ರಾಸಲೀಲೆ; ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿತ
ಮಹಿಳೆಯನ್ನು ನೀಲಂ ಎಂದು ಗುರುತಿಸಲಾಗಿದ್ದು, ಪತಿ ದಿನೇಶ್ ಗೋಪಾಲ್ ಎಂಬುದಾಗಿ ವರದಿ ತಿಳಿಸಿದೆ.
Team Udayavani, Sep 22, 2022, 1:09 PM IST
ನವದೆಹಲಿ: ತನ್ನ ಪತಿ ಹೋಟೆಲ್ ಕೋಣೆಯೊಂದರಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿರುವುದನ್ನು ಕಂಡ ಪತ್ನಿ ಪಾದರಕ್ಷೆಯಿಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದ ದೆಹಲಿ ಗೇಟ್ ಸಮೀಪ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದಾವಣಗೆರೆ: ಎನ್ಐಎ ದಾಳಿ; ಪಿ.ಎಫ್.ಐ.ನ ಇಬ್ಬರು ಮುಖಂಡರು ಪೊಲೀಸ್ ವಶಕ್ಕೆ
ತಂದೆಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯವನ್ನು ಮಗಳು ಸೆರೆಹಿಡಿದಿದ್ದು,ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ. ಮಹಿಳೆಯನ್ನು ನೀಲಂ ಎಂದು ಗುರುತಿಸಲಾಗಿದ್ದು, ಪತಿ ದಿನೇಶ್ ಗೋಪಾಲ್ ಎಂಬುದಾಗಿ ವರದಿ ತಿಳಿಸಿದೆ.
ತನ್ನ ಪತಿ ದೀರ್ಘಕಾಲದಿಂದಲೂ ಇದೇ ರೀತಿ ವರ್ತಿಸುತ್ತಿರುವುದಾಗಿ ನೀಲಂ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ನಮಗೆ 16 ವರ್ಷದ ಮಗಳು ಮತ್ತು ಒಂಬತ್ತು ವರ್ಷದ ಮಗನಿದ್ದಾನೆ. ಮಕ್ಕಳಿಗೂ ಕೂಡಾ ತಂದೆಯ ಕೆಟ್ಟ ಚಾಳಿ ಬಗ್ಗೆ ತಿಳಿದಿದೆ ಎಂದು ದೂರಿದ್ದಾರೆ.
#WATCH उत्तर प्रदेश: आगरा में होटल के कमरे में दूसरी महिला के साथ पकड़े जाने पर पत्नी ने अपने पति को पीटा।
(नोट:अभद्र भाषा) pic.twitter.com/bjKLKRAFAW
— ANI_HindiNews (@AHindinews) September 21, 2022
ತಂದೆಯ ಕೆಟ್ಟ ನಡವಳಿಕೆಯಿಂದ ರೋಸಿ ಹೋಗಿರುವ ಮಗಳು ಕೂಡಾ ತಂದೆ ಎಂದು ಕರೆಯಲು ನಿರಾಕರಿಸುತ್ತಿದ್ದಾಳೆ. ಹೀಗಾಗಿ ತಂದೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಪತ್ನಿ ಮತ್ತು ಮಗಳು ಹಿಂಬಾಲಿಸಿಕೊಂಡು ಬಂದಿದ್ದು, ಹೋಟೆಲ್ ನಲ್ಲಿ ಮತ್ತೊಬ್ಬ ಮಹಿಳೆ ಜೊತೆ ತಂದೆ ಚಕ್ಕಂದವಾಡುತ್ತಿರುವ ದೃಶ್ಯವನ್ನು ಮಗಳು ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ನೀಲಂ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ನಿ ಹೋಟೆಲ್ ಕೋಣೆಯೊಳಗೆ ನುಗ್ಗಿ ಪತಿ ಹಾಗೂ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ತನ್ನನ್ನು ಕ್ಷಮಿಸಿಬಿಡು ಎಂದು ಪತಿ ಗೋಗರೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.