ಕಮಿನ್ಸ್ ಗೆ 5 ಕೋಟಿ ನೀಡಲು ಮುಂದಾಗಿದ್ದ ರಾಜ್ಯದ ಲೀಗ್; ಐಸಿಸಿಗೆ ಭಯ ಹುಟ್ಟಿಸಿದ ವರದಿ!


Team Udayavani, Sep 24, 2022, 4:39 PM IST

pat cummins offered AUD 1 million to play in multiple inter-city T20 leagues

ಮುಂಬೈ: ಆಸ್ಟ್ರೇಲಿಯ ಟೆಸ್ಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಗೆ ಭಾರತದ ಕೆಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಭರ್ಜರಿ ಆಮಿಷವೊಡ್ಡಿವೆಯಂತೆ. ಭಾರತದ ಹಲವು ರಾಜ್ಯಗಳಲ್ಲಿ ಐಪಿಎಲ್‌ ಮಾದರಿಯಲ್ಲಿ ಟಿ20 ಲೀಗ್‌ಗಳು ನಡೆಯುತ್ತವೆ.

ಇಲ್ಲಿ ಬಂದು ಆಡಿದರೆ ನಿಮಗೆ 5.31 ಕೋಟಿ ರೂ. ನೀಡುತ್ತೇವೆಂದು ಆಮಿಷ ವೊಡ್ಡಿವೆಯಂತೆ! ಹೀಗೆಂದು ಆಸ್ಟ್ರೇಲಿಯದ ಫಾಕ್ಸ್‌ ಸ್ಪೋರ್ಟ್ಸ್ ವರದಿ ಮಾಡಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಬಿಸಿಸಿಐನ ಐಪಿಎಲ್‌, ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದೊಡ್ಡ ಹೊಡೆತವಾಗಲಿದೆ.

ಈ ಮಧ್ಯೆ ಪ್ಯಾಟ್‌ ಕಮಿನ್ಸ್‌ ಈ ಅವಕಾಶವನ್ನು ನಿರಾಕರಿಸಿದ್ದಾರಂತೆ. ದೇಶದ ಪರ ಆಡುವುದೇ ನನ್ನ ಆದ್ಯತೆ, ಹಾಗಾಗಿ ಸಿಕ್ಕಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳಲು ಹೋಗುವುದಿಲ್ಲ ಎಂದಿದ್ದಾರೆ. ಸದ್ಯಕ್ಕೆ ಈ ವಿಷಯ ಮುಗಿದಿದೆ. ಹಾಗಂತ ಮುಗಿದಿಲ್ಲ! ಕಾರಣ ಪ್ಯಾಟ್‌ ಒಪ್ಪಿಕೊಳ್ಳದಿದ್ದರೂ, ಇದೇ ಹಾದಿಯನ್ನು ಉಳಿದವರು ಹಿಡಿಯಬೇಕಂತಿಲ್ಲ.

ನಿಧಾನಕ್ಕೆ ರಾಜ್ಯ ಸಂಸ್ಥೆಗಳ ಲೀಗ್‌ಗಳಲ್ಲಿ ವಿದೇಶಿ ಕ್ರಿಕೆಟಿಗರು ಪ್ರವೇಶ ಮಾಡುವ ಸಾಧ್ಯತೆಗಳು ದೂರವಿಲ್ಲ. ಆಗ ದೊಡ್ಡದೊಡ್ಡ ಉದ್ಯಮಿಗಳೂ ರಂಗಪ್ರವೇಶ ಮಾಡಬಹುದು. ಇದೇನಾದರೂ ಮುಂದುವರಿದರೆ ವಿವಿಧ ದೇಶಗಳ ರಾಷ್ಟ್ರೀಯ ಸಂಸ್ಥೆಗಳು ಹಾಗೂ ಐಸಿಸಿಗೆ ನೇರ ಹೊಡೆತವಾಗಲಿದೆ.

ಮುಂದಿನ ದಿನಗಳಲ್ಲಿ ಉದ್ಯಮಿಗಳು ತಮ್ಮದೇ ಆದ ಲೀಗ್‌ ನಡೆಸಲೂಬಹುದು. ಈಗಾಗಲೇ ದೇಶದ ಪರ ಆಡಲು ನಿರಾಕರಿಸುತ್ತಿರುವ ಕ್ರಿಕೆಟಿಗರು ಇಲ್ಲಿಗೆ ಪ್ರವೇಶ ಮಾಡಬಹುದು. ಹಾಗಾಗಿ ಪರ್ಯಾಯ ವ್ಯವಸ್ಥೆಯೊಂದು ಎದ್ದು ನಿಲ್ಲಬಹುದು. ದೊಡ್ಡದೊಡ್ಡ ಉದ್ಯಮಿಗಳು ಕ್ರಿಕೆಟನ್ನು ಆರ್ಥಿಕ ಮೂಲವಾಗಿ ಪರಿಗಣಿಸಿದರೆ ಹೊಡೆತ ತಪ್ಪಿದ್ದಲ್ಲ! ಇದನ್ನು ತಡೆಯಲು ಈಗಾಗಲೇ ಬಿಸಿಸಿಐ, ಐಸಿಸಿಯೊಳಗೆ ಕಾರ್ಯಯೋಜನೆ ನಡೆಯುತ್ತಿದ್ದಿರಬಹುದು.

ಇದನ್ನೂ ಓದಿ:ವಾಟ್ ಎ ‘ಲವ್‌ ಲಿ’ ಸಿನ್ಮಾ; ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ವಸಿಷ್ಟ- ಸ್ಟೆಫಿ

ಈಗಾಗಲೇ ಯುಎಇಯಲ್ಲಿ ಐಎಲ್‌ ಟಿ20, ದ.ಆಫ್ರಿಕಾದಲ್ಲಿ ಎಸ್‌ಎಟಿ20 ಆರಂಭವಾಗಿವೆ. ಇವು ಪಕ್ಕಾ ಖಾಸಗಿ ಕೂಟಗಳು. ಈ ಎರಡರಲ್ಲೂ ಬಹುತೇಕ ತಂಡಗಳ ಮಾಲಿಕತ್ವ ಐಪಿಎಲ್‌ ಫ್ರಾಂಚೈಸಿಗಳದ್ದು! ಈ ಬೆಳವಣಿಗೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುವುದು ಖಚಿತ. ಹಿಂದೆ ಬಿಸಿಸಿಐಗೆ ಸೆಡ್ಡು ಹೊಡೆದು ಜೀ ಸಂಸ್ಥೆ ಐಸಿಎಲ್‌ ನಡೆಸಿತ್ತು. ಅನಂತರವೇ ಐಪಿಎಲ್‌ ಶುರುವಾಗಿದ್ದು ಎನ್ನುವುದನ್ನು ನಾವಿಲ್ಲಿ ನೆನಪಿಟ್ಟುಕೊಳ್ಳಬೇಕು.

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.