ಪಿಎಸ್‌ಐ ಅಕ್ರಮ: ಸದನ ರಣರಂಗ
Team Udayavani, Sep 21, 2022, 6:50 AM IST
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಆರೋಪ ಸಂಗತಿ ಮಂಗಳವಾರ ವಿಧಾನ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಮಧ್ಯೆ ಕೋಲಾಹಲ ಸೃಷ್ಟಿಸಿ ರಣರಂಗದ ವಾತಾವರಣ ನಿರ್ಮಿಸಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇರ- ನೇರವಾಗಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿ ಎರಡೂ ಪಕ್ಷದ ಸದಸ್ಯರು ವಾಕ್ಸಮರದಲ್ಲಿ ಮುಳುಗಿದರು. ಒಂದು ಹಂತದಲ್ಲಿ ಸಿಎಂ, ನಿಮ್ಮ ಸರಕಾರದ ಹಗರಣಗಳನ್ನೂ ಬಿಚ್ಚಿಡುತ್ತೇವೆ ಎಂದಾಗ, ನೀವು ಅಧಿಕಾರಕ್ಕೆ ಬಂದು 3 ವರ್ಷ ವಾಯಿತು. ಆಗಿನಿಂದ ಕಡುಬು ಬಾಯಿಗೆ ಸಿಕ್ಕಿಸಿ ಕೊಂಡಿದ್ದೀರಾ ಅಥವಾ ಕಡಲೇಕಾಯಿ ತಿನ್ನು ತ್ತಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಿಮ್ಮದು ಡಿಸ್ಟ್ರೆಕ್ಟಿವ್ ವಿಪಕ್ಷ. ನೀವೊಬ್ಬ ಗ್ರೇಟೆಸ್ಟ್ ಇವೆಂಟ್ ಮ್ಯಾನೇಜರ್ ಎಂದು ಸಿಎಂ ಬೊಮ್ಮಾಯಿ ಕುಟುಕಿದರೆ, “ನಿಮಗೆ ನನ್ನ ಮೇಲೆ ಭಯ ಇರುವುದರಿಂದ ನನ್ನನ್ನೇ ಗುರಿ ಮಾಡಿಕೊಂಡು ಮಾತನಾಡುತ್ತಿದ್ದೀರಿ. ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ಮೋರ್ ಸ್ಟ್ರಾಂಗ್ ಮೋರ್ ಎನಿಮಿ, ಲೆಸ್ ಸ್ಟ್ರಾಂಗ್ ಲೆಸ್ ಎನಿಮಿ, ನೋ ಸ್ಟ್ರಾಂಗ್ ನೋ ಎನಿಮಿ ಎಂಬಂತೆ ನೀವು ಎಷ್ಟೇ ನನ್ನ ವಿರುದ್ಧ ದಾಳಿ ಮಾಡಿ ದರೂ ಅದರಿಂದ ನನಗೆ ಮತ್ತು ಕಾಂಗ್ರೆಸ್‌ಗೆ ಲಾಭ ವಾಗ ಲಿದೆ. ನೀವೇನೇ ಮಾಡಿದರೂ ಜನರು ನಿಮ್ಮನ್ನು ನಂಬುವುದಿಲ್ಲ. ನಾನು ತಪ್ಪು ಮಾಡಿದ್ದರೆ ಅಥವಾ ನಮ್ಮ ಆಡಳಿತದ ಸಂದರ್ಭದಲ್ಲಿ ತಪ್ಪುಗಳು ಆಗಿದ್ದರೆ ತನಿಖೆ ಮಾಡಿ. ಇಂಥದ್ದಕ್ಕೆಲ್ಲ ಹೆದರುವ ಮಾತೇ ಇಲ್ಲ’ ಎಂದರು ಸಿದ್ದರಾಮಯ್ಯ.
ಮುಖ್ಯಮಂತ್ರಿ ಬೊಮ್ಮಾಯಿ :
- ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವವರು ಏಕೆ ಪ್ರಕರಣವನ್ನು ಸಿಐಡಿಗೆ ನೀಡಿ, ತನಿಖೆ ಪೂರ್ಣಗೊಳಿಸಿಲ್ಲ?
- ಕೊನೆಯ ಚುನಾವಣೆ ಎಂದು ನೀವು ಮಾತ್ರ ಮುಂದೆ ಬಂದು, ಹಲವರನ್ನು ಅಲ್ಲೇ ಬಿಟ್ಟಿದ್ದೀರಿ
- ವಿನಾಶಕಾರಿ ವಿರೋಧಪಕ್ಷ. ಇವೆಂಟ್ ಮ್ಯಾನೇಜ್ಮೆಂಟ್ ಚೆನ್ನಾಗಿ ಮಾಡು ವು ದನ್ನು ಕಲಿತಿದ್ದೀರಿ
- ಜನರ ಮುಂದೆ ಹೋಗೋಣ ಯಾರು ಸಮರ್ಥರು ಎಂಬುದನ್ನು ನಿರ್ಧರಿಸುತ್ತಾರೆ
- ನಾವು ಎಲ್ಲ ರೀತಿಯ ಚರ್ಚೆಗೂ ಸಿದ್ಧರಿದ್ದೇವೆ.
ಸಿದ್ದರಾಮಯ್ಯ :
- ನೀವೇನೇ ಮಾಡಿದರೂ ಹೆದರುವುದಿಲ್ಲ. ಇದರಿಂದ ನನಗೆ ಮತ್ತು ನಮ್ಮ ಪಕ್ಷಕ್ಕೆ ಲಾಭ
- ಯಾರ ಕುರ್ಚಿಯೂ ಶಾಶ್ವತವಲ್ಲ. ಎಲ್ಲವನ್ನೂ ಜನ ನೋಡುತ್ತಾರೆ.
- ಹಿಂದಿನ ಸರಕಾರದಲ್ಲಿ ಅಕ್ರಮ ನಡೆದಿದ್ದರೆ ಇದು ವರೆಗೆ ತನಿಖೆ ಮಾಡಿಲ್ಲ ಏಕೆ? ಕಡಲೆ ಕಾಯಿ ತಿನ್ನುತ್ತಿದ್ದೀರಾ?
- ಎಲ್ಲ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ
- ಸಂವಿಧಾನ, ಪ್ರಜಾ ಪ್ರಭುತ್ವ, ಜಾತ್ಯಾತೀತತೆ ಮೇಲೆ ನಂಬಿಕೆ ಇಲ್ಲದವರು ನೀವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.