ಬೇರೆ ಗ್ರಾಮದ ಕೂಲಿ ಕಾರ್ಮಿಕರಿಗೆ ಮಣೆ-ಕಾರ್ಮಿಕರ ಆಕ್ರೋಶ
Team Udayavani, Sep 25, 2022, 9:18 AM IST
ಚಿಂಚೋಳಿ: ತಾಲೂಕಿನ ಹೂಡದಳ್ಳಿ ಮತ್ತು ಗಾರಂಪಳ್ಳಿ ಗ್ರಾಮದ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಮೂಲ ನಿವಾಸಿ ಬಹುಜನ ಮಹಿಳಾ ಸಂಘದ ಮುಖಂಡರು ಪಟ್ಟಣದ ಚಂದಾಪೂರ ನಗರದಲ್ಲಿ ಶಾಸಕ ಡಾ|ಅವಿನಾಶ ಜಾಧವ ಅವರಿಗೆ ಘೇರಾವ್ ಹಾಕಿ ಮನವಿ ಪತ್ರ ಸಲ್ಲಿಸಿದರು.
ಹೂಡದಳ್ಳಿ, ಗಾರಂಪಳ್ಳಿ ಗ್ರಾಮಗಳಲ್ಲಿ ಮಹಿಳಾ ಮತ್ತು ಪುರುಷ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರೂ ಕೆಲಸ ನೀಡುತ್ತಿಲ್ಲ. ಸ್ವ-ಗ್ರಾಮದ ಕೂಲಿಕಾರ್ಮಿಕರನ್ನು ಕಡೆಗಾಣಿಸಿ ಬೇರೆ ಗ್ರಾಮದ ಕೂಲಿಕಾರ್ಮಿಕರನ್ನು ಟಂಟಂ ವಾಹನದಲ್ಲಿ ಕರೆತಂದು ಕೆಲಸ ಮಾಡಿಸುತ್ತಿದ್ದಾರೆ. ಗಾರಂಪಳ್ಳಿ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಸಾಮಾನ್ಯ ಜನರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಸಂಘದ ಮುಖಂಡ ಮಾರುತಿ ಗಂಜಗಿರಿ ಶಾಸಕರ ಗಮನಕ್ಕೆ ತಂದರು.
ಮುಖಂಡ ಪೂಜಾರಿ ಗೋಪಾಲ ಮಾತನಾಡಿ, ಗಾರಂಪಳ್ಳಿ ಪಂಚಾಯಿತಿಯಲ್ಲಿ ಪತ್ತಿ ಹೆಸರಿನಲ್ಲಿ ಪತಿಯಂದಿರ ಹಸ್ತಕ್ಷೇಪ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಲ್ಲದವರು ಪತ್ನಿ ಹೆಸರಿನಲ್ಲಿಯೇ ದಬ್ಟಾಳಿಕೆ ನಡೆಸುತ್ತಿದ್ದಾರೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಆ. 1ರಂದು ತಾಪಂ ಎದುರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ತಾ.ಪಂ ಅಧಿಕಾರಿಗಳು ನೀಡಿದ ಭರವಸೆ ಇನ್ನುವರೆಗೆ ಇಡೇರಿಸಿಲ್ಲವೆಂದು ಶಾಸಕರಿಗೆ ತಿಳಿಸಿದರು.
ಶಾಸಕ ಡಾ|ಅವಿನಾಶ ಜಾಧವ ಪ್ರತಿಭಟನೆಕಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ನಿಮ್ಮ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುತ್ತೇನೆಂದು ತಿಳಿಸಿದರು. ಮುಖಂಡರಾದ ಹರ್ಷವರ್ಧನ, ರಜಿಯಾ ಬೇಗಂ, ಸಿದ್ಧು ರಂಗನೂರ, ಮೌನೇಶ ಮುಸ್ತಾರಿ, ಗೋಪಾಲ ಪೂಜಾರಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.