”ಸತ್ಯ” ಶೀಘ್ರದಲ್ಲೇ ಹೊರ ಬರಲಿದೆ… ಜೈಲಿನಿಂದ ಹೊರ ಬಂದ ವರ್ಷದ ಬಳಿಕ ರಾಜ್ ಕುಂದ್ರಾ
Team Udayavani, Sep 21, 2022, 7:52 PM IST
ಮುಂಬಯಿ: ಆಶ್ಲೀಲ ಚಿತ್ರ ನಿರ್ಮಾಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ (ಸೆ.21) ಒಂದು ವರ್ಷವಾಗಿದೆ. ಈ ಬಗ್ಗೆ ಟ್ವೀಟ್ ವೊಂದನ್ನು ಮಾಡಿ ರಾಜ್ ಕುಂದ್ರಾ ಮೌನ ಮುರಿದಿದ್ದಾರೆ.
ನೀಲಿ ಸಿನಿಮಾ ನಿರ್ಮಾಣ ಹಾಗೂ ಆ್ಯಪ್‍ಗಳ ಮೂಲಕ ಅವುಗಳ ಬಿಡುಗಡೆ ಆರೋಪದಡಿ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈ (2021) ತಿಂಗಳಿನಲ್ಲಿ ಮುಂಬೈ ಅಪರಾಧ ಇಲಾಖೆಯ ಪೊಲೀಸರು ಬಂಧಿಸಿದ್ದರು.
ಹಲವು ಬಾರಿ ಜಾಮೀನು ಪಡೆಯಲು ಮುಂದಾದ ಅವರಿಗೆ ಸೆ.21 (2021) ರಂದು ಮುಂಬೈ ಕೋರ್ಟ್ 50,000 ಶ್ಯೂರಿಟಿಯೊಂದಿಗೆ ಬೇಲ್ ಮಂಜೂರು ಮಾಡಿತ್ತು.
ಜೈಲಿನಿಂದ ಬಿಡುಗಡೆ ಆದ ಬಳಿಕ ರಾಜ್ ಕುಂದ್ರಾ ಎಲ್ಲೂ ಕೂಡ ಮುಖ ತೋರಿಸಿ ಕಾಣಿಸಿಕೊಂಡಿಲ್ಲ. ಎಲ್ಲಿ ಹೋದರೂ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದಾರೆ.
ಇಂದಿಗೆ ( ಸೆ.21 ರಂದು) ರಾಜ್ ಕುಂದ್ರಾ ಜೈಲಿನಿಂದ ಹೊರ ಬಂದು ಒಂದು ವರ್ಷವಾಗಿದೆ. ಇದುವರೆಗೂ ಎಲ್ಲೂ ಬಹಿರಂಗವಾಗಿ ಮಾತಾನಾಡದ ಅವರು, ಟ್ವೀಟ್ ಮೂಲಕ ವಿರೋಧಿಗಳಿಗೆ, ಟೀಕಿಸುವವರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.
“ಆರ್ಥರ್ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಇದು ನ್ಯಾಯವನ್ನು ಸಲ್ಲಿಸುವ ಸಮಯ. ಶೀಘ್ರದಲ್ಲೇ ಸತ್ಯ ಹೊರ ಬೀಳಲಿದೆ. ಎಲ್ಲರಿಗೂ ಧನ್ಯವಾದಗಳು, ವಿಶೇಷವಾಗಿ ನನ್ನನ್ನು ಬಲಪಡಿಸುತ್ತಿರುವ ಟ್ರೋಲರ್ ಗಳಿಗೆ ದೊಡ್ಡ ಧನ್ಯವಾದಗಳೆಂದು” ಹೇಳಿದ್ದಾರೆ. #enquiry #word #mediatrial #trollers ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
‘ನಿಮಗೆ ಸಂಪೂರ್ಣ ಕಥೆ ತಿಳಿದಿಲ್ಲದಿದ್ದರೆʼ ಸುಮ್ಮನಿರಿ ಎಂದು ಮಾಸ್ಕ್ ಹಾಕಿಕೊಂಡ ಫೋಟೋದ ಕೆಳೆಗೆ ಬರೆದುಕೊಂಡಿದ್ದಾರೆ.
One Year Today released from #ArthurRoad Its a matter of time Justice will be served! The truth will be out soon! Thank you well wishers and a bigger thank you to the trollers you make me stronger ? #enquiry #word #mediatrial #trollers pic.twitter.com/KVSpJoNAKo
— Raj Kundra (@TheRajKundra) September 21, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.