ದುಲೀಪ್‌ ಟ್ರೋಫಿ ಫೈನಲ್‌: ಇಂದ್ರಜಿತ್‌ ಶತಕ; ದಕ್ಷಿಣಕ್ಕೆ ಮುನ್ನಡೆ

Team Udayavani, Sep 22, 2022, 10:16 PM IST

1-asdadd

ಕೊಯಮತ್ತೂರು: ಪಶ್ಚಿಮ ವಲಯ ವಿರುದ್ಧದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಫೈನಲ್‌ನಲ್ಲಿ ಆತಿಥೇಯ ದಕ್ಷಿಣ ವಲಯ ಮಹತ್ವದ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ ಬಾಬಾ ಇಂದ್ರಜಿತ್‌ ಅವರ ಶತಕ ದಕ್ಷಿಣ ವಲಯ ಸರದಿಯ ಆಕರ್ಷಣೆ ಆಗಿತ್ತು. ಪಶ್ಚಿಮ ವಲಯದ 270 ರನ್ನುಗಳ ಮೊದಲ ಇನಿಂಗ್ಸ್‌ಗೆ ಜವಾಬು ನೀಡಿದ ದಕ್ಷಿಣ ವಲಯ, ದ್ವಿತೀಯ ದಿನದಾಟದ ಮುಕ್ತಾಯಕ್ಕೆ 7 ವಿಕೆಟ್‌ ಕಳೆದುಕೊಂಡು 318 ರನ್‌ ಗಳಿಸಿತ್ತು.

ತಂಡ ಅಗ್ರ ಕ್ರಮಾಂಕದಲ್ಲಿ ಸಣ್ಣದೊಂದು ಕುಸಿತ ಕಂಡಾಗ ಬಾಬಾ ಇಂದ್ರಜಿತ್‌ ಅಮೋಘ ಶತಕ ಬಾರಿಸಿ ರಕ್ಷಣೆ ಒದಗಿಸಿದರು. ಇಂದ್ರಜಿತ್‌ ಕೊಡುಗೆ 118 ರನ್‌. ಇದು ಕೇವಲ 125 ಎಸೆತಗಳಲ್ಲಿ ಬಂತು (14 ಬೌಂಡರಿ). ಅವರಿಗೆ ಮನೀಷ್‌ ಪಾಂಡೆ (48) ಉತ್ತಮ ಬೆಂಲವಿತ್ತರು. ಈ ಜೋಡಿಯಿಂದ 4ನೇ ವಿಕೆಟಿಗೆ 105 ರನ್‌ ಒಟ್ಟುಗೂಡಿತು. ಕರ್ನಾಟಕದ ಮತ್ತೂಬ್ಬ ಕ್ರಿಕೆಟಿಗ ಕೆ.ಗೌತಮ್‌ ಕೂಡ ಆಪತ್ಭಾಂಧವನಾಗಿ ಗೋಚರಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಅವರು 55 ಎಸೆತಗಳಿಂದ 43 ರನ್‌ ಹೊಡೆದರು (3 ಬೌಂಡರಿ, 3 ಸಿಕ್ಸರ್‌). 26 ರನ್‌ ಮಾಡಿರುವ ಟಿ. ರವಿತೇಜ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ರೋಹನ್‌ ಕುನ್ನುಮ್ಮಾಳ್‌ (31), ಮಾಯಾಂಕ್‌ ಅಗರ್ವಾಲ್‌ (9) ಮತ್ತು ನಾಯಕ ಹನುಮ ವಿಹಾರಿ (25) ವಿಕೆಟ್‌ 101 ರನ್‌ ಆಗುವಷ್ಟರಲ್ಲಿ ಬಿತ್ತು. ಅಜಿತ್‌ ಶೇs… ಮತ್ತು ಜೈದೇವ್‌ ಉನಾದ್ಕಟ್‌ ತಲಾ 3 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಪಶ್ಚಿಮ ವಲಯ-270. ದಕ್ಷಿಣ ವಲಯ-7 ವಿಕೆಟಿಗೆ 318 (ಬಾಬಾ ಇಂದ್ರಜಿತ್‌ 118, ಮನೀಷ್‌ ಪಾಂಡೆ 48, ಕೆ. ಗೌತಮ್‌ 43, ಅಜಿತ್‌ ಶೇಠ್ 51ಕ್ಕೆ 3, ಜೈದೇವ್‌ ಉನಾದ್ಕಟ್‌ 52ಕ್ಕೆ 3).

ಟಾಪ್ ನ್ಯೂಸ್

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

2-a

ಕಯಾಕಿಂಗ್‌ ಕ್ವೀನ್‌ ಸಮರಾ; ನಾಲ್ಕು ಚಿನ್ನಗಳ ಹಾರ

1-trrr

ಕರಾವಳಿ ಜಿಲ್ಲೆಗಳಲ್ಲಿ ಕರ್ನಾಟಕ ಕ್ರೀಡಾಕೂಟದ ಕಲರವ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.