ವೀರಭದ್ರೇಶ್ವರ ಕೋ ಆಪರೇಟಿವ್‌ಗೆ ಭಾರತೀಯ ರಿಜರ್ವ್ ಬ್ಯಾಂಕ್‌ನಿಂದ ಪ್ರಶಂಸೆ
Team Udayavani, Sep 21, 2022, 2:04 PM IST
ಚಿಂಚೋಳಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕಳೆದ 25 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಭಾರತೀಯ ರಿಜರ್ವ್ ಬ್ಯಾಂಕ್ ಪ್ರಶಂಸೆಗೆ ಪಾತ್ರವಾಗಿ “ಎ’ ಗ್ರೇಡ್ ಪಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಬಸವರಾಜ ಮಲಿ ಹೇಳಿದರು.
ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್ ಬ್ಯಾಂಕಿನ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದಿ|ವೀರೇಂದ್ರ ಪಾಟೀಲ ಈ ಬ್ಯಾಂಕ್‌ನ ಮೊದಲ ಸದಸ್ಯತ್ವ ಪಡೆದಿದ್ದರು. ಅವರು ನೀಡಿದ ಮಾರ್ಗದರ್ಶನದಲ್ಲಿ ಯಾವುದೇ ಅವ್ಯವಹಾರ ಇಲ್ಲದೇ ನಿಷ್ಠೆಯಿಂದ ಬ್ಯಾಂಕ್ ಆಡಳಿತ ಮಂಡಳಿ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶ್ರೀ ವೀರಭಧ್ರೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕೇವಲ 21ಲಕ್ಷ ರೂ.ಗಳಿಂದ ತನ್ನ ಕಾರ್ಯ ಪ್ರಾರಂಭಿಸಿ ಈಗ 7.24ಕೋಟಿ ರೂ.ವ್ಯವಹಾರ ನಡೆಸುತ್ತಿದೆ. 5.85ಕೋಟಿ ರೂ. ಸಾಲ ವ್ಯವಹಾರ ನಡೆಸುತ್ತಿದ್ದು, ಆರ್‌ಬಿಐ 1.81ಕೋಟಿ ರೂ. ಡಿಪಾಜಿಟ್ ಮಾಡಲಾಗಿದೆ ಎಂದು ವಿವರಿಸಿದರು. ಮುಖಂಡರಾದ ರೇವಣಸಿದ್ಧಪ್ಪ ಮರಪಳ್ಳಿ, ಶಾಂತವೀರ ಹೀರಾಪೂರ, ಮಲ್ಲಿಕಾರ್ಜುನ ಹಡಪದ ಬ್ಯಾಂಕಿನ ಲೆಕ್ಕಪತ್ರಗಳನ್ನು ತಿಳಿಸುವಂತೆ ಅಧ್ಯಕ್ಷರಿಗೆ ಒತ್ತಾಯಿಸಿದರು.
2021-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ವ್ಯವಸ್ಥಾಪಕ ನಾಗಶೆಟ್ಟಿ ಮನ್ನಳ್ಳಿ ಓದಿದರು. ಉಪಾಧ್ಯಕ್ಷ ಸುಭಾಷ ಸೀಳಿನ, ಬಸವಣ್ಣಪಾಟೀಲ, ನಾಗರಾಜ ಕಲಬುರಗಿ, ಜಗನ್ನಾಥರೆಡ್ಡಿ ಪೋಂಗಾ, ಶರಣಪ್ಪ ಪುಣ್ಯಶೆಟ್ಟಿ, ಮಹಮ್ಮದ್ ಯೂಸೂಫ್ ಅಲಿ, ಶರಣಪ್ಪ ಪೂಜಾರಿ, ಸುಭಾಶ್ಚಂದ್ರ ಎಂಪಳ್ಳಿ, ಮಲ್ಲೇಶ್ವರಿ ಜಾಬಶೆಟ್ಟಿ, ಶಿವಪುತ್ರಪ್ಪ ಸೀಳಿನ, ಬಸವರಾಜ ಯಾಲಾಲ್, ಜಗನ್ನಾಥ ಅಗ್ನಿಹೋತ್ರಿ ಇದ್ದರು. ನಾಗಶೆಟ್ಟಿ ನಿರೂಪಿಸಿದರು, ಸುಭಾಷ ಸೀಳಿನ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.