ಮೊಹಾಲಿ ಮೇಲಾಟದಲ್ಲಿ ಕಾಂಗರೂ ಜಯಭೇರಿ
Team Udayavani, Sep 20, 2022, 10:47 PM IST
ಮೊಹಾಲಿ: ಇನ್ನೂರು ಪ್ಲಸ್ ಮೊತ್ತದ ದೊಡ್ಡ ಹೋರಾಟದಲ್ಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯ 4 ವಿಕೆಟ್‌ಗಳಿಂದ ಭಾರತವನ್ನು ಮಣಿಸಿ ಶುಭಾರಂಭ ಮಾಡಿದೆ.
ಮಂಗಳವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟಿಗೆ 208 ರನ್ ಪೇರಿಸಿದರೆ, ಆಸ್ಟ್ರೇಲಿಯ 19.2 ಓವರ್‌ಗಳಲ್ಲಿ 6 ವಿಕೆಟಿಗೆ 211 ರನ್ ಹೊಡೆದು ಜಯಭೇರಿ ಮೊಳಗಿಸಿತು.
ಭುವನೇಶ್ವರ್ ಅವರ ಇನ್ನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದ ಫಿಂಚ್ ಆಸೀಸ್ ಇರಾದೆಯನ್ನು ಸ್ಪಷ್ಟಪಡಿಸಿದರು. ಬಳಿಕ ಉಮೇಶ್ ಯಾದವ್ ಸತತ 4 ಬೌಂಡರಿ, ಭುವಿ ಸತತ 3 ಬೌಂಡರಿ ಬಿಟ್ಟುಕೊಟ್ಟರು. ಕ್ಯಾಮರಾನ್ ಗ್ರೀನ್ ರನ್ ಪ್ರವಾಹವನ್ನೇ ಹರಿಸತೊಡಗಿದರು. ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ ಹೋದ ಆಸ್ಟ್ರೇಲಿಯ 9.2 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 100 ರನ್ ರಾಶಿ ಹಾಕಿತು.
ಗ್ರೀನ್ 30 ಎಸೆತಗಳಿಂದ 61 ಬಾರಿಸಿದರು (8 ಬೌಂಡರಿ, 4 ಸಿಕ್ಸರ್). ಈ ವಿಕೆಟ್ ಅಕ್ಷರ್ ಪಟೇಲ್ ಕೆಡವಿದರು. ಬಳಿಕ ಉಮೇಶ್ ಯಾದವ್ ಒಂದೇ ಓವರ್‌ನಲ್ಲಿ ಸ್ಮಿತ್ ಮತ್ತು ಮ್ಯಾಕ್ಸ್‌ವೆಲ್ ವಿಕೆಟ್ ಉಡಾಯಿಸಿದರು. ಆದರೂ ಪಂದ್ಯಕ್ಕೆ ತಿರುವು ಲಭಿಸಲಿಲ್ಲ. ಮ್ಯಾಥ್ಯೂ ವೇಡ್ ತಂಡವನ್ನು ದಡ ತಲುಪಿಸುವಲ್ಲಿ ಯಶಸ್ವಿಯಾದರು. ವೇಡ್ 21 ಎಸೆತಗಳಿಂದ 45 ರನ್ ಮಾಡಿ ಅಜೇಯರಾಗಿ ಉಳಿದರು (6 ಬೌಂಡರಿ, 2 ಸಿಕ್ಸರ್).
ಪಾಂಡ್ಯ, ರಾಹುಲ್, ಸೂರ್ಯ ಸಾಹಸ :
ಭಾರತದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್. ಪಾಂಡ್ಯ ಕೊನೆಯ ಹಂತದಲ್ಲಿ ಸಿಡಿದು ನಿಂತು ಅಜೇಯ 71 ರನ್ ಹೊಡೆದರು. ಇದು ಅವರ 2ನೇ ಅರ್ಧ ಶತಕ. ಕೇವಲ 30 ಎಸೆತ ಎದುರಿಸಿದ ಪಾಂಡ್ಯ 7 ಫೋರ್ ಹಾಗೂ 5 ಸಿಕ್ಸರ್ ಬಾರಿಸಿ ತಮ್ಮ ಪವರ್ ತೋರಿದರು. ಇದರಲ್ಲಿ 3 ಸಿಕ್ಸರ್ ನಥನ್ ಎಲ್ಲಿಸ್ ಎಸೆದ ಅಂತಿಮ ಓವರ್‌ನ ಕೊನೆಯ 3 ಎಸೆತಗಳಲ್ಲಿ ಸಿಡಿಯಿತು. ಇದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು. ಪಾಂಡ್ಯ ಸಾಹಸದಿಂದಾಗಿ ಭಾರತ ಅಂತಿಮ 5 ಓವರ್‌ಗಳಲ್ಲಿ 67 ರನ್ ಸೂರೆಗೈದಿತು.
ಆರಂಭದಲ್ಲಿ ಬಿರುಸಿನ ಆಟಕ್ಕೆ ಇಳಿದವರು ಕೆ.ಎಲ್. ರಾಹುಲ್. 2 ವಿಕೆಟ್ ಬೇಗನೇ ಉರುಳಿದರೂ ಆಸೀಸ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ರಾಹುಲ್ 35 ಎಸೆತಗಳಿಂದ 55 ರನ್ ಹೊಡೆದರು. ಇದು ಅವರ 18ನೇ ಅರ್ಧ ಶತಕ. ಸಿಡಿಸಿದ್ದು 4 ಬೌಂಡರಿ, 3 ಸಿಕ್ಸರ್. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಸಿಡಿದು ನಿಂತರು. ಅವರ 46 ರನ್ ಕೇವಲ 25 ಎಸೆತಗಳಿಂದ ಬಂತು (2 ಫೋರ್, 4 ಸಿಕ್ಸರ್).
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ನಾಯಕ ರೋಹಿತ್ ಶರ್ಮ ಬಿರುಸಿನ ಆರಂಭದ ಸೂಚನೆಯಿತ್ತರು. ಕಮಿನ್ಸ್‌ಗೆ ಬೌಂಡರಿ, ಸಿಕ್ಸರ್ ರುಚಿ ತೋರಿಸಿದರು. ಆದರೆ ಇನ್ನಿಂಗ್ಸ್ ವಿಸ್ತರಿಸಲು ಸಾಧ್ಯವಾಗಲಿಲ್ಲ. ಹೇಝಲ್‌ವುಡ್ ಆಸೀಸ್‌ಗೆ ದೊಡ್ಡದೊಂದು ಬ್ರೇಕ್ ಒದಗಿಸಿದರು. ಡೀಪ್ ಸ್ಕ್ವೇರ್ ಲೆಗ್‌ನಲ್ಲಿದ್ದ ನಥನ್ ಎಲ್ಲಿಸ್ ಸೊಗಸಾದ ಕ್ಯಾಚ್ ಮೂಲಕ ಭಾರತದ ಕಪ್ತಾನನ ಆಟಕ್ಕೆ ತೆರೆ ಎಳೆದರು. ಭಾರತದ ಸ್ಕೋರ್ 21 ರನ್ ಆಗಿತ್ತು.
ಏಷ್ಯಾ ಕಪ್‌ನಲ್ಲಿ ಸೆಂಚುರಿ ಬಾರಿಸಿ ಹಳಿಯೇರಿದ್ದ ವಿರಾಟ್ ಕೊಹ್ಲಿ ಇಲ್ಲಿ ಮತ್ತೆ ವೈಫಲ್ಯ ಕಂಡರು. 7 ಎಸೆತ ಎದುರಿಸಿದ ಕೊಹ್ಲಿ ಆಟ ಎರಡೇ ರನ್ನಿಗೆ ಮುಗಿಯಿತು. ನಥನ್ ಎಲ್ಲಿಸ್ ಈ ವಿಕೆಟ್ ಹಾರಿಸಿದರು. 35 ರನ್ನಿಗೆ 2 ವಿಕೆಟ್ ಬಿತ್ತು. ಪವರ್ ಪ್ಲೇ ಅವಧಿಯಲ್ಲಿ ಭಾರತ 46 ರನ್ ಗಳಿಸಿತ್ತು. 10 ಓವರ್ ಮುಕ್ತಾಯಕ್ಕೆ ಮೊತ್ತ 86ಕ್ಕೆ ಏರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.