ಮದೀನಾದಲ್ಲಿ ಚಿನ್ನದ ಅದಿರು ಪತ್ತೆ! ಸೌದಿ ಅರೇಬಿಯಾಗೆ ಜಾಕ್‌ಪಾಟ್
Team Udayavani, Sep 24, 2022, 6:50 AM IST
ಕತಾರ್: ತೈಲ ಸಂಪತ್ತನ್ನು ಹೊಂದಿರುವ ಮರಳುಗಾಡು ದೇಶವಾದ ಸೌದಿ ಅರೇಬಿಯಾಗೆ ಮತ್ತೂಂದು ಜಾಕ್‌ಪಾಟ್ ಹೊಡೆದಿದೆ. ಇಲ್ಲಿನ ಪವಿತ್ರ ನಗರ ಮದೀನಾದಲ್ಲಿ ಭಾರೀ ಪ್ರಮಾಣದ ಚಿನ್ನ ಮತ್ತು ತಾಮ್ರದ ಅದಿರುಗಳಿರುವ ಪ್ರದೇಶಗಳು ಪತ್ತೆಯಾಗಿವೆ.
ಸೌದಿ ಪುರಾತತ್ವ ಇಲಾಖೆಯು ತನ್ನ ಟ್ವಿಟರ್ ಖಾತೆ ಮೂಲಕ ಈ ವಿಚಾರವನ್ನು ಜಗಜ್ಜಾಹೀರು ಮಾಡಿದೆ. ಮದೀನಾದ ಅಬಾ ಅಲ್-ರಹಾದ ಗಡಿಯೊಳಗೆ ಚಿನ್ನದ ಅದಿರುಗಳು ಪತ್ತೆಯಾಗಿದ್ದರೆ, ಅಲ್-ಮದೀಖ್ ಪ್ರದೇಶದ 4 ಕಡೆ ತಾಮ್ರದ ಅದಿರುಗಳು ಸಿಕ್ಕಿವೆ. ಈ ಆವಿಷ್ಕಾರವು ಹೆಚ್ಚಿನ ಪ್ರಮಾಣದ ಹೂಡಿಕೆಯ ಅವಕಾಶಗಳನ್ನು ಮುಕ್ತವಾಗಿಸಿದಂತಾಗಿದೆ ಎಂದೂ ಪುರಾತತ್ವ ಇಲಾಖೆ ಬರೆದುಕೊಂಡಿದೆ.
ನಿರೀಕ್ಷೆಗಳೇನು?
ಚಿನ್ನ-ತಾಮ್ರದ ಅದಿರುಗಳ ಆವಿಷ್ಕಾರದಿಂದಾಗಿ ಮದೀನಾಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಗಳು ಹರಿದುಬರಲಿದ್ದು, ರಾಷ್ಟ್ರೀಯ ಆರ್ಥಿಕತೆಗೂ ಶಕ್ತಿ ತುಂಬಲಿದೆ. ಅದಿರು ಇರುವ ಪ್ರದೇಶಗಳಲ್ಲಿ 533 ದಶಲಕ್ಷ ಡಾಲರ್ ಹೂಡಿಕೆ ಬರುವ ನಿರೀಕ್ಷೆಯಿದ್ದು, 4 ಸಾವಿರದಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ. ಸೌದಿ ಅರೇಬಿಯಾವು ಸುಮಾರು 5,300ರಷ್ಟು ಖನಿಜ ಪ್ರದೇಶಗಳ ತವರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.