ಏಕದಿನ: ವನಿತೆಯರಿಗೆ ಸರಣಿ ಗೆಲುವಿನ ತವಕ
Team Udayavani, Sep 21, 2022, 6:15 AM IST
ಕ್ಯಾಂಟರ್‌ಬರಿ: ಇಂಗ್ಲೆಂಡ್ ನೆಲದಲ್ಲಿ 1999ರ ಬಳಿಕ ಏಕದಿನ ಸರಣಿಯನ್ನು ಗೆಲ್ಲುವ ಉಜ್ವಲ ಅವಕಾಶವೊಂದು ಭಾರತದ ವನಿತೆಯರಿಗೆ ಎದುರಾಗಿದೆ.
ಬುಧವಾರ ಕ್ಯಾಂಟರ್‌ಬರಿಯ ಸೇಂಟ್ ಲಾರೆನ್ಸ್ ಗ್ರೌಂಡ್‌ನಲ್ಲಿ ದ್ವಿತೀಯ ಮುಖಾಮುಖಿ ನಡೆಯಲಿದ್ದು, ಇದನ್ನು ಗೆದ್ದರೆ ಐತಿಹಾಸಿಕ ಸರಣಿ ಹರ್ಮನ್‌ಪ್ರೀತ್ ಕೌರ್ ಬಳಗದ್ದಾಗಲಿದೆ. 1999ರಲ್ಲಿ ಭಾರತ ಕೊನೆಯ ಸಲ ಇಂಗ್ಲೆಂಡ್ ನೆಲದಲ್ಲಿ ಸರಣಿ ಜಯಭೇರಿ ಮೊಳಗಿಸಿತ್ತು. ಅಂಜುಮ್ ಚೋಪ್ರಾ ಅವರ ಶತಕ ಹಾಗೂ ಅರ್ಧಶತಕ ಭಾರತದ 2-1 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಗೆಲುವಿನೊಂದಿಗೆ ಆರಂಭ: ಈ ಬಾರಿ ಭಾರತ ತಂಡ ಜಯದೊಂದಿಗೆ ಸರಣಿ ಆರಂಭಿಸಿದೆ. ಹೋವ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ನಮ್ಮ ವನಿತೆಯರು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದರು. ಇದೇ ಲಯದಲ್ಲಿ ಸಾಗಿದರೆ ದ್ವಿತೀಯ ಪಂದ್ಯವನ್ನೂ ವಶಪಡಿಸಿಕೊಳ್ಳಬಹುದು. ಆದರೆ ಈ ಸರಣಿ ಅಂತಿಮ ಪಂದ್ಯದಲ್ಲಿ ಇತ್ಯರ್ಥವಾದರೆ ಕಷ್ಟ. ಏಕೆಂದರೆ, ಭಾರತದ ವನಿತೆಯರು ನಿರ್ಣಾಯಕ ಮುಖಾಮುಖೀಯಲ್ಲಿ ಗೆಲುವಿನ ಮುಖ ಕಾಣುವುದೇ ಅಪರೂಪ!
39 ವರ್ಷದ ಅನುಭವಿ ವೇಗಿ ಜೂಲನ್ ಗೋಸ್ವಾಮಿಗೆ ಸ್ಮರಣೀಯ ವಿದಾಯ ಕೋರಲಿಕ್ಕಾದರೂ ಭಾರತ ಈ ಸರಣಿಯನ್ನು ಗೆಲ್ಲಲೇಬೇಕಿದೆ. ಹೋವ್ ಪಂದ್ಯದಲ್ಲಿ ಸ್ವತಃ ಜೂಲನ್ ಅವರೇ ಮುಂಚೂಣಿಯಲ್ಲಿ ನಿಂತು ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ್ದನ್ನು ಮರೆಯುವಂತಿಲ್ಲ. ಅಲ್ಲಿ ಇವರ ಬೌಲಿಂಗ್ ಫಿಗರ್ ಇಷ್ಟೊಂದು ಆಕರ್ಷಕವಾಗಿತ್ತು: 10-2-20-1.
ಚೇಸಿಂಗ್ ವೇಳೆ ಸ್ಮತಿ ಮಂಧನಾ, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್ ಇಂಗ್ಲೆಂಡ್ ಬೌಲಿಂಗ್ ಆಕ್ರಮಣಕ್ಕೆ ಸಡ್ಡು ಹೊಡೆದು ನಿಂತಿದ್ದರು. ಆದರೆ ಶಫಾಲಿ ವರ್ಮ ಕ್ಲಿಕ್ ಆಗಿರಲಿಲ್ಲ. ಈ ಡ್ಯಾಶಿಂಗ್ ಓಪನರ್ ಸಿಡಿದು ನಿಂತರೆ ಭಾರತಕ್ಕೆ ಬಂಪರ್ ಖಂಡಿತ.
ತಿರುಗಿ ಬಿದ್ದೀತು ಇಂಗ್ಲೆಂಡ್: ಇಂಗ್ಲೆಂಡ್ ಅಷ್ಟು ಸುಲಭದಲ್ಲಿ ಶರಣಾಗುವ ತಂಡವಲ್ಲ, ಅದೂ ತವರು ನೆಲದಲ್ಲಿ. ಮೂವರು ಪ್ರಮುಖ ಆಟಗಾರ್ತಿಯರ ಗೈರು ಇಂಗ್ಲೆಂಡ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ. ಮೊದಲ ಪಂದ್ಯದಲ್ಲಿ ಭಾರತ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿದೆ. ಇಂಗ್ಲೆಂಡ್ ಅಗ್ರ ಕ್ರಮಾಂಕದಲ್ಲಿ ವೈಫಲ್ಯ ಕಂಡಿತ್ತು. ಅಲೈಸ್ ಕ್ಯಾಪ್ಸಿ, ಸೋಫಿಯಾ ಡಂಕ್ಲಿ, ಡೇನಿಯಲ್ ವ್ಯಾಟ್, ಕೊನೆಯಲ್ಲಿ ಡೇವಿಡ್‌ಸನ್ ರಿಚರ್ಡ್ಸ್ ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತ್ತು. ಇವರು ಮತ್ತೆ ಅಪಾಯಕಾರಿಯಾಗಿ ಗೋಚರಿಸುವ ಎಲ್ಲ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.