2024ರಲ್ಲಿ ಲಾಲು-ನಿತೀಶ್ ಜೋಡಿ ನಿರ್ನಾಮ: ಬಿಹಾರದಲ್ಲಿ ಗುಡುಗಿದ ಅಮಿತ್ ಶಾ
ಕಾಂಗ್ರೆಸ್ ಮಡಿಲಲ್ಲಿ ಕೂರುತ್ತಾರೆ... ಲಾಲುಗೆ ಎಚ್ಚರಿಕೆ
Team Udayavani, Sep 23, 2022, 4:17 PM IST
ಪಾಟ್ನಾ: ”ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿಯಾಗಲು ಬಯಸಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜತೆ ಕೈ ಜೋಡಿಸಲು ಬಿಜೆಪಿ ಬೆನ್ನಿಗೆ ಚೂರಿ ಇರಿದಿದ್ದಾರೆ” ಎಂದು ಕೇಂದ್ರ ಗ್ರಹ ಸಚಿವ ಅಮಿತ್ ಶಾ ಶುಕ್ರವಾರ ಕಿಡಿ ಕಾರಿದ್ದಾರೆ.
ಬಿಹಾರದ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ್ ಪ್ರದೇಶಕ್ಕೆ ಎರಡು ದಿನಗಳ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೂರ್ಣೆಯಾದಲ್ಲಿ ‘ಜನ ಭವನ ಮಹಾಸಭಾ’ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: ನಗರ ನಕ್ಸಲರು ಈಗಲೂ ಸಕ್ರಿಯವಾಗಿದ್ದಾರೆ…ಎಚ್ಚರ ವಹಿಸಿ: ಪರಿಸರ ಖಾತೆ ಸಚಿವರಿಗೆ ಪ್ರಧಾನಿ ಮೋದಿ
ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸಖ್ಯ ಕಡಿದುಕೊಂಡು, ಆರ್ ಜೆಡಿ ಮತ್ತು ಇತರ ವಿಪಕ್ಷ ಗಳ ಬೆಂಬಲದೊಂದಿಗೆ ಮತ್ತೆ ಸಿಎಂ ಆದ ಬಳಿಕ ಇದೆ ಮೊದಲ ಬಾರಿಗೆ ಶಾ ಅವರು ಬಿಹಾರಕ್ಕೆ ಭೇಟಿ ನೀಡಿದ್ದಾರೆ.
2025ರ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಬಿಹಾರದಲ್ಲಿ ಸರಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾ, ”ನಿತೀಶ್ ಗೆ ಯಾವುದೇ ಸಿದ್ಧಾಂತವಿಲ್ಲ, ಆದ್ದರಿಂದ ಅವರು ತಮ್ಮ ಸಮಾಜವಾದಿ ಆದರ್ಶಗಳನ್ನು ತೊರೆದು ಜಾತಿ ಆಧಾರಿತ ರಾಜಕಾರಣದ ಪರವಾಗಿ ವಾಲಿದ್ದಾರೆ” ಎಂದು ಆರೋಪಿಸಿದರು.
“2014 ರಲ್ಲಿ,ಬಿಹಾರ ಸಿಎಂ ನಿತೀಶ್ ಕುಮಾರ್ ಕೇವಲ 2 ಲೋಕಸಭಾ ಸ್ಥಾನಗಳನ್ನು ಹೊಂದಿದ್ದೀರಿ, 2024 ರ ಲೋಕಸಭಾ ಚುನಾವಣೆ ಬರಲಿ, ಬಿಹಾರದ ಸಾರ್ವಜನಿಕರು ಲಾಲು-ನಿತೀಶ್ ಜೋಡಿಯನ್ನು ನಿರ್ನಾಮ ಮಾಡುತ್ತಾರೆ. 2025ರ ಚುನಾವಣೆಯಲ್ಲಿ ನಾವು ಪೂರ್ಣ ಬಹುಮತದೊಂದಿಗೆ ಇಲ್ಲಿ ಅಧಿಕಾರಕ್ಕೆ ಬರಲಿದ್ದೇವೆ” ಎಂದರು.
“ನಾವು ಸ್ವಾರ್ಥ ಮತ್ತು ಅಧಿಕಾರದ ಬದಲಿಗೆ ಸೇವೆ ಮತ್ತು ಅಭಿವೃದ್ಧಿಯ ರಾಜಕೀಯವನ್ನು ನಂಬುತ್ತೇವೆ. ಪ್ರಧಾನಿಯಾಗಲು ಬಯಸಿ, ನಿತೀಶ್ ಕುಮಾರ್ ಬೆನ್ನಿಗೆ ಚೂರಿ ಹಾಕಿದರು. ಈಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ. ನನ್ನ ಕುರ್ಚಿ ಹಾಗೇ ಉಳಿಯಬೇಕು ಎಂಬುದು ನಿತೀಶ್ ಅವರ ಏಕೈಕ ಸಿದ್ಧಾಂತ” ಎಂದರು.
ಬದಲಾಗುತ್ತಿರುವ ರಾಜಕೀಯ ಮೈತ್ರಿಗಳಿಗಾಗಿ ನಿತೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಎಚ್ಚರಿಕೆ ನೀಡಿ “ರಾಜಕೀಯ ಮೈತ್ರಿಗಳನ್ನು ಬದಲಾಯಿಸುವ ಮೂಲಕ ನಿತೀಶ್ ಪ್ರಧಾನಿಯಾಗಬಹುದೇ? ರಾಜಕೀಯಕ್ಕೆ ಬಂದಾಗಿನಿಂದಲೂ ಹಲವರಿಗೆ ದ್ರೋಹ ಬಗೆದಿದ್ದಾರೆ. ನಿತೀಶ್ ನಾಳೆ ನಿಮ್ಮನ್ನು ಬಿಟ್ಟು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತುಕೊಳ್ಳಬಹುದು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.