ಅಂಗನವಾಡಿ ಸಿಬಂದಿಗೆ ಸಮವಸ್ತ್ರ ಬಣ್ಣ ನಿಗದಿ
Team Udayavani, Sep 20, 2022, 6:35 AM IST
ದಾವಣಗೆರೆ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮುಂದಿನ ವರ್ಷದಿಂದ ಸಮವಸ್ತ್ರ ಧಾರಣೆಗೆ ಪೂರಕವಾಗಿ ರಾಜ್ಯ ಸರಕಾರ ಸೀರೆಯ ಬಣ್ಣ ನಿಗದಿಗೊಳಿಸಿದೆ.
ಮುಂದಿನ ಆರ್ಥಿಕ ವರ್ಷದಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಯರು ಮೆಂತೆಕಾಳಿನ (ಗೋಲ್ಡನ್ ಯೆಲ್ಲೊ) ಬಣ್ಣದ ಸಮವಸ್ತ್ರದ ಸೀರೆ ಉಡಲಿದ್ದಾರೆ.
ಅಂಗನವಾಡಿ ಸಹಾಯಕಿಯರು ಕೆಂದುಗಂಪು (ಮೆರೂನ್) ಬಣ್ಣದ ಸೀರೆ ಧರಿಸುವರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿ ಆಕಾಶನೀಲಿ ಬಣ್ಣದ ಸಮವಸ್ತ್ರ ಖರೀದಿ ಪ್ರಕ್ರಿಯೆ ಆರಂಭಿಸಿದಲ್ಲಿ ಅವರು ಈ ಆ ಬಣ್ಣದ ಸೀರೆಯನ್ನೇ ಧರಿಸಬೇಕು. ಇನ್ನೂ ಖರೀದಿ ಪ್ರಕ್ರಿಯೆ ನಡೆಯದಿದ್ದಲ್ಲಿ ಮೆಂತೆ (ಗೋಲ್ಡನ್ ಯಲ್ಲೋ) ಬಣ್ಣದ ಸಮವಸ್ತ್ರದ ಸೀರೆ ಖರೀದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ನಗದು ವರ್ಗಾವಣೆ
ನಿಗದಿಗೊಳಿಸಿದ ಸಮವಸ್ತ್ರದ ಎರಡು ಸೀರೆಗಳ ಖರೀದಿಗೆ 800 ರೂ.ಗಳನ್ನು ಅವರವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಇಲಾಖೆಯಿಂದಲೇ ಸೀರೆಗಳನ್ನು ವಿತರಿಸಲಾಗುತ್ತಿತ್ತು.
ಸಂಘಟನೆಗಳೊಂದಿಗೆ ಚರ್ಚೆ
ಇಲಾಖೆ ವಿತರಿಸುತ್ತಿರುವ ಸೀರೆ ಗುಣಮಟ್ಟ ಚೆನ್ನಾಗಿಲ್ಲ. ಆಯ್ಕೆ ಮಾಡಿದ ಬಣ್ಣವೂ ಎಲ್ಲರಿಗೂ ಒಪ್ಪುವಂತಿಲ್ಲ. ಜಾಹೀರಾತು ಮುದ್ರಿಸಿದ ಸೀರೆ ಧರಿಸಲು ಕಾರ್ಯಕರ್ತೆಯರಿಗೆ ಮುಜುಗರವಾಗುತ್ತದೆ. ಆದ್ದರಿಂದ ಸೀರೆಗಳಲ್ಲಿ ಜಾಹೀರಾತು ಮುದ್ರಿಸಬಾರದು. ಸಮವಸ್ತ್ರದ ಸೀರೆಗಾಗಿ ಎಲ್ಲರಿಗೂ ಒಪ್ಪುವ ಬಣ್ಣ ಆಯ್ಕೆ ಮಾಡಬೇಕು. ಇಲಾಖೆಯಿಂದ ಸೀರೆ ವಿತರಿಸದೆ ಹಣವನ್ನೇ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಗಳು ಹೋರಾಟ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಘಟನೆ ಪದಾಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮುಂದಿನ ವರ್ಷದಿಂದ ರಾಜ್ಯಾದ್ಯಂತ ಏಕರೂಪ ಸಮವಸ್ತ್ರ ಜಾರಿಗೊಳಿಸಲು ಇಲಾಖೆ ಈ ವರ್ಷವೇ ಬಣ್ಣ ನಿಗದಿಗೊಳಿಸಿ ಖರೀದಿಗೆ ಹಣವನ್ನೂ ಅವರವರ ಖಾತೆಗೆ ಹಾಕಲಾಗಿದೆ.
– ವಾಸಂತಿ ಉಪ್ಪಾರ್,
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾವಣಗೆರೆ
– ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.