46 ವರ್ಷಗಳ ನಂತರ ಸ್ನೇಹಿತರ ಸಮ್ಮಿಲನ

ಪುನಃ ಪುನಃ ಗೆಳೆಯರ ಮಧ್ಯೆ ಮಾತಾಡಿಕೊಂಡು ಹರಟೆ ಹೊಡೆದು ಆನಂದಿಸಿದರು.

Team Udayavani, Sep 24, 2022, 6:15 PM IST

46 ವರ್ಷಗಳ ನಂತರ ಸ್ನೇಹಿತರ ಸಮ್ಮಿಲನ

ಧಾರವಾಡ: ಇವರದು ಬಿಡಿಸಲಾಗದ ಗಟ್ಟಿ ಸ್ನೇಹ. ನಾಲ್ಕು ಜನ ನ್ಯಾಯಾಧೀಶರು, ಒಬ್ಬರು ಮಾಜಿ ಸಚಿವರು, ಒಬ್ಬರು ಕಸಾಪ ಮಾಜಿ ಅಧ್ಯಕ್ಷರು, ಇಬ್ಬರು ನಿವೃತ್ತ ಐಎಎಸ್‌ ಅಧಿಕಾರಿಗಳು, ಅಷ್ಟೇ ಯಾಕೆ, ಇಂದಿನ ಕರ್ನಾಟಕದ ಲೋಕಾಯುಕ್ತರು ಕೂಡ, ಈ ಸ್ನೇಹ ತಂಡದ ಭಾಗವಾಗಿದ್ದಾರೆ!

ಹೌದು, ಬರೋಬ್ಬರಿ 46 ವರ್ಷಗಳ ನಂತರ ಒಂದೇ ಕಾಲೇಜಿನಲ್ಲಿ ಓದಿದ್ದ 75ಕ್ಕೂ ಹೆಚ್ಚು ಜನ ಸ್ನೇಹಿತರು ಒಟ್ಟಾಗಿ ಸೇರಿ, ತಾವು ಓದಿದ ಧಾರವಾಡದ ಸರ್‌ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಕ್ಯಾಂಪಸ್‌ನಲ್ಲಿ ಸುತ್ತಾಡಿದರು. ತಾವು ಕಲಿಯುವಾಗ ಕೂರುತ್ತಿದ್ದ ಜಾಗೆಗಳಲ್ಲಿ ಕುಳಿತು ಹರಟೆ ಹೊಡೆದರು, ತಾವು ಓಡಾಡಿದ ಕೆಸಿಡಿ ರಸ್ತೆಯಲ್ಲಿ ಓಡಾಡಿ ಸಂಭ್ರಮಿಸಿದರು.

1976ರಲ್ಲಿ ಸರ್‌ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯದ ವಿದ್ಯಾರ್ಥಿಳಾಗಿ ಪದವಿ ಪಡೆದುಕೊಂಡು ವಿಶಾಲ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುವಷ್ಟು ಸಾಧನೆ ಮಾಡಿದ ಈ ಗೆಳೆಯರ ಬಳಗ ಇತ್ತೀಚೆಗೆ ಧಾರವಾಡದಲ್ಲಿ ಸೇರಿ, ತಮ್ಮ ವಿದ್ಯಾರ್ಥಿ ಜೀವನದ ಸುವರ್ಣ ಕಾಲದ ನೆನಪುಗಳನ್ನು ಮೆಲುಕು ಹಾಕಿ ಖುಷಿಪಟ್ಟಿತು.

ಅಂದಿನ ಧಾರವಾಡ, ಇಂದಿನ ಧಾರವಾಡಕ್ಕೂ ಅಜಗಜಾಂತರ ವ್ಯತ್ಯಾಸವಾಗಿದ್ದು, ತಾವು ಬಸ್‌  ನಿಲ್ದಾಣದಿಂದ ನಡೆದುಕೊಂಡೇ ಕಾಲೇಜಿಗೆ ಬರುತ್ತಿದ್ದ ದಿನಗಳು, ಬುತ್ತಿಕಟ್ಟಿಕೊಂಡು ಬರುತ್ತಿದ್ದ ಹಳ್ಳಿ ಹುಡುಗರು, ಅಷ್ಟೇಯಲ್ಲ, ಬುತ್ತಿ ಹಂಚಿ ತಿನ್ನುತ್ತಿದ್ದ ಜೀವದ ಗೆಳೆಯರ ಮಧ್ಯದ ಸ್ನೇಹ ಎಲ್ಲವನ್ನು ಯಾರೂ ಇಂದಿಗೂ ಮರೆತಿಲ್ಲ ಎಂಬುದನ್ನು ಪುನಃ ಪುನಃ ಗೆಳೆಯರ ಮಧ್ಯೆ ಮಾತಾಡಿಕೊಂಡು ಹರಟೆ ಹೊಡೆದು ಆನಂದಿಸಿದರು.

ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಕಲಿಸಿದ ಗುರುಗಳಾದ ಪ್ರೊ|ಎಸ್‌.ಎಸ್‌. ಆಲೂರ, ಪ್ರೊ| ಎ.ಆರ್‌. ದೇಸಾಯಿ, ಪ್ರೊ| ಎಸ್‌.ಸಿ. ದಳವಾಯಿ ಹಾಗೂ ನಿವೃತ್ತ ಅಧೀಕ್ಷಕರಾಗಿರುವ ಬಿ.ಜಿ. ಪಾಟೀಲ ಅವರನ್ನು ಖಾಸಗಿ ಹೋಟೆಲ್‌ ವೊಂದರಲ್ಲಿ ಕಾರ್ಯಕ್ರಮ ನಡೆಸಿ ಗೌರವಿಸಿದರು.

ನಿವೃತ್ತ ನ್ಯಾಯಾಧೀಶರಾದ ರವೀಂದ್ರ ವೈದ್ಯ, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಜಿ. ಹೆಗಡೆ, ಮಾಜಿ ಸಚಿವರಾದ ಎ.ಬಿ. ಪಾಟೀಲ್‌, ಎನ್‌. ಎಸ್‌. ದೇವರವರ, ವಿ.ಕೆ. ಪಾಟೀಲ, ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ, ಜಿ.ಎಂ. ವಾಲಿ, ಜಿ.ಆರ್‌. ತಲಗೇರಿ ಸೇರಿದಂತೆ ಇದೇ ಸಾಲಿನ 70ಕ್ಕೂ ಹೆಚ್ಚು ಜನ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಾವು ಕಲಿತ ಕಾಲೇಜಿಗೆ ಏನಾದರೂ ಕೊಡುಗೆ ಕೊಡಬೇಕು ಎಂದು ಸ್ನೇಹ ಸಮ್ಮಿಲನದ ದಿನ ನಾವೆಲ್ಲರೂ ನಿರ್ಣಯ ತೆಗೆದುಕೊಂಡಿದ್ದೇವೆ. ಅದೇ ಪ್ರಕಾರ ಸಹಾಯ ಮಾಡುತ್ತೇವೆ.
ಸಿ.ವಿ. ಕೋಟಿ,
1976ನೇ ಸಾಲಿನ ಕಾನೂನು ಕಾಲೇಜು
ವಿದ್ಯಾರ್ಥಿ, ಹಿರಿಯ ವಕೀಲರು

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.