ಬಸ್ ನಲ್ಲಿ ಪರ್ಸ್ ಕಳವುಗೈದ ಕಳ್ಳಿ: ಸಿಸಿ ಕೆಮಾರದಲ್ಲಿ ದೃಶ್ಯ ಸೆರೆ
Team Udayavani, Sep 20, 2022, 8:46 PM IST
ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತಿದ್ದ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕೆಯ ಪರ್ಸ್ ಅನ್ನು ಕಳ್ಳಿಯೋರ್ವಳು ಎಗರಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಪುತ್ತೂರು ತಾ.ಪಂ.ನಲ್ಲಿ ಯೋಜನಾಧಿಕಾರಿಯಾಗಿರುವ ಸುಕನ್ಯಾ ಅವರ ಪರ್ಸ್ ಕಳವು ಮಾಡಲಾಗಿದೆ. ಕಳವು ದೃಶ್ಯ ಬಸ್ ನ ಸಿಸಿ ಕೆಮಾರದಲ್ಲಿ ಸೆರೆಯಾಗಿದೆ.
ಬೆಳಗ್ಗೆ ಮಂಗಳೂರಿನಿಂದ ಮಹೇಶ್ ಖಾಸಗಿ ಬಸ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಬೊಳುವಾರು ಸಮೀಪದ ಸೇತುವೆ ಹತ್ತಿರ ಕಳ್ಳಿ ಪರ್ಸ್ ಎಗರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಐವತ್ತು ವರ್ಷದೊಳಗಿನ ಮಹಿಳೆಯು ಕಲ್ಲಡ್ಕ ಬಳಿ ಬಸ್ ಹತ್ತಿ ಸುಕನ್ಯಾ ಅವರ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಪುತ್ತೂರು ಪೇಟೆ ಸಮೀಪಿಸಿದ ಕಾರಣ ಸುಕನ್ಯಾ ಅವರು ತನ್ನ ಕೈಯಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನೊಳಗೆ ಹಾಕಿ ಇಳಿಯಲೆಂದು ಎದ್ದು ನಿಂತಿದ್ದರು. ಈ ವೇಳೆ ಕಳ್ಳಿ ಬ್ಯಾಗ್ ಗೆ ಕೈ ಹಾಕಿ ಪರ್ಸ್ ಎಗರಿಸಿದ್ದಾರೆ. ಈಕೆಯ ವರ್ತನೆ ನೋಡುವಾಗ ಮೊಬೈಲ್ ಕಳ್ಳತನಕ್ಕೆ ಯತ್ನಿಸಿ ಅದು ಸಿಗದೆ ಇದ್ದಾಗ ಕೈಗೆ ಸಿಕ್ಕ ಪರ್ಸ್ ಎಗರಿಸಿದ್ದಾಳೆ. ಈಕೆ ಕಳ್ಳತನದ ಗ್ಯಾಂಗ್ ನ ಸದಸ್ಯೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಬಸ್ ನಿಂದ ಇಳಿದ ವೇಳೆ ಸುಕನ್ಯಾ ಅವರಿಗೆ ಪರ್ಸ್ ಕಳ್ಳತನ ವಾಗಿರುವ ವಿಷಯ ಬೆಳಕಿಗೆ ಬಂದು ಬಸ್ ಅನ್ನು ಸಂಪರ್ಕಿಸಿದ್ದಾರೆ. ಬಸ್ ಸಿಸಿ ಕೆಮಾರ ಪರಿಶೀಲಿಸಿದಾಗ ಕಳ್ಳಿಯ ಕರಾಮತ್ತು ಬಯಲಾಗಿದೆ. ಪರ್ಸ್ ನಲ್ಲಿ ಐದು ಸಾವಿರ ರೂ.ನಗದು, ದಾಖಲೆ ಪತ್ರಗಳಿತ್ತು. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.