ಜಿಲ್ಲೆಯ ಪ್ರಥಮ ಎಂಆರ್‌ಎಫ್ ಘಟಕ ಅಕ್ಟೋಬರ್‌ನಲ್ಲಿ ಕಾರ್ಯಾರಂಭ
ತೆಂಕಎಡಪದವು ಬ್ರಿಂಡೇಲ್: 2.50 ಕೋ.ರೂ. ವೆಚ್ಚದಲ್ಲಿ ಕಾಮಗಾರಿ
Team Udayavani, Sep 20, 2022, 10:47 AM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ವೈಜ್ಞಾನಿಕ ಒಣ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣ ಘಟಕ ಮೆಟಿರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಅಕ್ಟೋಬರ್‌ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಮಂಗಳೂರು ತಾಲೂಕಿನ ತೆಂಕ ಎಡಪದವು ಬ್ರಿಂಡೇಲ್‌ನಲ್ಲಿ 2.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಂಆರ್‌ಎಫ್ ಘಟಕದ ಶೇ.90ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ. ಯಂತ್ರೋಪಕರಣ ಅಳವಡಿಕೆಗೆ ಸಂಬಂಧಿಸಿದ ಹಾಗೂ ಸಂಪರ್ಕ ರಸ್ತೆ ಕಾಮಗಾರಿ ಪ್ರಕ್ರಿಯೆ ನಡೆಯುತ್ತಿದ್ದು, ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ ಯಾಗಿ 50 ಲಕ್ಷ ರೂ. ಈಗಾಗಲೇ ಬಿಡುಗಡೆಯಾಗಿದೆ. ಯಂತ್ರೋ ಪಕರಣಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆಗಳು ನಡೆದಿವೆ. ಇದರ ಜತೆಗೆ ನಿರ್ವಹಣೆ ಸಿಬಂದಿಯ ನೇಮಕ ಪ್ರಕ್ರಿಯೆಗಳು ನಡೆಯಲಿವೆ.
ತೆಂಕ ಎಡಪದವು ಎಂಆರ್‌ಎಫ್ ಘಟಕದಲ್ಲಿ ದಿನವೊಂದಕ್ಕೆ 10 ಟನ್ ಒಣ ತ್ಯಾಜ್ಯವನ್ನು ನಿರ್ವಹಿಸಬಹುದಾಗಿದೆ. ಮಂಗಳೂರು ತಾಲೂಕಿನ ಹಾಗೂ ಬಂಟ್ವಾಳ ತಾಲೂಕಿನ ಒಟ್ಟು 51 ಗ್ರಾಮ ಪಂಚಾಯತ್ ಗಳ ಒಣ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವನ್ನು ಇಲ್ಲಿ ನಿರ್ವಹಿ ಸಲಾ ಗುತ್ತದೆ. ಅತ್ಯಾಧುನಿಕ ತಂತ್ರ ಜ್ಞಾನದ ಮೂಲಕ ಪರಿಣಿತ ಸಿಬಂದಿ ಪ್ಲಾಸ್ಟಿಕ್, ಗ್ಲಾಸ್, ಮೆಟಲ್, ಮುಂತಾದುವುಗಳನ್ನು ಯಂತ್ರಗಳನ್ನು ಬಳಸಿ ಪ್ರತ್ಯೇಕಿಸುತ್ತಾರೆ. ಬಳಿಕ ಪ್ರತ್ಯೇಕಿಸಿದ ಒಣ ತ್ಯಾಜ್ಯಗಳನ್ನು ಸಂಬಂಧಿಸಿದ ರಿಸೈಕಲಿಂಗ್ ಘಟಕಗಳಿಗೆ ರವಾನಿಸಲಾಗುತ್ತದೆ.
ಕೇಂದ್ರ ಸರಕಾರದ ಸ್ವಚ್ಚ ಭಾರತ್ ಮಿಶನ್‌ನಡಿಯಲ್ಲಿ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ, ಉಡುಪಿ, ರಾಮನಗರ, ಬಳ್ಳಾರಿ ಜಿಲ್ಲೆಗೆ ತಲಾ ಒಂದರಂತೆ ಪ್ರಾಯೋಗಿಕವಾಗಿ ಎಂಆರ್‌ಎಫ್ ಘಟಕಗಳನ್ನು ಮಂಜೂರು ಮಾಡಲಾಗಿತ್ತು.
ಇದರಲ್ಲಿ ಉಡುಪಿ ಜಿಲ್ಲೆಯಘಟಕ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದೆ. ದಕ್ಷಿಣ ಕನಡ ಜಿಲ್ಲೆಯ ಘಟಕ ಸ್ಥಳಾವಕಾಶದ ಸಮಸ್ಯೆಯಿಂದ ಅನುಷ್ಠಾನ ವಿಳಂಬವಾಗಿತ್ತು.
ಜಿಲ್ಲೆಯಲ್ಲಿ ಇತರ 3 ಮಿನಿ ಘಟಕಗಳು
ತೆಂಕ ಎಡಪದವು ಘಟಕವಲ್ಲದೆ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ, ಪುತ್ತೂರು ತಾಲೂಕಿನ ಕೆದಂಬಾಡಿ ಹಾಗೂ ಬಂಟ್ವಾಳ ತಾಲೂ ಕಿನ ನರಿಕೊಂಬುನಲ್ಲಿ ಹೊಸದಾಗಿ ಎಂಆರ್‌ಎಫ್ ಮಿನಿ ಘಟಕಗಳು ಅನುಷ್ಠಾನಗೊಳ್ಳುತ್ತಿದೆ.
ಈ ಘಟಕಗಳು ದಿನವೊಂದಕ್ಕೆ ತಲಾ 5 ಟನ್ ಒಣತ್ಯಾಜ್ಯ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಂದು ಘಟಕದ ಅಂದಾಜು ವೆಚ್ಚ 1.95 ಕೋ. ರೂ. ಆಗಿದ್ದು, ಇದರಲ್ಲಿ ತಲಾ 30 ಲಕ್ಷ ರೂ.ಅನುದಾನವನ್ನು ಜಿಲ್ಲಾ ಪಂಚಾಯತ್ ನಿಂದ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯತ್ ಗಳು ನೀಡಬೇಕಾಗುತ್ತದೆ. ಇದನ್ನು 15ನೇ ಹಣಕಾಸಿನ ಅನುದಾನದ ಕ್ರಿಯಾ ಯೋಜನೆ ತಯಾರಿಯಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣಕ್ಕೆ ಗ್ರಾ.ಪಂ.ವಂತಿಗೆ ಎಂದು ಕಾಯ್ದಿರಿಸಿ ಹೊಂದಿಸಿಕೊಳ್ಳಲಾಗುತ್ತದೆ.
ಶೇ.90 ಕಾರ್ಯ ಪೂರ್ಣ :ಮಂಗಳೂರು ತಾಲೂಕಿನ ತೆಂಕಪದವು ಎಂಆರ್‌ಎಫ್ ಘಟಕದ ಸಿವಿಲ್ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅಳವಡಿಕೆಗೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಎಲ್ಲ ಕೆಲಸಗಳನ್ನು ಪೂರ್ತಿಗೊಳಿಸಿ ಅಕ್ಟೋಬರ್‌ನಲ್ಲಿ ಘಟಕವನ್ನು ಕಾರ್ಯಾರಂಭಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ವ್ಯವಸ್ಥಿತ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದರ ಕಾಮಗಾರಿಯೂ ಪ್ರಗತಿಯಲ್ಲಿದೆ. – ಡಾ| ಕುಮಾರ್, ದ.ಕ.ಜಿ.ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.