ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್
ಈ ಬಾರಿ ಈ ಸಂಖ್ಯೆ 50 ಸಾವಿರದ ಗಟಿ ದಾಡಿಸಬೇಕೆನ್ನುವ ಗುರಿ ಇದೆ.
Team Udayavani, Sep 26, 2022, 6:11 PM IST
ಮಸ್ಕಿ: ವ್ಯಾಜ್ಯಗಳ ಸರಾಸರಿ ಅಂಕಿ-ಸಂಖ್ಯೆ, ಮಸ್ಕಿಯಿಂದ ನೆರೆಯ ಜೆಎಂಎಫ್‌ಸಿ ಕೋರ್ಟ್ ಗಳಿಗೆ ಇರುವ ಅಂತರ ಸೇರಿ ಎಲ್ಲ ರೀತಿಯ ಅಂಶಗಳ ಪರಿಶೀಲನೆ ಆಧಾರದ ಮೇಲೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್ ತುರ್ತು ಅಗತ್ಯವಿದೆ. ರಾಜ್ಯ ಹೈಕೋರ್ಟ್ ನಿರ್ದೇಶನದ ಮೇರೆಗೆ ತಾತ್ಕಾಲಿಕ ಕೋರ್ಟ್ ಕಚೇರಿ ಆರಂಭಕ್ಕೆ ಬೇಕಿರುವ ಸೌಲಭ್ಯ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಧೀಶ ಮಾರುತಿ ಬಗಾಡೆ ಹೇಳಿದರು.
ಮಸ್ಕಿಗೆ ಪ್ರತ್ಯೇಕ ಕೋರ್ಟ್ ಸ್ಥಾಪನೆ ಬೇಡಿಕೆ ಹಿನ್ನೆಲೆಯಲ್ಲಿ ರವಿವಾರ ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆ ಕಚೇರಿ ಕಟ್ಟಡ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಪಿಎಂಸಿ ಕಟ್ಟಡ ಮತ್ತು ಖಾಸಗಿ ಕಟ್ಟಡ ವೀಕ್ಷಿಸಲಾಗಿದೆ. ಎಪಿಎಂಸಿ ಕಟ್ಟಡದಲ್ಲಿ ತಾತ್ಕಾಲಿಕ ಕಟ್ಟಡ ಆರಂಭಿಸಲು ಸೂಕ್ತ ವ್ಯವಸ್ಥೆ ಇದೆ.
ಆದರೆ ಕಟ್ಟಡ ಹಳೆಯದಾಗಿದ್ದು ಕೆಲವೆಡೆ ಶಿಥಿಲಾವಸ್ಥೆಯಲ್ಲಿದೆ. ಈ ಕಟ್ಟಡ ನವೀಕರಣಕ್ಕೆ 50 ಲಕ್ಷ ರೂ. ಅಗತ್ಯವಿದೆ ಎಂದು ಪಿಡಬ್ಲ್ಯುಡಿ ಎಂಜಿನಿಯರ್ ಹೇಳಿದ್ದು, ಇಷ್ಟು ಅನುದಾನ ಎಲ್ಲಿ ಹೊಂದಾಣಿಕೆ ಮಾಡಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ.
ಈಗಿರುವ ಪರಿಸ್ಥಿತಿ ಕುರಿತು ನಾನು ವರದಿ ಸಲ್ಲಿಸುತ್ತೇನೆ. ಕಟ್ಟಡ ರಿಪೇರಿ ಸೇರಿ ಕೋರ್ಟ್‌ಗೆ ಬೇಕಿರುವ ಎಲ್ಲ ಸೌಲಭ್ಯ ಅಳವಡಿಸುವುದಕ್ಕೆ ಕನಿಷ್ಟ ಜನವರಿ ತಿಂಗಳವರೆಗಾದರೂ ಸಮಯ ಬೇಕಾಗುತ್ತದೆ. ಎಲ್ಲ ವ್ಯವಸ್ಥೆ ಆದರೆ ಹೊಸ ವರ್ಷಕ್ಕೆ ಮಸ್ಕಿಗೆ ಪ್ರತ್ಯೇಕ ಕೋರ್ಟ್ ಸಿಗಲಿದೆ ಎಂದು ವಿವರಿಸಿದರು.
ಲೋಕ ಅದಾಲತ್: ಕ್ರಿಮಿನಲ್-ಸಿವಿಲ್ ಕೇಸ್ ಗಳು ಮಾತ್ರವಲ್ಲದೇ ಕಂದಾಯಕ್ಕೆ ಸಂಬಂಧಿಸಿದ, ಪೊಲೀಸ್ ಇಲಾಖೆಯಲ್ಲಿ ದಾಖಲಾದ ಕೆಲವು ಸಣ್ಣಪುಟ್ಟ ಕೇಸ್‌ಗಳ ಇತ್ಯರ್ಥಕ್ಕೂ ಲೋಕ ಅದಾಲತ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ನ.11 ಮತ್ತು 12ರಂದು ದೇಶಾದ್ಯಂತ ಲೋಕ ಅದಾಲತ್ ಆಯೋಜಿಸಲಾಗಿದೆ. ಕಳೆದ ಬಾರಿ ರಾಯಚೂರು ಜಿಲ್ಲೆಯಲ್ಲಿ 25 ಸಾವಿರ ಕೇಸ್ ಅದಾಲತ್‌ನಲ್ಲಿ ಇತ್ಯರ್ಥ ಮಾಡಲಾಗಿದ್ದು, ಈ ಬಾರಿ ಈ ಸಂಖ್ಯೆ 50 ಸಾವಿರದ ಗಟಿ ದಾಡಿಸಬೇಕೆನ್ನುವ ಗುರಿ ಇದೆ.
ಟ್ಯಾಕ್ಸ್ ಕೇಸ್‌ಗಳು, ಪೋತಿವಿರಾಸತ್, ಉತ್ತರ ಜೀವಿತ ಪ್ರಮಾಣಪತ್ರ, ತಹಶೀಲ್ದಾರ್ ಹಂತದಲ್ಲೇ ದಾಖಲಾಗಿ ಇತ್ಯರ್ಥವಾಗದೇ ಬಾಕಿ ಉಳಿದ ಪ್ರಕರಣ, ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಇತ್ಯರ್ಥವಾಗದೇ ಉಳಿದ ಎಲ್ಲ ಪ್ರಕರಣ ಈ ಬಾರಿಯ ಮೆಗಾ ಲೋಕ ಅದಾಲತ್‌ನಲ್ಲಿ ಪರಿಹಾರಕ್ಕೆ ಅವಕಾಶವಿದೆ ಎಂದು ಹೇಳಿದರು.
ಪರಿಶೀಲನೆ: ಇದಕ್ಕೂ ಮುನ್ನ ಎಪಿಎಂಸಿ ಉಪ ಮಾರುಕಟ್ಟೆ ಕಟ್ಟಡ, ಖಾಸಗಿ ಕಟ್ಟಡಗಳನ್ನು ತಾತ್ಕಾಲಿಕ ಕೋರ್ಟ್ ಕಚೇರಿ ಆರಂಭಕ್ಕೆ ಸೂಕ್ತವೇ ಎನ್ನುವ ಕುರಿತು ಪರಿಶೀಲನೆ ನಡೆಸಲಾಯಿತು. ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥ ದಯಾನಂದ, ಲಿಂಗಸುಗೂರು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, ನ್ಯಾಯಾಧೀಶರಾದ ವಿನಾಯಕ ಮಾಯಣ್ಣವರ, ಶಿವಕುಮಾರ ದೇಶಮುಖ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಶೀಲ್ದಾರ್ ಕವಿತಾ ಆರ್., ವಕೀಲರಾದ ಈಶಪ್ಪ ದೇಶಾಯಿ, ಬಸವರಾಜ ಯತ್ನಟ್ಟಿ, ನಬೀಶೆಡ್ಮಿ ಸೇರಿದಂತೆ ಇತರರು ಇದ್ದರು.
ಸಿಂಧನೂರು, ಮಾನ್ವಿ, ಲಿಂಗಸುಗೂರು ತಾಲೂಕಿನ ಹಳ್ಳಿಗಳ ವಿಭಜನೆಯಿಂದ ಹೊಸದಾಗಿ ಉದಯಿಸಿದ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್ ಅಗತ್ಯವಿದೆ. ಇಲ್ಲಿನ
ವಕೀಲರು ಸೇರಿ ಹಲವರು ಈ ಬಗ್ಗೆ ಬೇಡಿಕೆ ಇಟ್ಟಿದ್ದು, ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧಿಧೀಶರು, ಆಡಳಿತಾತ್ಮಕ ನ್ಯಾಯಾಧೀಶರು ಮಸ್ಕಿಯಲ್ಲಿ ಸದ್ಯ ತಾತ್ಕಾಲಿಕ ವಾಜ್ಯ ನಿರ್ವಹಣೆಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ಕೇಳಿದ್ದಾರೆ. ಇದರನ್ವಯ ಇಲ್ಲಿನ ಮೂಲ ಸೌಕರ್ಯ ಪರಿಶೀಲಿಸಲಾಗಿದೆ.
ಮಾರುತಿ ಬಗಾಡೆ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.