ಕುಂದಾಪುರ: ಮರವಂತೆ ಕಿನಾರೆಯಲ್ಲಿ ಪೈಲೆಟ್ ವೇಲ್ ಕಳೇಬರ ಪತ್ತೆ
Team Udayavani, Sep 21, 2022, 5:49 PM IST
ಕುಂದಾಪುರ: ಕೆಲವು ದಿನಗಳ ಹಿಂದೆ ಸತ್ತ ಅಪೂರ್ವ ಪೈಲೆಟ್ ವೇಲ್‌ನ ಕಳೇಬರವು ಹೆದ್ದಾರಿ ಬದಿಯ ತ್ರಾಸಿ-ಮರವಂತೆ ಕಡಲತೀರದಲ್ಲಿ ಪತ್ತೆಯಾಗಿದೆ.
ಬುಧವಾರ ಬೆಳಗ್ಗಿನಿಂದಲೇ ಕೊಳೆತು ನಾರುತ್ತಿದ್ದರೂ ಸಂಬಂಧಪಟ್ಟ ಪ್ರವಾಸೋದ್ಯಮ ಅಥವಾ ಮೀನುಗಾರಿಕೆ ಇಲಾಖೆಯವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಸ್ಥಳೀಯರೇ ಸೇರಿ ಕಡಲ ಕಿನಾರೆಯಲ್ಲಿ ಹೂತಿದ್ದರು.
ಮಂಗಳವಾರ ತಡರಾತ್ರಿ ಸುಮಾರು 500 ಕೆ.ಜಿ. ತೂಕದ ಪೈಲೆಟ್ ವೇಲ್ ಶವ ತ್ರಾಸಿ – ಮರವಂತೆ ಬೀಚಿನ ದಡಕ್ಕೆ ತೇಲಿ ಬಂದಿತ್ತು. ಈ ಮೀನಿನ ಕಳೇಬರವನ್ನು ಅರಣ್ಯ ಅಧಿಕಾರಿಗಳು ಹಾಗೂ ಮಂಗಳೂರಿನ ರೀಫಾÌಚ್ ಮರೈನ್ ಕನ್ಸರ್ವೇಶನ್ ಸಂಸ್ಥೆಯ ಅಧಿಕಾರಿಗಳು ಪರಿಶೀಲಿಸಿದ್ದು, ಅಪರೂಪದ ಪೈಲೆಟ್ ವೇಲ್ ಎನ್ನುವ ತಿಮಿಂಗಿಲದ ಪ್ರಭೇದ ಎಂದು ತಿಳಿಸಿದ್ದಾರೆ.
ಹೂತು ಹಾಕಿದ್ದ ಮೀನಿನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೀನಿನ ಶ್ವಾಸಕೋಶದಲ್ಲಿ ಗಾಳಿ ಇರದ ಕಾರಣ, ಶುಷ್ಕ ವಾತಾವರಣದ ಒತ್ತಡದಿಂದ ಸಾವನ್ನಪ್ಪಿರಬಹುದು ಎಂದು ತಿಳಿದು ಬಂದಿದೆ.
ಅರಣ್ಯಾಧಿಕಾರಿ ದಿಲೀಪ್ ಕುಮಾರ್, ರೀಫಾಚ್ ಮರೈನ್ ಕನ್ಸರ್ವೇಶನ್ ಸಂಸ್ಥೆಯ ತೇಜಸ್ವಿನಿ, ವಿರಿಲ್ ಸ್ಟೀಫನ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.