ರೆಪೋ ದರ ಮತ್ತೆ 50 ಬಿಪಿಎಸ್ ಹೆಚ್ಚಳ?
Team Udayavani, Sep 26, 2022, 6:20 AM IST
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸತತ ನಾಲ್ಕನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂಬುದಾಗಿ ಆರ್ಥಿಕ ತಜ್ಞರು ಹೇಳಿದ್ದಾರೆ.
ಆರ್‌ಬಿಐಯ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆ ಬುಧವಾರ ಆರಂಭವಾಗಲಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆಯ ನಿರ್ಣಯಗಳನ್ನು ಶುಕ್ರವಾರ ಪ್ರಕಟಿಸುವರು. ಮೇ ತಿಂಗಳಿನಿಂದ ಈಚೆಗೆ ಆರ್‌ಬಿಐ ರೆಪೋ ದರಗಳನ್ನು 140 ಮೂಲಾಂಶ (ಬಿಪಿಎಸ್)ಗಳಷ್ಟು ಹೆಚ್ಚಿಸಿದೆ, ಈ ಬಾರಿ ಮತ್ತೆ 50 ಮೂಲಾಂಶಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರೆಪೋ ದರವನ್ನು ಮೇ ತಿಂಗಳಿನಲ್ಲಿ 40 ಬಿಪಿಎಸ್ ಹೆಚ್ಚಿಸ ಲಾಗಿದ್ದರೆ, ಜೂನ್ ಮತ್ತು ಆಗಸ್ಟ್‌ನಲ್ಲಿ ತಲಾ 50 ಬಿಪಿಎಸ್ ಏರಿಸಲಾಗಿತ್ತು. ಪ್ರಸ್ತುತ ರೆಪೋ ದರ ಶೇ. 5.4ರಲ್ಲಿದೆ. ಏರುಗತಿಯಲ್ಲಿರುವ ಹಣ ದುಬ್ಬರ ವನ್ನು ಮಣಿಸಲು ಆರ್‌ಬಿಐ ಈ ಕ್ರಮ ತೆಗೆದುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.