ನವರಾತ್ರಿ; ಮನೆಯಲ್ಲೇ ಕೇವಲ 5 ನಿಮಿಷದಲ್ಲಿ ಟ್ರೆಂಡಿ ಹೇರ್ ಸ್ಟೈಲ್ ಮಾಡಿಕೊಳ್ಳಿ …
ಇಲ್ಲಿದೆ ಸುಲಭ ವಿಧಾನಗಳು
ಶ್ವೇತಾ.ಎಂ, Sep 27, 2022, 5:40 PM IST
ನಿಮ್ಮ ಕೇಶ ವಿನ್ಯಾಸವು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಮುಖ ಮತ್ತು ಕೂದಲಿನ ವಿನ್ಯಾಸದ ಪ್ರಕಾರ, ಯಾವ ಕೇಶ ವಿನ್ಯಾಸವು ನಮಗೆ ಸರಿ ಹೊಂದುತ್ತದೆ ಎಂಬುದನ್ನು ನೋಡಿ ನಾವು ಹೇರ್ ಸ್ಟೈಲ್ ಮಾಡಿಕೊಳ್ಳುತ್ತೇವೆ. ಈಗಾಗಲೇ ನವರಾತ್ರಿ ಸಂಭ್ರಮ ಆರಂಭವಾಗಿದೆ. ಪ್ರತಿದಿನ ಒಂದಲ್ಲಾ ಒಂದು ಕಾರ್ಯಕ್ರಮಗಳಿರುತ್ತದೆ. ಅದರಲ್ಲೂ 9 ದಿನವೂ ವಿವಿಧ ಬಣ್ಣದ ಉಡುಗೆ ಧರಿಸಿ ಹಬ್ಬ ಮಾಡುವವರಾಗಿದ್ದರೆ, ದಿನವೂ ಸುಂದರವಾಗಿ ರೆಡಿಯಾಗಬೇಕಾಗುತ್ತದೆ. ಚೆಂದದ ಸೀರೆ ಅಥವಾ ಬಟ್ಟೆ ಹಾಕಿ, ಮೇಕಪ್ ಮಾಡಿಕೊಂಡ ಮೇಲೆ , ಹೇರ್ ಸ್ಟೈಲ್ ಕೂಡ ಚೆನ್ನಾಗಿರಬೇಕು ಅಲ್ವಾ? ನಮಗೆ ಸೂಕ್ತವಾಗುವ ಹೇರ್ ಸ್ಟೈಲ್ ಮಾಡಿಕೊಂಡಿಲ್ಲ ಎಂದರೆ ನಾವು ಎಷ್ಟು ರೆಡಿಯಾದರೂ ಪ್ರಯೋಜನ ಇಲ್ಲದಂತೆ.
ಹಬ್ಬದ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ಇರುವುದರಿಂದ ಹೆಚ್ಚು ಹೊತ್ತು ಕುಳಿತು ಹೇರ್‌ಸ್ಟೈಲ್ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಕೇವಲ 5 ನಿಮಿಷದಲ್ಲಿ ಸೂಪರ್ ಟ್ರೆಂಡಿ ಹೇರ್ ಸ್ಟೈಲ್ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಕೋಳ್ಳೋಣ…
5 ನಿಮಿಷದಲ್ಲಿ ಚೆಂದದ ಹೇರ್ ಸ್ಟೈಲ್ ಮಾಡಿ;
ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಿಂಪಲ್ ಆಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿ ಮೊದಲು 2 ರಿಂದ ಮೂರು 3 ಹೇರ್ ಪಿನ್ ತೆಗೆದುಕೊಂಡು, ಬಫ್ ಅನ್ನು ಕೂದಲಿಗೆ ಹಾಕಿ. ನಂತರ ಲೆಫ್ಟ್ ಹಾಗೂ ರೈಟ್ ಸೈಡ್ನಲ್ಲಿ ಬಾಚಿಕೊಂಡು ಅದನ್ನು ನೀಟಾಗಿ ಕೂರಿಸಿ ಹೇರ್ ಪಿನ್ ಹಾಕಿ.
ನಿಮಗೆ ಫ್ರೆಂಟ್ ಹೇರ್ ಬೇಕು ಅಂದರೆ ಬಿಡಬಹುದು. ಇಲ್ಲದಿದ್ದಲ್ಲಿ ಹಾಗೆಯೇ ಹಾಕಬಹುದು. ಇದು ನಿಮಗೆ ಫ್ರೊಫೆಷನಲ್ ಲುಕ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೊಂದು ಬಹಳ ಸಿಂಪಲ್ ಹೇರ್ ಸ್ಟೈಲ್ ಆಗಿದ್ದು, ಸಮಯ ಕೂಡ ಹೆಚ್ಚು ಬೇಕಿಲ್ಲ. ಮುಖ್ಯವಾಗಿ ಈ ಹೇರ್ ಸ್ಟೈಲ್ ನಿಮಗೆ ಗೌನ್ ಧರಿಸಿದಾಗ ಸೂಟ್ ಆಗುತ್ತೆ, ಆದರೆ ಸೀರೆಯ ಮೇಲೆ ಸೂಪರ್ ಲುಕ್ ನೀಡುತ್ತದೆ.
ಜಿಗ್ ಜ್ಯಾಗ್ ಹೇರ್ ಸ್ಟೈಲ್ ಹಬ್ಬಕ್ಕೆ ಸೂಟ್ ಆಗುತ್ತೆ:
ಮತ್ತೊಂದು ಸುಲಭವಾದ ಮತ್ತು ಟ್ರೆಂಡಿ ಹೇರ್ ಸ್ಟೈಲ್ ಎಂದರೆ ಜಿಗ್ ಜ್ಯಾಗ್ ಹೇರ್ ಸ್ಟೈಲ್. ಇದು ನೋಡಿದಾಗ ಸ್ವಲ್ಪ ಕಷ್ಟ ಎನಿಸಬಹುದು, ಆದರೆ ಇದನ್ನು ಮಾಡಿಕೊಳ್ಳುವುದು ಬಹಳ ಸುಲಭ, ಕೇವಲ 3 ನಿಮಿಷದಲ್ಲಿ ಇದನ್ನು ಮಾಡಬಹುದು. ಆದರೆ ನಿಮಗೆ ಹೇರ್ ಸ್ಟೈಲ್ ಮಾಡಿಕೊಂಡು ಅಭ್ಯಾಸವಿಲ್ಲದಿದ್ದರೆ, ಸ್ವಲ್ಪ ಕಷ್ಟವಾಗಬಹುದು. ಮೊದಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಸಿಕ್ಕು ಇಲ್ಲದಂತೆ ನೋಡಿಕೊಳ್ಳಿ.
ನಂತರ ಮುಂದಿನ ಸ್ವಲ್ಪ ಕೂದಲನ್ನು ತೆಗೆದುಕೊಂಡು ಹಿಂದೆ ಹಾಕಿ ಹೇರ್ ಪಿನ್ ಹಾಕಿ. ನಂತರ ಹಿಂದಿನ ಸ್ವಲ್ಪ ಕೂದಲನ್ನು ಮುಂದೆ ಹಾಕಿ. ಹೀಗೆ ಒಂದು ಮುಂದೆ, ಇನ್ನೊಂದು ಹಿಂದೆ ಜಿಗ್ ಜ್ಯಾಗ್ ರೀತಿ ಹಾಕಿ. ನಂತರ ಮುಂದೆ ಉಳಿದಿರುವ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.
ಬಳಿಕ ಕೂದಲನ್ನು ಒಂದು ಸೈಡ್ಗೆ ಹಾಕಿ ನೀಟಾಗಿ ಪಿನ್ ಮಾಡಿ ಸಾಕು. ಈ ಲುಕ್ ನಿಮ್ಮ ಸೀರೆ, ಚೂಡಿದಾರ ಹೀಗೆ ಎಲ್ಲಾ ಬಟ್ಟೆಗೂ ಸೂಪರ್ ಆಗಿ ಸೂಟ್ ಆಗುತ್ತದೆ. ನಿಮ್ಮ ಕೂದಲು ಸುರುಳಿ ಇದ್ದಲ್ಲಿ ಸ್ವಲ್ಪ ಹೇರ್ ಸ್ಟ್ರೈಟನಿಂಗ್ ಮಾಡಿಕೊಳ್ಳುವುದು ಉತ್ತಮ.
ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಹೇರ್ ಸ್ಟೈಲ್:
ನಿಮ್ಮ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿದ್ದರೆ ಈ ಕೇಶ ವಿನ್ಯಾಸ ನಿಮಗೆ ಸೂಪರ್ ಆಗಿ ಹೊಂದುತ್ತದೆ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಿಲ್ಲ. ಜಸ್ಟ್ ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್ ಹಾಕಿದರೆ ಮುಗೀತು. ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಹೇರ್‌ಸ್ಟೈಲ್ ಸಿದ್ಧವಾಗುತ್ತದೆ.
ಹೂಪ್ಡ್ ಲೋ ಬನ್ ಹೇರ್ ಸ್ಟೈಲ್:
ಈ ಹೇರ್‌ಸ್ಟೈಲ್ ಸಾಂಪ್ರದಾಯಿಕ ಬಿಗಿಯಾದ ಬನ್‌ಗೆ ಸವಾಲು ನೀಡುವ ಹಾಗೂ ಅತ್ಯಂತ ಸುಲಭವಾಗಿ ಈ ಕೇಶ ವಿನ್ಯಾಸ ಮಾಡಿಕೊಳ್ಳಬಹುದು. ಈ ಹೂಪ್ಡ್ ಲೋ ಬನ್ ಹೇರ್‌ಸ್ಟೈಲ್ ಬಹಳ ಸಮಯದವರೆಗೆ ತುಂಬಾ ನೀಟಾಗಿ ಇರುತ್ತದೆ ಮತ್ತು ಬಿಸಿಲಿನ ಕಾಲದ ಕಾರ್ಯಕ್ರಮಗಳಿಗೆ ಇದು ಹೇಳಿ ಮಾಡಿಸಿದ ಕೇಶ ವಿನ್ಯಾಸವಾಗಿದೆ.
*ಶ್ವೇತಾ.ಮುಂಡ್ರುಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Parliment: ವಕ್ಫ್ ಜೆಪಿಸಿ ಕಾಲಾವಧಿ ಹೆಚ್ಚಳಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬೆಂಬಲ
Parliment: ವಯನಾಡ್ ಲೋಕಸಭಾ ಸದಸ್ಯೆಯಾಗಿ ಇಂದು ಪ್ರಿಯಾಂಕಾ ಶಪಥ ಸಾಧ್ಯತೆ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದೆ: ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.