ಮೊಬೈಲ್ ಚಂದಾದಾರರು; ಜಿಯೋ-ಏರ್‌ಟೆಲ್ ನಡುವೆ ಸ್ಪರ್ಧೆ
Team Udayavani, Sep 29, 2022, 7:45 AM IST
ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ದಾಪುಗಾಲಿಡುತ್ತಿರುವಂತೆಯೇ ಟೆಲಿಕಾಂ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳಾಗುತ್ತಿವೆ. ವರ್ಷಗಳ ಹಿಂದೆ ಅಂತರ್ಜಾಲದ ಸಂಪರ್ಕ ಜನಸಾಮಾನ್ಯರ ಪಾಲಿಗಂತೂ ಕನಸಿನ ಮಾತಾಗಿತ್ತು. ಇದೀಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್‌ಗಳು ರಾರಾಜಿಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ದೇಶದೆಲ್ಲೆಡೆ 4ಜಿ ಬಳಕೆ ವ್ಯಾಪಕವಾಗಿದ್ದು ಮುಂದಿನ ಮಾಸಾಂತ್ಯಕ್ಕೆ ದೇಶದ ಆಯ್ದ ನಗರಗಳಲ್ಲಿ 5ಜಿ ಸೇವೆ ಆರಂಭಿಸಲು ಕೆಲವು ಟೆಲಿಕಾಂ ಕಂಪೆನಿಗಳು ಭರದ ಸಿದ್ಧತೆಯಲ್ಲಿ ತೊಡಗಿವೆ.
ಈ ಭರಾಟೆಯ ನಡುವೆಯೇ ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜ ಕಂಪೆನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು ದೇಶದ ಟೆಲಿಕಾಂ ವಲಯದ ಮೇಲೆ ಅಧಿಪತ್ಯ ಸ್ಥಾಪಿಸಲು ಜಿದ್ದಾಜಿದ್ದಿಗಿಳಿದಿವೆ. ಸದ್ಯ ದೇಶದಲ್ಲಿ ಜಿಯೋ ಮತ್ತು ಏರ್‌ಟೆಲ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ರಿಲಯನ್ಸ್ ಜಿಯೋ ಪ್ರಾಬಲ್ಯ ಮೆರೆದಿದೆ.
ಟ್ರಾಯ್ ವರದಿ
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ…) ಪ್ರಕಾರ, ಜುಲೈಯಲ್ಲಿ ಜಿಯೋ ತನ್ನ ನೆಟ್‌ವರ್ಕ್‌ಗೆ 29.4 ಲಕ್ಷ ಹೊಸ ಬಳಕೆದಾರರನ್ನು ಸೇರ್ಪಡೆಗೊಳಿಸಿದೆ.
ಇದರೊಂದಿಗೆ ಜಿಯೋ ನೆಟ್‌ವರ್ಕ್ ಬಳಕೆದಾರರ ಸಂಖ್ಯೆ 41.59 ಕೋಟಿಗೆ ಏರಿಕೆಯಾಗಿದೆ.
ಇದೇ ವೇಳೆ ಏರ್‌ಟೆಲ್ 5.1 ಲಕ್ಷ ಹೊಸ ಬಳಕೆದಾರರನ್ನು ಸೇರ್ಪಡೆ ಗೊಳಿಸಿದ್ದು ಈಗ ಇದರ ಒಟ್ಟಾರೆ ಚಂದಾದಾರರ ಸಂಖ್ಯೆ 36.34 ಕೋಟಿಗೆ ಏರಿದೆ. ಅದೇ ಸಮಯದಲ್ಲಿ, ವೊಡಾಫೋನ್ ಐಡಿಯಾದ ಬಳಕೆದಾರರ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಜುಲೈಯಲ್ಲಿ 15.4 ಲಕ್ಷ ಬಳಕೆದಾರರು ವೊಡಾಫೋನ್-ಐಡಿಯಾ ಕಂಪೆನಿಗೆ ಗುಡ್‌ಬೈ ಹೇಳಿದ್ದಾರೆ. ಇದರೊಂದಿಗೆ ಕಂಪೆನಿಯ ಒಟ್ಟು ಚಂದಾದಾರರ ಸಂಖ್ಯೆ 25.51 ಕೋಟಿಗೆ ಇಳಿಕೆಯಾಗಿದೆ.
114.8 ಕೋಟಿ ಬಳಕೆದಾರರು
ವರದಿಗಳ ಪ್ರಕಾರ, ಜುಲೈ ತಿಂಗಳಲ್ಲಿ ದೇಶದಲ್ಲಿ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಶೇ. 0.06ರಷ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದಲ್ಲಿ ಸುಮಾರು 114.8 ಕೋಟಿ ಮೊಬೈಲ್ ಫೋನ್ ಬಳಕೆದಾರರಿದ್ದಾರೆ. ಜೂನ್‌ನಲ್ಲಿ ಇದು 114.7 ಕೋಟಿ ಆಗಿತ್ತು.
ಗ್ರಾಮೀಣ ಭಾಗದಲ್ಲಿ ಇಳಿಕೆ
ನಗರ ಪ್ರದೇಶದಲ್ಲಿ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಿದ್ದರೆ, ಗ್ರಾಮೀಣ ಭಾಗದಲ್ಲಿ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಜೂನ್‌ಗೆ ಹೋಲಿಸಿದರೆ, ನಗರ ಪ್ರದೇಶಗಳಲ್ಲಿ ಬಳಕೆದಾರರ ಸಂಖ್ಯೆ 6.49 ಕೋಟಿಯಿಂದ 6.50ಕೋಟಿಗೆ ಏರಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬಳಕೆದಾರರ ಸಂಖ್ಯೆ 5.24ಕೋಟಿಯಿಂದ 5.23ಕೋಟಿಗೆ ಇಳಿದಿದೆ.
ಅಕ್ಟೋಬರ್‌ನಲ್ಲಿ 5ಜಿ
ಮುಂದಿನ ತಿಂಗಳ ಆರಂಭದಿಂದ 5ಜಿ ಸೇವೆಯನ್ನು ಪ್ರಾರಂಭಿಸುವುದಾಗಿ ರಿಲಯನ್ಸ್ ತಿಳಿಸಿದೆ. ಇದೇ ವೇಳೆ ಏರ್‌ಟೆಲ್ ಕೂಡ ಅಕ್ಟೋಬರ್‌ನಲ್ಲಿ 5ಜಿ ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ.
ಕಂಪೆನಿ-ಗ್ರಾಹಕರು
– ಜಿಯೋ- 41. 59 ಕೋಟಿ
– ಏರ್‌ಟೆಲ್-36.34 ಕೋಟಿ
– ಐಡಿಯಾ-25.51 ಕೋಟಿ
ಮುನ್ನಡೆ ಕಾಯ್ದುಕೊಂಡ ಜಿಯೋ
– ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮಾರುಕಟ್ಟೆ ಪಾಲು ಶೇ.36 ರಿಂದ ಶೇ.36.23ಕ್ಕೆ ಏರಿಕೆಯಾಗಿದೆ.
-ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಪಾಲು ಶೇ.31.63 ರಿಂದ ಶೇ.31.66 ಕ್ಕೆ ಏರಿದೆ.
– ವೊಡಾಫೋನ್-ಐಡಿಯಾ ಪಾಲು ಶೇ.22.37 ರಿಂದ ಶೇ.22.22 ಕ್ಕೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.