ಪಶ್ಚಿಮ ವಲಯಕ್ಕೆ ದುಲೀಪ್ ಪಟ್ಟ; ದಕ್ಷಿಣ ವಲಯ ವಿರುದ್ಧ 294 ರನ್ ಗೆಲುವು
Team Udayavani, Sep 25, 2022, 11:00 PM IST
ಕೊಯಮತ್ತೂರು: ಇನ್ನಿಂಗ್ಸ್ ಮುನ್ನಡೆ ಹೊಂದಿದ್ದ ಆತಿಥೇಯ ದಕ್ಷಿಣ ವಲಯವನ್ನು 294 ರನ್ನುಗಳ ಭಾರೀ ಅಂತರದಿಂದ ಕೆಡವಿದ ಪಶ್ಚಿಮ ವಲಯ “ದುಲೀಪ್ ಟ್ರೋಫಿ’ ಪಟ್ಟ ಅಲಂಕರಿಸಿದೆ.
ಗೆಲುವಿಗೆ 529 ರನ್ನುಗಳ ಕಠಿನ ಗುರಿ ಪಡೆದಿದ್ದ ದಕ್ಷಿಣ ವಲಯ, ಪಂದ್ಯದ ಅಂತಿಮ ದಿನ ಭೋಜನ ವಿರಾಮದೊಳಗಾಗಿ 234ಕ್ಕೆ ಸರ್ವಪತನ ಕಂಡಿತು. 4ನೇ ದಿನದಾಟದ ಅಂತ್ಯಕ್ಕೆ 154 ರನ್ನಿಗೆ 6 ವಿಕೆಟ್ ಕಳೆದುಕೊಂಡಾಗಲೇ ದಕ್ಷಿಣ ವಲಯದ ಸೋಲು ಖಾತ್ರಿಯಾಗಿತ್ತು. ಸ್ಟಾರ್ ಆಟಗಾರರೆಲ್ಲ ಪಶ್ಚಿಮದ ಬೌಲಿಂಗ್ ದಾಳಿಗೆ ಸಿಲುಕಿ ಪೆವಿಲಿಯನ್ ಸೇರಿ ಕೊಂಡಿದ್ದರು. ನಾಟೌಟ್ ಬ್ಯಾಟರ್‌ಗಳಾದ ಟಿ. ರವಿತೇಜ ಮತ್ತು ಆರ್. ಸಾಯಿ ಕಿಶೋರ್ ಎರಡು ಗಂಟೆಗಳ ಕಾಲ ಹೋರಾಟ ಸಂಘಟಿಸಿ ಕ್ರೀಸ್ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರು. ಈ ಜೋಡಿಯಿಂದ 157 ಎಸೆತಗಳಿಂದ 57 ರನ್ ಒಟ್ಟುಗೂಡಿತು. ಸ್ಕೋರ್ 203ಕ್ಕೆ ಏರಿದಾಗ ಮಧ್ಯಮ ವೇಗಿ ಚಿಂತನ್ ಗಜ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಬಳಿಕ ರವಿತೇಜ ಮತ್ತು ಕೃಷ್ಣಪ್ಪ ಗೌತಮ್ 8 ಓವರ್‌ಗಳ ತನಕ ಪಶ್ಚಿಮದ ದಾಳಿಯನ್ನು ತಡೆದು ನಿಂತರು. ಇವರು ದ್ವಿತೀಯ ಅವಧಿಗೆ ಪಂದ್ಯವನ್ನು ವಿಸ್ತರಿಸುವ ನಿರೀಕ್ಷೆ ಮೂಡಿಸಿದರು. ಆದರೆ ಇದರಲ್ಲಿ ಯಶಸ್ಸು ಕಾಣಲಿಲ್ಲ. ಸ್ಕೋರ್ 226ಕ್ಕೆ ಏರಿದಾಗ ಶಮ್ಸ್ ಮುಲಾನಿ ದೊಡ್ಡದೊಂದು ಬ್ರೇಕ್ ಒದಗಿಸಿದರು. ಕ್ರೀಸ್ ಆಕ್ರಮಿಸಿಕೊಂಡಿದ್ದ ರವಿತೇಜ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ರವಿತೇಜ 97 ಎಸೆತ ಎದುರಿಸಿ 53 ರನ್ ಹೊಡೆದರು (3 ಬೌಂಡರಿ, 1 ಸಿಕ್ಸರ್). ಬಾಸಿಲ್ ಥಂಪಿ ಖಾತೆ ತೆರೆಯದೆ ವಾಪಸಾದರು. ಕೆ. ಗೌತಮ್ ವಿಕೆಟ್ ಕಿತ್ತ ತನುಷ್ ಕೋಟ್ಯಾನ್ ಪಶ್ಚಿಮ ವಲಯದ ಜಯಭೇರಿ ಮೊಳಗಿಸಿದರು. ಗೌತಮ್ ಗಳಿಕೆ 28 ಎಸೆತಗಳಿಂದ 17 ರನ್ (3 ಬೌಂಡರಿ).
51ಕ್ಕೆ 4 ವಿಕೆಟ್ ಕಿತ್ತ ಶಮ್ಸ್ ಮುಲಾನಿ ಪಶ್ಚಿಮ ವಲಯದ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. 93 ರನ್ ಮಾಡಿದ ಕೇರಳದ ಓಪನರ್ ರೋಹನ್ ಕುನ್ನುಮ್ಮಾಳ್ ದಕ್ಷಿಣ ವಲಯದ ದ್ವಿತೀಯ ಸರದಿಯ ಟಾಪ್ ಸ್ಕೋರರ್. ಅಮೋಘ ದ್ವಿಶತಕ ಬಾರಿಸಿ ಪಶ್ಚಿಮ ವಲಯವನ್ನು ಹಳಿ ಏರಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ದುಲೀಪ್ ಟ್ರೋಫಿ ಪಂದ್ಯಾವಳಿ ಪ್ರಸಕ್ತ ಋತುವಿನಿಂದ ವಲಯ ಮಾದರಿಗೆ ಮರಳಿತ್ತು. ಕಳೆದ ಕೆಲವು ವರ್ಷಗಳಿಂದ 3 ತಂಡಗಳ ನಡುವೆ ಈ ಪಂದ್ಯಾವಳಿ ನಡೆಯುತ್ತಿತ್ತು.
ಸಂಕ್ಷಿಪ್ತ ಸ್ಕೋರ್: ಪಶ್ಚಿಮ ವಲಯ-270 ಮತ್ತು 4 ವಿಕೆಟಿಗೆ 585 ಡಿಕ್ಲೇರ್. ದಕ್ಷಿಣ ವಲಯ-327 ಮತ್ತು 234 (ರೋಹನ್ ಕುನ್ನುಮ್ಮಾಳ್ 93, ಟಿ. ರವಿತೇಜ 53, ಕೆ. ಗೌತಮ್ 17, ಶಮ್ಸ್ ಮುಲಾನಿ 51ಕ್ಕೆ 4, ಜೈದೇವ್ ಉನಾದ್ಕತ್ 28ಕ್ಕೆ 2, ಅಜಿತ್ ಶೇs… 29ಕ್ಕೆ 2).
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್.
ಸರಣಿಶ್ರೇಷ್ಠ: ಜೈದೇವ್ ಉನಾದ್ಕತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.