವಾಸಿ ಚಂದ್ರಶೇಖರ ಸದಾನಂದ ನಾಯ್ಕ(39), ಹಾಗೂ ಅವರ್ಸಾ ಗ್ರಾ.ಪಂ.ಸದಸ್ಯ ರಾಜೇಶ ಈರಾ ನಾಯ್ಕ ಇವರೇ ಬಂಧಿತ ಆರೋಪಿಗಳು. ದಾಳಿಯ ವೇಳೆ ಬಂಧಿತರಿಂದ ಓಸಿ ಆಟಕ್ಕೆ ಬಳಸಿದ ಸಾಮಗ್ರಿ ಹಾಗೂ ರೂ.680 ನಗದು ಹಣವನ್ನು ವಶಪಡಿಸಿಕೊಂಡಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಮನೆಯಲ್ಲಿನ ತನ್ನ ಕೋಣೆಯಲ್ಲಿಯೇ 35ರ ಯುವಕನೋರ್ವ ನೇಣಿಗೆ ಶರಣಾದ ಘಟನೆ ತಾಲೂಕಿನ ಭಾಸಗೋಡ ಕೊಗ್ರೆಯಲ್ಲಿ ಸೋಮವಾರ ನಡೆದಿದೆ.
ನಿತ್ಯಾನಂದ ಮಾರುತಿ ಆಗೇರ (35) ಈತನೇ ಮೃತ ದುರ್ದೈವಿ. ಸೋಮವಾರ ಮನೆಯಲ್ಲಿಯೇ ತನ್ನ ಮಲಗುವ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಮನೆಯ ಜಂತಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ.
ಗೌಂಡಿ ಕೆಲಸವನ್ನು ಮಾಡಿಕೊಂಡಿದ್ದ ಈತ ಅತಿಯಾಗಿ ಸಾರಾಯಿ ಕುಡಿತದ ಚಟದಿಂದಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದ್ದು ಯಾವುದೋ ವಿಷಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಂಗಳದಲ್ಲಿಟ್ಟ 120 ಕೆಜಿ ಅಡಿಕೆ ಕದ್ದೊಯ್ದ ಕಳ್ಳರು
ಮಾರಾಟ ಮಾಡುವ ಸಲುವಾಗಿ ಮನೆಯಂಗಳದಲ್ಲಿ ಇಟ್ಟ ಸುಮಾರು 120 ಕೆಜಿ ಅಡಿಕೆಯನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿಯಲ್ಲಿ ನಡೆದಿದೆ.
ಈ ಕುರಿತು ಮಹಾಬಲೇಶ್ವರ ನರಸಿಂಹ ಭಟ್ ಕನಕನಹಳ್ಳಿ ಇವರು ದೂರು ನೀಡಿದ್ದು ಇವರ ಮನೆಯಂಗಳದಲ್ಲಿ ಅಡಿಕೆಯನ್ನು ಒಣಗಿಸಿ ಮಾರಾಟ ಮಾಡುವ ಸಲುವಾಗಿ ಚೀಲಗಳಲ್ಲಿ ತುಂಬಿಡಲಾಗಿತ್ತು. ಈ ಪೈಕಿ 60 ಕೆಜಿಯ ಎರಡು ಅಡಿಕೆ ಚೀಲಗಳನ್ನು ಬುಧವಾರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕದ್ದೊಯ್ದಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕಳವಿನ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.