1,320 ಮರಗಳಿಗೆ ಬೀಳಲಿದೆ ಕೊಡಲಿ; ಬ್ರಹ್ಮಾವರ-ಸೀತಾನದಿ ಚತುಷ್ಪಥ ರಸ್ತೆ ಅಭಿವೃದ್ಧಿ
Team Udayavani, Sep 20, 2022, 1:23 PM IST
ಉಡುಪಿ: ಬ್ರಹ್ಮಾವರ-ಸೀತಾನದಿ ರಸ್ತೆ ಅಭಿವೃದ್ಧಿ ಯೋಜನೆ ಭಾಗವಾಗಿ ಚೇರ್ಕಾಡಿಯಿಂದ ಕೆಳಕರ್ಜೆವರೆಗಿನ 5.5 ಕಿ. ಮೀ. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗಾಗಿ 1,320 (ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 579, ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 741 ವಿವಿಧ ಜಾತಿಯ ಹಳೆಯ ಮರಗಳು) ವಿವಿಧ ಜಾತಿಯ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ.
ಹಲವು ವರ್ಷಗಳಿಂದ ಬೇಡಿಕೆಯ ಯೋಜನೆಯಾಗಿರುವ ಈ ರಸ್ತೆ ಅಭಿವೃದ್ಧಿಗೆ (ಚತುಷ್ಪಥ ಹೆದ್ದಾರಿ) ಸರಕಾರ ಮುಂದಾಗಿದ್ದು, ರಾಜ್ಯ ಹೆದ್ದಾರಿ ಯೋಜನೆಯಡಿಯಲ್ಲಿ ಹಂತಹಂತವಾಗಿ ಕಾಮಗಾರಿಯನ್ನು ಕೈಗೊಂಡಿದೆ.
ಉಡುಪಿ ಲೋಕೋಪಯೋಗಿ ಇಲಾಖೆ ಉಪವಲಯ ನೋಡಲ್ ಏಜೆನ್ಸಿಯಾಗಿದೆ. ಕಾಮಗಾರಿ ಕಾರ್ಯಾದೇಶ, ಅನುದಾನ ಬಿಡುಗಡೆ, ಗುತ್ತಿಗೆ, ಟೆಂಡರ್ ಪ್ರಕ್ರಿಯೆ ಎಲ್ಲವೂ ಬೆಂಗಳೂರಿನಲ್ಲಿ ನಡೆಯುತ್ತದೆ. ಈಗಾಗಲೇ ಬ್ರಹ್ಮಾವರ ಪೇಟೆಯಿಂದ ಚೇರ್ಕಾಡಿ ಶಾರದಾ ಸ್ಕೂಲ್‌ವರೆಗೆ ಎರಡು ಬದಿಯಲ್ಲಿ 7 ಮೀಟರ್ (ಡಿವೈಡರ್ ಹೊರತುಪಡಿಸಿ) ಅಗಲಕ್ಕೆ ವಿಸ್ತರಿಸಲಾಗುತ್ತದೆ. ಪಿಡಬ್ಲ್ಯುಡಿ ಇಲಾಖೆ ಮಾಹಿತಿಯಂತೆ ಮುಂದಿನ ಹಂತದಲ್ಲಿ 5 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಪರಿಸರಹಾನಿ ಪ್ರಮಾಣ ಕಡಿಮೆಯಾಗಲಿ
ನಮ್ಮದು “ಸುಸ್ಥಿರ ಅಭಿವೃದ್ಧಿ’ ಮಂತ್ರ. ಅಭಿವೃದ್ಧಿ ಕೆಲಸಗಳೂ ನಡೆಯಬೇಕು, ಪರಿಸರ ಹಾನಿಯನ್ನೂ ಗರಿಷ್ಠ ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ರಸ್ತೆಯಂತಹ ಕಾಮಗಾರಿಗಳಲ್ಲಿ ಒಂದಿಷ್ಟು ಮರಗಳು ಕೊನೆಯುಸಿರೆಳೆಯುತ್ತವೆ. ಆದರೆ ನಿಯಮಾನುಸಾರ ಇದರ ಹತ್ತು ಪಟ್ಟು ಗಿಡಗಳನ್ನು ನೆಡಬೇಕೆಂದಿದೆ. ಕಡಿಯುವ ಮರಗಳಿಗೆ ಹೋಲಿಸಿದರೆ ನೆಡುವ ಮರಗಳ ಕೊಡುಗೆ ಪ್ರಕೃತ ಏನೇನೂ ಅಲ್ಲ. ಇದನ್ನಾದರೂ ಸರಿಯಾಗಿ ಪಾಲಿಸುತ್ತೇವೆಯೇ ಎಂಬುದು ಜನತೆಯನ್ನು ಸದಾ ಕಾಡುವ ಪ್ರಶ್ನೆ. ಇಷ್ಟನ್ನಾದರೂ ಪಾಲಿಸುವಂತಾಗಲಿ ಎಂದು ಹಾರೈಕೆ.
ಒಂದು ಕಿ. ಮೀ.ಗೆ 3 ಲಕ್ಷ ರೂ. ಪರಿಹಾರ: ಲೋಕೋಪಯೋಗಿ ಗುರುತಿಸಿದ ಮರಗಳನ್ನು ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಜಂಟಿ ಸಮೀಕ್ಷೆಯೂ ನಡೆದಿದೆ. ಗ್ರಾ. ಪಂ.ನಲ್ಲಿ ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಪಡೆಯಲಾಗುವುದು. ಸೆ. 29 ರಂದು ಹೆಬ್ರಿ ಆರ್‌ಎಫ್ಒ ಕಚೇರಿಯಲ್ಲಿ ಅಹವಾಲು ಸಭೆಯನ್ನು ಕರೆಯಲಾಗಿದೆ. ಸರಕಾರಿ ನಿಯಮದಂತೆ ಒಂದು ಮರ ಕಡಿದಲ್ಲಿ 10 ಗಿಡಗಳನ್ನು ನೆಡುವ ಮಾರ್ಗಸೂಚಿ ಇದೆ. ಇದನ್ನು ಅರಣ್ಯ ಇಲಾಖೆ ವ್ಯವಸ್ಥಿತವಾಗಿ ಪಾಲಿಸಲಿದೆ. ಇದರ ಪರಿಹಾರವನ್ನು ರಸ್ತೆ ಕಾಮಗಾರಿ ಕೈಗೊಳ್ಳುವ ಇಲಾಖೆಯೇ ನೀಡಬೇಕು. ಅಲ್ಲದೆ ರಸ್ತೆ ಬದಿಯಲ್ಲಿ ಗಿಡ-ಮರಗಳನ್ನು ಬೆಳೆಸುವ ಸಲುವಾಗಿ ಪ್ರತೀ ಕಿ.ಮೀ.ಗೆ 3 ಲ.ರೂ. ಪರಿಹಾರವನ್ನು ಅರಣ್ಯ ಇಲಾಖೆಗೆ ನೀಡುವ ನಿಯಮವನ್ನು ಸರಕಾರ ರೂಪಿಸಿದೆ. – ಆಶಿಶ್ ರೆಡ್ಡಿ, ಡಿಎಫ್ಒ, ಅರಣ್ಯ ಇಲಾಖೆ, ಕುಂದಾಪುರ ಉಪ ವಿಭಾಗ
ವಿದ್ಯುತ್, ನೀರು ಪೈಪ್‌ಲೈನ್ ಸ್ಥಳಾಂತರ: ಬ್ರಹ್ಮಾವರ ಸೀತಾನದಿ ರಸ್ತೆ ಅಭಿವೃದ್ಧಿ ಯೋಜನೆ ಹಂತಹಂತವಾಗಿ ನಡೆಯುತ್ತಿದೆ. ಮುಂದಿನ ಭಾಗದಲ್ಲಿ 5.5 ಕಿ. ಮೀ. ರಸ್ತೆ ಅಭಿವೃದ್ಧಿಯಾಗಲಿದೆ. ಕಾಮಗಾರಿಗೆ ಸಲುವಾಗಿ ಮರಗಳನ್ನು ತೆರವುಗೊಳಿಸಲು ಸಮೀಕ್ಷೆ ವರದಿ ಕೊಡಲಾಗಿದೆ. ಅರಣ್ಯ ಇಲಾಖೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡು ಅನುಮತಿ ನೀಡಬೇಕಿದೆ. ಈ ಮಾರ್ಗದಲ್ಲಿ ವಿದ್ಯುತ್, ಕುಡಿಯುವ ನೀರು ಪೈಪ್‌ಲೈನ್‌ಗಳು ಹಾದುಹೋಗಿದ್ದು, ಇದೆಲ್ಲ ಸಂಪೂರ್ಣ ಸ್ಥಳಾಂತರಿಸಿದ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆಯುತ್ತಿದೆ. – ಜಗದೀಶ್ ಭಟ್, ಎಇಇ, ಲೋಕೋಪಯೋಗಿ ಇಲಾಖೆ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.