ಬೆಳೆ ಪರಿಶೀಲನೆ ನಡೆಸಿದ ಕೃಷಿ ಅಧಿಕಾರಿಗಳ ತಂಡ
ಏಣೇಲು ಗದ್ದೆಯಲ್ಲಿ ಗರಿ ಮಡಚುವ ಹುಳದ ಬಾಧೆ
Team Udayavani, Sep 29, 2022, 10:38 AM IST
ಬೆಳ್ತಂಗಡಿ: ಈ ಬಾರಿ ಮೇ ತಿಂಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ಜೂನ್ ಅವಧಿಯಲ್ಲಿ ಏಣೇಲು ಬೇಸಾಯ ನಡೆಸಿದ ಪರಿಣಾಮ ಗದ್ದೆಗಳಲ್ಲಿ ನೀರು ನಿಂತು ಗರಿ ಮಡಚುವ ಹುಳ ಬಾಧೆ ಆವರಿಸಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೃಷಿಕರ ಗದ್ದೆಗಳಲ್ಲಿ ಈ ಸಮಸ್ಯೆ ಉಂಟಾಗಿತ್ತು. ಈ ಕುರಿತು ಉದಯವಾಣಿ ವರದಿ ಪ್ರಕಟಿಸಿತ್ತು.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗುರಿಪಳ್ಳ ಪರಿಸರದಲ್ಲಿನ ಗದ್ದೆಗಳಲ್ಲಿ ಕೀಟ ಬಾಧೆ ಕಾಣಿಸಿಕೊಂಡು ಹಲವು ಎಕರೆ ಫಸಲು ನಷ್ಟವಾಗಿತ್ತು. ಈ ವಿಚಾರವಾಗಿ ಮಾಹಿತಿ ಪಡೆದ ಹೈದರಾಬಾದ್‌ನ ಐಸಿಎಆರ್-ಐಐ ಆರ್‌ಆರ್‌ನ ನಿರ್ದೇಶನದ ಮೇರೆಗೆ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ಹಾಗೂ ಸಸ್ಯರೋಗ ಶಾಸ್ತ್ರದ ವಿಜ್ಞಾನಿಗಳು ಬೆಳ್ತಂಗಡಿ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಕೀಟಬಾಧೆ ಕಾಣಿಸಿಕೊಂಡ ಗುರಿಪಳ್ಳದ ವಿಷ್ಣು ಭಾರದ್ವಾಜ್ ಹಾಗೂ ರಮಾನಂದ ಶರ್ಮ ಮತ್ತು ಪರಿಸರದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಂಡದಲ್ಲಿ ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ| ರೇವಣ್ಣ ರೇವಣ್ಣನವರ್, ಸಸ್ಯರೋಗ ಶಾಸ್ತ್ರ ವಿಭಾಗದ ವಿಜ್ಞಾನಿ ಸ್ವಾತಿ ಶೆಟ್ಟಿ, ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎಂ. ಹಾಗೂ ಕೃಷಿ ಅಧಿಕಾರಿ ಹುಮೇರಾ ಜಬೀನ್ ಇದ್ದರು.
ಫಸಲು ನಷ್ಟ
ಇದು ಕೊಳವೆ ಹುಳುವಿನ ರೂಪದಲ್ಲಿ ಕಂಡುಬಂದಿದ್ದು ತಡವಾಗಿ ನಾಟಿ ಮಾಡಿದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಇದರ ಬಗ್ಗೆ ನಿರ್ಲಕ್ಷé ವಹಿಸಿದರೆ ಫಸಲು ನಷ್ಟವಾಗುತ್ತದೆ ಎಂದು ತಿಳಿಸಿದರು.
ಹತೋಟಿ ಕ್ರಮ
ಈ ಕೀಟಗಳನ್ನು 200 ವ್ಯಾಟ್ ವಿದ್ಯುತ್ ದೀಪಕ್ಕೆ ಆಕರ್ಷಿಸಿ ನಿಯಂತ್ರಿಸಬಹುದು.ಕೀಟ ಬಾಧೆಗೆ ಒಳಗಾದ ಭತ್ತದ ಗದ್ದೆಯಲ್ಲಿ ತೆಂಗಿನ ನಾರಿನ ಹಗ್ಗವನ್ನು ಪೈರಿನ ಮೇಲೆ ಹಾಯಿಸಿದಾಗ ನೀರಿಗೆ ಬೀಳುವ ಕೀಟ ಗಳನ್ನು ಬಸಿಗಾಲುವೆಯ ಕೊನೆ ಭಾಗ ದಲ್ಲಿ ಆರಿಸಿ ನಾಶಪಡಿಸಬೇಕು. ಸೀಮೆ ಎಣ್ಣೆಯಿಂದ ಒದ್ದೆಗೊಳಿಸಿದ ಗೋಣಿ ಚೀಲಗಳನ್ನು ಭತ್ತದ ಗದ್ದೆಗೆ ನೀರು ಹರಿದು ಬರುವ ಜಾಗದಲ್ಲಿ ಇಟ್ಟರೆ ಕೊಳವೆ ಹುಳು ನಿಯಂತ್ರಣಕ್ಕೆ ಬರು ತ್ತದೆ. ಫೈರಿಫಾಸ್ 20 ಇಸಿ 2.5 ಮಿ.ಲೀ. ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಭತ್ತದ ಪೈರಿಗೆ ಸಿಂಪಡಿಸಿದರೆ ಕೀಟ ಸಂಪೂರ್ಣ ಹತೋಟಿಗೆ ಬರುತ್ತದೆ. ಆರಂಭಿಕ ಹಂತದಲ್ಲಿ ಕಂಡು ಬಂದರೆ ಬೇವಿನ ಮೂಲದ ಕೀಟನಾಶಕಗಳನ್ನು 2 ಮಿ.ಲೀ. ಪ್ರಮಾ ಣದಲ್ಲಿ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.