ಧಾರವಾಡ: ನವದುರ್ಗೆಯರ ಆರಾಧನೆಗೆ ಭಕ್ತ ಗಣ ಸಜ್ಜು

ಈ ವರ್ಷ ಒಂದೇ ಜಂಬೂಸವಾರಿ ಉತ್ಸವ: ಹುಣಸಿಮರದ

Team Udayavani, Sep 25, 2022, 3:28 PM IST

12

ಧಾರವಾಡ: ಪ್ರತಿವರ್ಷ ಪ್ರತ್ಯೇಕ ದಿನಗಳಲ್ಲಿ ಎರಡು ಜಂಬೂ ಸವಾರಿ ಉತ್ಸವ ನಡೆಯುತ್ತಿತ್ತು. ಈಗ ಎರಡು ಬಣ ಒಗ್ಗೂಡಿ ಒಂದೇ ಉತ್ಸವ ಮಾಡಲು ಅಣಿಯಾಗಿವೆ ಎಂದು ಧಾರವಾಡ ದಸರಾ ಜಂಬೂಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 4ರಂದು ಜಂಬೂ ಸವಾರಿ ನಡೆಯಲಿದ್ದು, ಅಂದು ಮಧ್ಯಾಹ್ನ 2:30 ಗಂಟೆಗೆ ಗಾಂಧಿನಗರದ ಬಂಡೆಮ್ಮ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ಮಸಲಗಾರ ಓಣಿ, ಮಾರುತಿ ದೇವಸ್ಥಾನ, ರಾಯರಮಠ, ರಾಮ ಮಂದಿರ, ಹೊಸಯಲ್ಲಾಪುರ, ಗಾಂಧಿಚೌಕ್‌ ಮಾರ್ಗವಾಗಿ ಕಲಾಭವನದಲ್ಲಿ ಸಂಪನ್ನಗೊಳ್ಳಲಿದೆ.

ಐದು ಆನೆ, ಕುದುರೆಗಳು, ಕಲಾತಂಡ, ದಸರಾ ಬೊಂಬೆ ಕುಣಿತ, ಕರಡಿ ಮಜಲು, ಜಗ್ಗಲಿಗೆ ಮೇಳ ಸೇರಿ 25 ಸ್ಥಳೀಯ, 10 ಹೊರಜಿಲ್ಲೆ ಒಟ್ಟು 35 ಕಲಾತಂಡಗಳು ಮೆರಗು ತುಂಬಲಿವೆ. ಅ.5ರಂದು ರಾತ್ರಿ 9:30 ಗಂಟೆಗೆ ದೇವಿಮೂರ್ತಿ ವಿಸರ್ಜನೆ ಜರುಗಲಿದೆ ಎಂದರು.

26ರಿಂದ 5ರವರೆಗೆ ವಿವಿಧ ಕಾರ್ಯಕ್ರಮ: ದಸರಾ ಪ್ರಯುಕ್ತ ಸೆ.26ರಿಂದ ಅ. 5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 26ರಂದು ಸಂಜೆ 6:30 ಗಂಟೆಗೆ ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ತರುವ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ, ಮಂಜುಳಾ ಮುಂಜಿ ಮೂರ್ತಿ ಸೇವೆ ನೀಡಲಿದ್ದು, ನಂತರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸೆ.27ರಿಂದ ಸೆ. 29ರವರೆಗೆ ನಿತ್ಯ ಬೆಳಗ್ಗೆ 8 ಗಂಟೆಗೆ ದೇವಿಮೂರ್ತಿಗೆ ಭಕ್ತರಿಂದ ವಿಶೇಷ ಪೂಜೆ, ಸಂಜೆ 4 ಗಂಟೆಗೆ ವಿವಿಧ ಭಜನಾ ಮಂಡಳ ಸದಸ್ಯರಿಂದ ಭಜನೆ, ದೇವಿಯ ಪುರಾಣ ಪಠಣದ ನಂತರ ಪ್ರಸಾದ ವಿತರಣೆ ನಡೆಯಲಿದೆ.

ಸೆ.30ರಂದು ಬೆಳಗ್ಗೆ 8 ಗಂಟೆಗೆ ಭಕ್ತರಿಂದ ಪೂಜೆ, ಬೆಳಗ್ಗೆ 9 ಗಂಟೆಗೆ ಉತ್ಸವ ಸಮಿತಿ ಸದಸ್ಯರು ಹಾಗೂ ಗಾಂಧಿನಗರ ಯುವಜನ ಸಂಘದಿಂದ ದುರ್ಗಾ ಹೋಮ ನಡೆಯಲಿದೆ. ಸಂಜೆ 4 ಗಂಟೆಗೆ ಸಾಯಿ ಲಲಿತ ಭಜನಾ ಮಂಡಳಿಯಿಂದ ಕುಂಕುಮಾರ್ಚನೆ ಜರುಗಲಿದೆ ಎಂದು ತಿಳಿಸಿದರು.

ಸೆ.30ರಂದು ಯುವ ಜನೋತ್ಸವ-ಮಕ್ಕಳ ವಿವಿಧ ಸ್ಪರ್ಧೆಗೆ ಕವಿಸಂನಲ್ಲಿ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಾಗುತ್ತದೆ. ಅ.1ರಂದು ಸಂಗೀತ, ಹಾಸ್ಯ, ನೃತ್ಯ ನಡೆಯಲಿದೆ. ಬಾಡಿ ಬಿಲ್ಡರ್ಸ್‌ ಅಸೋಸಿಯೇಶನ್‌, ದಸರಾ ಉತ್ಸವ ಸಮಿತಿ ಸಹಯೋಗದಲ್ಲಿ ಅ.2ರ ಸಂಜೆ 4 ಗಂಟೆಗೆ “ದೇಹದಾರ್ಡ್ಯ ಸ್ಪರ್ಧೆ: ದಸರಾಶ್ರೀ-2020′ ನಡೆಯಲಿದೆ. ವಿಜೇತರಿಗೆ ಪ್ರಥಮ 7,500 ರೂ., ದ್ವಿತೀಯ 3,000 ರೂ. ಬಹುಮಾನ-ಟ್ರೋಫಿ ನೀಡಲಾಗುತ್ತದೆ.

ಇನ್ನು ಯುವಜನೋತ್ಸವ-ಮಕ್ಕಳ ಸ್ಪರ್ಧೆಗೆ ಭಾಗವಹಿಸಲು ಮೊ:7411131983 ಮತ್ತು 8050421364, ಮಹಿಳಾ ಸ್ಪರ್ಧೆಗೆ ಪಾಲ್ಗೊಳ್ಳಲು ಮೊ:9449049380 ಮತ್ತು 9448861500, ದೇಹದಾರ್ಡ್ಯ ಸ್ಪರ್ಧೆಗೆ ಭಾಗವಹಿಸುವವರು ಮೊ:9141028473ಕ್ಕೆ ಸಂಪರ್ಕಿಸಬಹುದು ಎಂದರು.

ಅ.1 ರಿಂದ 3ರವರೆಗೆ ಲಿಂಗಾಯತ ಭವನದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಅ.1 ರಂಗೋಲಿ ಮತ್ತು ಅಡುಗೆ ಸ್ಪರ್ಧೆ, ಅ.2 ನಾಡಗೀತೆ ಸಮೂಹ ಗಾಯನ ಮತ್ತು ದೇವಿ ನೃತ್ಯ ಸ್ಪರ್ಧೆ, ಅ.3ರಂದು ಫ್ಯಾಷನ್‌ ಶೋ, ಕಿರು ಆಟೋಟà ಸ್ಪರ್ಧೆ ಜರುಗಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜನಪದ ಗೀತೆ, ಕರೋಕೆ, ಪದ್ಮಶ್ರೀ ಪಂ| ವೆಂಕಟೇಶಕುಮಾರ ಸಂಗೀತೋತ್ಸವ, ಝೀ ಕನ್ನಡ ಕಾಮಿಡಿ ಕಿಲಾಡಿಗಳ ಹಾಸ್ಯೋತ್ಸವ, ನೃತ್ಯ, ವಿವಿಧ ಕಾರ್ಯಕ್ರಮಗಳು ದಸರಾ ಉತ್ಸವಕ್ಕೆ ಮೆರಗು ತುಂಬಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುಗೌಡ ಪಾಟೀಲ, ನಾರಾಯಣ ಕೋರ್ಪಡೆ, ವಿಲಾಸ ತಿಬೇಲಿ, ಯಶವಂತರಾವ್‌, ಭೀಮಣ್ಣ ಮಲ್ಲಿಗವಾಡ ಇದ್ದರು.

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.