ಪಿಎಫ್ಐ ವಿರುದ್ಧ ಆಪರೇಷನ್ ಮಿಡ್‌ನೈಟ್
Team Udayavani, Sep 23, 2022, 6:10 AM IST
ಹೊಸದಿಲ್ಲಿ: ಗುರುವಾರ ಮುಂಜಾನೆ 3.30ರ ಸಮಯ. ಗಾಢ ನಿದ್ರೆಯಲ್ಲಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ನಾಯಕರು ಮತ್ತು ಕಾರ್ಯಕರ್ತರಿಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ರಾಜ್ಯಗಳ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಹಾಗೂ ಪೊಲೀಸರು ದುಃಸ್ವಪ್ನವಾಗಿ ಕಾಡಿದ್ದಾರೆ. ರಾತ್ರೋ ರಾತ್ರಿ ಮನೆ ಬಾಗಿಲು ತಟ್ಟಿದ ಅಧಿಕಾರಿಗಳು, ಶಂಕಿತ ಕಾರ್ಯಕರ್ತರನ್ನು ಸೆರೆ ಹಿಡಿದು ಕರೆದೊಯ್ದಿದ್ದಾರೆ.
ಪೂರ್ವ ನಿಯೋಜಿತವಾಗಿದ್ದ “ಆಪರೇಶನ್ ಮಿಡ್‌ನೈಟ್’ ಕಾರ್ಯಾಚರಣೆಯ ಭಾಗವಾಗಿ ಎನ್‌ಐಎ ಮಹಾ ನಿರ್ದೇಶಕರಾದ ದಿನಕರ್ ಗುಪ್ತಾ, ಇ.ಡಿ ನಿರ್ದೇಶಕರಾದ ಸಂಜಯ್ ಮಿಶ್ರಾ ಮತ್ತು ರಾಜ್ಯಗಳ ಪೊಲೀಸ್ ಮುಖ್ಯಸ್ಥರು ಗುರುವಾರ ಬೆಳಗ್ಗೆ 3.30ಕ್ಕೆ ಪಿಎಫ್ಐ ಮೇಲೆ ದಾಳಿಗೆ ಆದೇಶ ಹೊರಡಿಸಿದ್ದಾರೆ. ಅದರಂತೆ ಎನ್‌ಐಎ 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಿ, ಒಟ್ಟು 45 ಕಾರ್ಯಕರ್ತರನ್ನು ಎನ್‌ಐಎ ಬಂಧಿಸಿದೆ. ಹಾಗೆಯೇ ಇ.ಡಿ. ಪೊಲೀಸ್ ಇಲಾಖೆ ಮತ್ತು ಎಟಿಎಸ್ ಕೂಡ ಪಿಐಎಫ್ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದಿವೆ. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಒಮಾ ಸಲಾಂ, ದಿಲ್ಲಿ ಮುಖ್ಯಸ್ಥ ಪರ್ವೇಜ್ ಅಹಮದ್‌ರನ್ನೂ ಬಂಧಿಸಲಾಗಿದೆ.
ಎನ್‌ಐಎ ಕೇರಳದ 39, ತಮಿಳುನಾಡಿನ 16, ಕರ್ನಾಟಕದ 12, ಆಂಧ್ರಪ್ರದೇಶದ 7, ರಾಜಸ್ಥಾನ ಮತ್ತು ಮಹಾರಾಷ್ಟ್ರದ ತಲಾ 4, ದಿಲ್ಲಿ ಮತ್ತು ಉತ್ತರ ಪ್ರದೇಶದ ತಲಾ 2, ತೆಲಂಗಾಣ, ಮಧ್ಯಪ್ರದೇಶ, ಗೋವಾ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಮಣಿಪುರದ ತಲಾ ಒಂದು ಸ್ಥಳಗಳ ಮೇಲೆ ದಾಳಿ ನಡೆಸಿದೆ. ಹಲವು ರಾಜ್ಯಗಳಲ್ಲಿ ಪಿಎಫ್ಐ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಅಂಥವರನ್ನು ಬಂಧಿಸಿ ರುವುದಾಗಿ ಎನ್‌ಐಎ ಹೇಳಿದೆ.
ಕೇರಳ ಬಂದ್‌ಗೆ ಕರೆ :
ದಾಳಿಯನ್ನು ಖಂಡಿಸಿರುವ ಕೇರಳದ ಪಿಎಫ್ಐ ನಾಯಕರು, ಶುಕ್ರವಾರ ಕೇರಳ ಬಂದ್‌ಗೆ ಕರೆ ಕೊಟ್ಟಿದ್ದಾರೆ. “ಆರ್‌ಎಸ್‌ಎಸ್ ನಿಯಂತ್ರಣದಲ್ಲಿರುವ ಸರಕಾರ ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಕೊಂಡು ನಮ್ಮ ಧ್ವನಿಯನ್ನು ಅಡಗಿಸಲು ಯತ್ನಿಸಿದೆ. ಹಾಗಾಗಿ ಸೆ.23ರಂದು ಕೇರಳವನ್ನು ಬಂದ್ ಮಾಡಿ, ನಮ್ಮ ಆಕ್ರೋಶ ಹೊರಹಾಕಲಾಗುವುದು’ ಎಂದು ಪಿಎಫ್ಐ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಥರ್ ಹೇಳಿದ್ದಾರೆ. ಈ ವಿಚಾರವಾಗಿ ಬಿಜೆಪಿ ಪ್ರತಿಕ್ರಿಯಿಸಿದ್ದು, ಬಂದ್‌ಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದೆ.
ಕೊಲ್ಲಿ ದೇಶಗಳಿಂದ ಸಂಘಟನೆಗೆ ಹಣ! :
ದಾಳಿಗೆ ಸರಕಾರ ಹಾಗೂ ಏಜೆನ್ಸಿಗಳ ಅಧಿಕಾರಿಗಳು ಹಲವು ದಿನಗಳ ತಯಾರಿ ನಡೆಸಿಕೊಂಡಿದ್ದಾರೆ. “ಪಿಎಫ್ಐಗೆ ಗಲ್ಫ್ ರಾಷ್ಟ್ರಗಳಿಂದ ಹಣದ ಹರಿವು ಬರುತ್ತಿದೆ. ಮೊದಲಿಗೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಅವರ ಕುಟುಂಬಸ್ಥರಿಗೆ ಹಣ ಬರುತ್ತಿದೆ. ಅನಂತರ ಅವರಿಂದ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈ ಹಣವನ್ನು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಸಂಘಟನೆ ಬಳಸಿಕೊಳ್ಳುತ್ತಿದೆ’ ಎಂಬ ವಿಚಾರವನ್ನು ಇತ್ತೀಚೆಗೆ ಏಜೆನ್ಸಿಗಳು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತಂದಿದ್ದವು. ಈ ಹಣ ಉಗ್ರ ಚಟುವಟಿಕೆಗಳಿಗೂ ಬಳಕೆಯಾಗುತ್ತಿವೆ. ಪಿಎಫ್ಐ ನಿರ್ದಿಷ್ಟ ಧರ್ಮದ ಜನರನ್ನು ಕೊಲ್ಲಲು ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದೆ ಎನ್ನುವ ವರದಿಯನ್ನು ಎನ್‌ಐಎ ಸೆ.19ರಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು. ಅದನ್ನು ಗಮನದಲ್ಲಿರಿಸಿಕೊಂಡು ಗೃಹ ಸಚಿವಾಲಯ, ಸೆ.19ರಂದು ಇ.ಡಿ, ಎನ್‌ಐಎ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಈ ಕಾರ್ಯಾಚರಣೆಗೆ “ಆಪರೇಷನ್ ಮಿಡ್‌ನೈಟ್’ ಎಂದು ಹೆಸರಿಡಲಾಗಿತ್ತು.
ಹಿಂಸೆಗೆ ಕುಮ್ಮಕ್ಕು ಆರೋಪ :

200 ಎನ್‌ಐಎ ಅಧಿಕಾರಿಗಳಿಂದ ಕಾರ್ಯಾಚರಣೆ :
ಈ ಕಾರ್ಯಾಚರಣೆಯಲ್ಲಿ ಏಜೆನ್ಸಿಗಳ ಸುಮಾರು 200 ಅಧಿಕಾರಿಗಳು ಪಾಲ್ಗೊಂಡಿದ್ದರು. ನಾಲ್ವರು ಐಜಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿ), 16 ಎಸ್‌ಪಿಗಳು ಕೂಡ ಅದರಲ್ಲಿದ್ದರು. ಆರು ವಿಶೇಷ ಕಂಟ್ರೋಲ್ ರೂಮ್‌ಗಳನ್ನು ರಚಿಸಿಕೊಳ್ಳಲಾಗಿತ್ತು. 200ಕ್ಕೂ ಅಧಿಕ ಪಿಎಫ್ಐ ನಾಯಕರು ಮತ್ತು ಕಾರ್ಯಕರ್ತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 150ಕ್ಕೂ ಅಧಿಕ ಮೊಬೈಲ್ ಫೋನ್‌ಗಳು, 50ಕ್ಕೂ ಅಧಿಕ ಲ್ಯಾಪ್‌ಟಾಪ್‌ಗ್ಳು ಸೇರಿ ಅನೇಕ ದಾಖಲೆಗಳು ಇದೀಗ ಅಧಿಕಾರಿಗಳ ವಶವಾಗಿವೆೆ.
ರಾಜ್ಯಗಳ ಬೆಂಬಲ :
ರಾಜ್ಯದ ಪಿಎಫ್ಐ ತಾಣಗಳ ಮೇಲೆ ದಾಳಿ ನಡೆದಿರುವ ವಿಚಾರದಲ್ಲಿ ಮಧ್ಯಪ್ರದೇಶದ ಗೃಹ ಸಚಿವರಾಗಿರುವ ನರೋತ್ತಮ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ. “ಇದೊಂದು ಅತ್ಯಂತ ಗಂಭೀರ ವಿಚಾರ. ಎನ್‌ಐಎ ದಾಳಿ ಬಗ್ಗೆ ನಮಗೆ ತಿಳಿದಿತ್ತು’ ಎಂದವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜ್ಯದ ಭಯೋತ್ಪಾದನ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ, 20 ಪಿಎಫ್ಐ ಕಾರ್ಯಕರ್ತ ರನ್ನು ಬಂಧಿಸಿದೆ.
ಅಮಿತ್ ಶಾ ಸಭೆ :
ದಾಳಿಯ ಬೆನ್ನಲ್ಲೇ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ರಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ, ಎನ್‌ಐಎ ಮಹಾ ನಿರ್ದೇಶಕರಾಗಿರುವ ದಿನಕರ್ ಗುಪ್ತಾ ಸೇರಿ ಅನೇಕ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. ಶಂಕಿತ ಉಗ್ರರು ಹಾಗೂ ಪಿಎಫ್ಐ ನಾಯಕರ ವಿರುದ್ಧ ಕ್ರಮದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿರುವುದಾಗಿ ಹೇಳಲಾಗಿದೆ.
ಕೋಮುವಾದಕ್ಕೆ ಸಹಿಷ್ಣುತೆ ಬೇಡ :
ಕೋಮುವಾದ ಎಲ್ಲಿಂದ ಯಾವುದೇ ರೂಪದಲ್ಲಿ ಬಂದರೂ ಅದನ್ನು ನಾವು ಸಹಿಸಿಕೊಳ್ಳಬಾರದು. ಕೋಮುವಾದದ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ತೋರಿಸಬೇಕು. ಎಲ್ಲ ರೀತಿಯ ಹಿಂಸಾ ಚಟುವಟಿಕೆಗಳಿಗೆ ಇದು ಅನ್ವಯ ಆಗಬೇಕು. –ರಾಹುಲ್ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.