ದೊಡ್ಡ ಸ್ಫೋಟಕ್ಕೆ ತಯಾರಾಗಿದ್ದ ಶಂಕಿತರು: ಎಸ್ಪಿ
Team Udayavani, Sep 24, 2022, 6:55 AM IST
ಶಿವಮೊಗ್ಗ: ಶಂಕಿತ ಉಗ್ರರು ದೊಡ್ಡ ಮಟ್ಟದ ಸ್ಫೋಟಕ್ಕೆ ಸಿದ್ಧರಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಂಧಿ ತರಿಂದ ಒಂದು ಕಾರು, ಎರಡು ಲ್ಯಾಪ್‌ಟಾಪ್ ಸಹಿತ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುತ್ತಿದ್ದ ಹಲವು ವಸ್ತುಗಳನ್ನು ವಶಪಡಿಸಲಾಗಿದೆ ಎಂದರು.
ಆ.15ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬವರನ್ನು ಮುಸ್ಲಿಂ ಯುವಕರು ಇರಿದು ಕೊಲ್ಲಲು ಪ್ರಯತ್ನಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿತ್ತು. ಬಂಧಿತ ಜಬೀವುಲ್ಲಾನ ವಿಚಾರಣೆಯಿಂದ ಶಾರೀಖ್ ಬಗ್ಗೆ ಮಾಹಿತಿ ಸಿಕ್ಕಿತು. ಇವನ ಜತೆ ಮಾಜ್ ಹಾಗೂ ಯಾಸೀನ್ ಸಂಬಂಧ ಇರುವುದು ಗೊತ್ತಾ
ಯಿತು. ಇವರು ಕಾನೂನು ಬಾಹಿರ ಚಟುವಟಿಕೆ ಹಾಗೂ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದು ಕಂಡುಬಂದಿದೆ. ಈವರೆಗೆ ಮಾಜ್ ಹಾಗೂ ಯಾಸೀನ್ ಮಾತ್ರ ಬಂ ಧಿಸಲಾಗಿದೆ. ಶಾರೀಖ್ ನಾಪತ್ತೆಯಾಗಿದ್ದು ಅವನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಅವನೇ ಎ1 ಆರೋಪಿಯಾಗಿದ್ದು ಅವನು ಸಿಕ್ಕರೆ ಮತ್ತಷ್ಟು ಮಾಹಿತಿ ಸಿಕ್ಕೀತುಎಂದರು.
11 ಕಡೆ ದಾಳಿ
ಈವರೆಗೆ 11 ಕಡೆ ದಾಳಿ ಮಾಡಲಾಗಿದೆ. ಬಂ ಧಿತರಿಂದ 14 ಮೊಬೈಲ್, 1 ಡಾಂಗಲ್, ಎರಡು ಲ್ಯಾಪ್‌ಟಾಪ್, ಒಂದು ಪೆನ್‌ಡ್ರೈವ್ ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಜಪ್ತಿ¤ ಮಾಡಲಾಗಿದೆ. ಸ್ಫೋಟದ ಸ್ಥಳದಲ್ಲಿ ಬಾಂಬ್ ಅವಶೇಷಗಳು ಸಿಕ್ಕಿವೆ ಎಂದರು.
ಬಾಂಬ್ ತಯಾರಿಕೆ ಮಾಹಿತಿ
ಶಂಕಿತರು ಬಾಂಬ್ ತಯಾರಿಗೆ ಬೇಕಾದ ತರಬೇತಿಯನ್ನು ಐಸಿಸ್‌ನಿಂದ ಪಡೆದಿದ್ದರು. ಅವರಿಗೆ ವಿವಿಧ ಆ್ಯಪ್‌ಗ್ಳ ಮಾಹಿತಿ ಕಳುಹಿಸಲಾಗಿತ್ತು. ಅದನ್ನು ಅವರು ಪೆನ್‌ಡ್ರೈವ್‌ನಲ್ಲಿ ಇಟ್ಟುಕೊಂಡಿದ್ದರು. ಅದನ್ನು ನೋಡಿ ಅದಕ್ಕೆ ಬೇಕಾದ ಟೈಮರ್, ರಿಲೇ ಸರ್ಕ್ಯೂಟ್ ಗಳನ್ನು ಅಮೆಜಾನ್ ಆ್ಯಪ್ ಮುಖಾಂತರ ಖರೀದಿಸಿದ್ದು, ಶಿವಮೊಗ್ಗ ದಲ್ಲಿ 9 ವೋಲ್ಟ್ನ 2 ಬ್ಯಾಟರಿ, ಸ್ವಿಚ್, ವೈರ್, ಮ್ಯಾಚ್ ಬಾಕ್ಸ್ ಹಾಗೂ ಇತರ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್ ತಯಾರು ಮಾಡಿದ್ದರು ಎಂದರು.
ಆರೋಪಿಗಳು ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್)ನ ಅ ಧಿಕೃತ ಮಾಧ್ಯಮ ವಾದ ಆಲ್-ಹಯತ್‌ನ ಟೆಲಿಗ್ರಾಂ ಚಾನೆಲ್‌ನ ಸದಸ್ಯರಾಗಿದ್ದರು ಎಂದರು.
ತಿರಂಗಾಕ್ಕೆ ಕಿಚ್ಚಿಟ್ಟಿದ್ದರು
ಆರೋಪಿಗಳು ಸ್ವಾತಂತ್ರ್ಯ ದಿನಾಚರಣೆ ಬಳಿಕ ರಾಷ್ಟ್ರಧ್ವಜವನ್ನು ಸುಟ್ಟು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಕೊಂಡಿದ್ದು, ಮೊಬೈಲ್‌ನಲ್ಲಿ ವೀಡಿಯೋಗಳು ಸಿಕ್ಕಿವೆ. ಬಾಂಬ್ ಸೊ#ಧೀಟದ ಜಾಗದಿಂದ ಸ್ವಲ್ಪ ದೂರದಲ್ಲಿ ಸುಟ್ಟಿರುವ ರಾಷ್ಟ್ರಧ್ವಜದ ತುಣುಕುಗಳು ಸಿಕ್ಕಿವೆ ಎಂದು ಎಸ್‌ಪಿ ತಿಳಿಸಿದರು.
ಮೊದಲ ಬ್ಲಾಸ್ಟ್ ಯಶಸ್ವಿಯಾಗಿತ್ತು
ಆಗಸ್ಟ್‌ನಲ್ಲಿ ಮೊದಲ ಸ್ಫೋಟ ಮಾಡಿರುವ ಮಾಹಿತಿ ಸಿಕ್ಕಿದೆ. ಕಡಿಮೆ ತೀವ್ರತೆ ಇದ್ದಿದ್ದರಿಂದ ಸ್ಥಳೀಯರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಸ್ಥಳೀಯರು ಆ ಜಾಗವನ್ನು ಕೆಮ್ಮನಗುಂಡಿ ಎಂದು ಕರೆಯುತ್ತಿದ್ದರು. ಮೊದಲ ಪ್ರಯೋಗ ಯಶಸ್ವಿಯಾದ ಕಾರಣ ದೊಡ್ಡ ಮಟ್ಟದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದರು. ಗುರುಪುರ ಹಾಗೂ ಮಂಗಳೂರಿನಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು. ಇದಕ್ಕೆ ಬೇಕಾದ ಹಣವನ್ನು ಶಾರೀಖ್ ಆನ್‌ಲೈನ್ ಮುಖಾಂತರ ಯಾಸಿನ್‌ಗೆ ಕಳುಹಿಸುತ್ತಿದ್ದ. ಹಣವನ್ನುಕ್ರಿಪ್ಟೋ ಕರೆನ್ಸಿ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು ಎಂದು ಎಸ್‌ಪಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.