ಲೇಡಿ ರೂಮ್‌ಮೇಟ್ ಬೇಕಾಗಿದ್ದಾರೆ… ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿದ ವ್ಯಕ್ತಿ! ವೈರಲ್
ರೂಮ್‌ಮೇಟ್‌ಗಳಾಗಿ ಬರುವವರು ಈ ಕಂಡೀಷನ್ಸ್‌ಗಳನ್ನು ಪಾಲಿಸಬೇಕು.
Team Udayavani, Sep 25, 2022, 1:14 PM IST
ಅಮೆರಿಕ : ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಕೆಲಸ ಖಾಲಿ ಇದೆ, ಪಿಜಿ ಖಾಲಿ ಇದೆ, ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಜಾಹೀರಾತು ನೋಡಿ ನೆಟ್ಟಿಗರೇ ದಂಗಾಗಿದ್ದಾರೆ.
ಇದನ್ನೂ ಓದಿ : ಅತಿಯಾದ ಸ್ಲೆಡ್ಜಿಂಗ್; ಯಶಸ್ವಿ ಜೈಸ್ವಾಲ್’ರನ್ನು ಮೈದಾನದಿಂದ ಹೊರಗೆ ಕಳುಹಿಸಿದ ರಹಾನೆ| VIDEO
ಹೌದು, ಅಮೆರಿಕದ ಡೆಡ್ರಾಯಿಟ್ ಎಂಬ ಪ್ರದೇಶದ ವ್ಯಕ್ತಿಯೊಬ್ಬ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಆತನ ಜೊತೆ ವಾಸಿಸಲು ಲೇಡಿ ರೂಮ್‌ಮೇಟ್‌ಗಳು ಬೇಕು ಎಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೊಸ್ಟ್ ಹಾಕಿದ್ದಾನೆ. ಇವಿಷ್ಟೇ ಅಲ್ಲದೇ, ಕೆಲವೊಂದು ಷರತ್ತುಗಳನ್ನು ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್‌ಗಳನ್ನು ಹಾಕಿದ್ದಾರೆ.
ಷರತ್ತಿನಲ್ಲಿ ಏನಿದೆ :
ಅಂದ ಹಾಗೆ ಈ ಪೋಸ್ಟ್ ಹಾಕಿರುವ ವ್ಯಕ್ತಿಗೆ ಸುಮಾರು 45 ವರ್ಷ ಈ ವ್ಯಕ್ತಿ ತನ್ನ ರೂಮ್‌ಮೇಟ್‌ಗಳಾಗಿ ಬರುವವರಿಗೆ ಕೆಲವೊಂದು ಷರತ್ತುಗಳನ್ನು ಹಾಕಿದ್ದು, ಅವುಗಳನ್ನು ಪಾಲಿಸುವವರು ಮಾತ್ರ ಬರಬಹುದು ಎಂದು ಜಾಹೀರಾತಿನಲ್ಲಿ ಹಾಕಿದ್ದಾನೆ. ಆತನ ರೂಮ್‌ಮೇಟ್‌ಗಳಾಗಿ ಬರುವವರು 18 ರಿಂದ 25 ವರ್ಷದವರಾಗಿರಬೇಕು ಜೊತೆಗೆ ನೋಡಲು ಸುಂದರವಾಗಿಬೇಕೆಂದು ಬರೆದಿದ್ದಾನೆ.
ಯುವತಿಯ ಬಾಯ್ ಫ್ರೆಂಡ್ ಮನೆಗೆ ಬರುವಂತಿಲ್ಲ!
ಮನೆಗೆ ಬರುವ ಯುವತಿಗೆ ಒಳ್ಳೆಯ ಗುಣಗಳನ್ನು ಹೊಂದಿರಬೇಕು, ಮನೆಯನ್ನು ಸ್ವಚ್ಛಗೊಳಿಸಬೇಕು, ಅಡುಗೆ ಮಾಡಲು ಬರಬೇಕು. ಅಲ್ಲದೇ ಆಕೆ ಸಿಗರೇಟ್ ಸೇದಬಾರದು, ಮದ್ಯವ್ಯಸನಿಯಾಗಿರಬಾರದು, ನಾಯಿ ಸಾಕಬಾರದು ಮುಖ್ಯವಾಗಿ ಆಕೆಯ ಬಾಯ್ ಫ್ರೆಂಡ್ಸ್ ಯಾರೂ ಮನೆಗೆ ಬರಬಾರದು ಎಂದು ಷರತ್ತು ಹಾಕಿದ್ದಾನೆ.
ಬೆಡ್‌ರೂಮ್‌ನಲ್ಲಿ ಮಲಗಲು ಅವಕಾಶ!
ಈ ವ್ಯಕ್ತಿ ಸಿಂಗಲ್ ಬೆಡ್‌ರೂಮ್ ಫ್ಲಾಟ್‌ನಲ್ಲಿ ವಾಸವಾಗಿರುವುದರಿಂದ ಆತನ ರೂಮ್‌ಮೇಟ್ ಆಗಿರುವವರು ಹಾಲ್‌ನಲ್ಲಿರುವ ಸೋಫಾದಲ್ಲಿ ಮಲಗಬಹುಂತೆ. ಆಲ್ಲದೇ ಆಕೆ ಆತನ ಬೆಡ್‌ರೂಂನಲ್ಲೂ ಬಂದು ಮಲಗಲು ಅವಕಾಶವಿದೆ ಎಂದು ಹೇಳಿಕೊಂಡಿದ್ದಾನೆ.
ಈ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಈತನ ಕಂಡೀಷನ್ಸ್‌ಗಳನ್ನು ಒಪ್ಪಿಕೊಂಡು ಲೇಡಿರೂಮ್‌ಮೇಟ್‌ಗಳು ಸಿಕ್ಕಿದ್ದಾರೆಯೇ, ಇಲ್ಲವೇ ಎನ್ನುವ ವಿಚಾರ ತಿಳಿದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.