ಎಪಿಎಂಸಿಗೆ ಜಮೀನು ನೀಡಲು ಹಣ ಪಾವತಿಸಿ; ಜಿಲ್ಲಾಧಿಕಾರಿ
ಕೆಜಿಎಫ್ ಮಿನಿ ವಿಧಾನಸೌಧ ಕಾಮಗಾರಿ ಅಂತಿಮ ಹಂತದಲ್ಲಿದೆ
Team Udayavani, Sep 29, 2022, 6:34 PM IST
ಕೋಲಾರ: ಶಾಸಕಿ ರೂಪಕಲಾ ಮನವಿ ಹಿನ್ನಲೆಯಲ್ಲಿ ಜಿಲ್ಲೆಯ ಕೆಜಿಎಫ್ ಎಪಿಎಂಸಿ ಮಾರುಕಟ್ಟೆಗೆ ಮಂಜೂ ರಾಗಿರುವ 25 ಎಕರೆ ಜಾಗ ಎಪಿಎಂಸಿ ವಶಕ್ಕೆ ಪಡೆ
ಯುವುದು, ನಗರ ನಿರಾಶ್ರೀತರಿಗೆ ನಿವೇಶನ ನೀಡಲು 16 ಎಕರೆ ಜಮೀನು ಗುರುತಿಸುವ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕಿ ರೂಪಕಲಾ ಡೀಸಿಗೆ ಮನವಿ ಮಾಡಿ, ಕೆಜಿಎಫ್ ತಾಲೂಕು ವಿಭಜನೆಯಾದ ನಂತರ ಪ್ರತ್ಯೇಕ ಎಪಿಎಂಸಿ ಮಾಡಲು ಸಿದ್ಧತೆ ನಡೆದಿದ್ದು, 25 ಎಕರೆ ಜಾಗ ಗುರುತಿಸಲಾಗಿದೆ. ಅದಕ್ಕೆ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು 72 ಲಕ್ಷ ರೂ. ಹಣ ಕಟ್ಟಲು ಈಗಾಗಲೇ ಎಪಿಎಂಸಿ ರಾಜ್ಯ ನಿರ್ದೇಶಕರು ಸೂಚನೆ ನೀಡಿದ್ದು, ಅದರಂತೆ ಹಣ ಕಟ್ಟಲು ಸೂಚಿಸುವಂತೆ ಕೋರಿದರು.
ಅದರಂತೆ ಎಪಿಎಂಸಿ ಆಡಳಿತಾಧಿಕಾರಿಯೂ ಆಗಿರುವ ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಡೀಸಿ, ಕೂಡಲೇ ಸಂಬಂಧಿಸಿದ 72 ಲಕ್ಷ ರೂ., ಬಿಡುಗಡೆಗೆ ಸೂಚಿಸಿದರು.
ಸೂರಹಳ್ಳಿ ಬಳಿ 16 ಎಕರೆ ಜಾಗ: ಕೆಜಿಎಫ್ ನಗರ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆಯಡಿ ಸೂರಹಳ್ಳಿ ಸಮೀಪ 16 ಎಕರೆ ಜಾಗ ಗುರುತಿಸಿಕೊಡಲು ಶಾಸಕಿ ರೂಪಕಲಾ ಮಾಡಿದ ಮನವಿಗೆ ಸ್ಪಂದಿಸಿದ ಡೀಸಿ, ಅಗತ್ಯ ಕ್ರಮವಹಿಸಲು ಸೂಚಿಸಿ, ಫಲಾನುಭವಿಗಳ ಆಯ್ಕೆ, ನಿವೇಶನ ವಿಂಗಡಿ ಸುವ ಪ್ರಕ್ರಿಯೆಗಳನ್ನು ಶೀಘ್ರ ಆರಂಭಿಸಲು ನಗರ ಯೋಜನಾ ನಿದೇಶಕರು ಹಾಗೂ ನಗರಸಭೆಗೆ ಸೂಚನೆ ನೀಡಿದರು. ಈ ಕಾರ್ಯದಲ್ಲಿ ವಿಳಂಬ ಮಾಡದೇ ಶೀಘ್ರ ಜಮೀನು ಗುರುತಿಸಿ, ಫಲಾನುಭವಿ ಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಆಯ್ಕೆ ಪ್ರಕ್ರಿಯೆ ನಡೆಸಿ, ಅರ್ಹರಿಗೆ ನಿವೇಶನ ಹಂಚಲು ಕ್ರಮ ವಹಿಸಿ ಎಂದು ಹೇಳಿದರು.
ಟ್ರಕ್ ಟರ್ಮಿನಲ್ ಜಾಗಕ್ಕೆ ಮನವಿ: ಇದೇ ಸಂದರ್ಭದಲ್ಲಿ ಕೆಜಿಎಫ್ ನಗರಕ್ಕೆ ಟ್ರಕ್ ಟರ್ಮಿನಲ್ ಅಗತ್ಯವಿದ್ದು, ಅದಕ್ಕೆ ಜಾಗ ಗುರುತಿಸಿಕೊಡಲು ಡೀಸಿಗೆ ಶಾಸಕಿ ರೂಪಕಲಾ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡೀಸಿ ವೆಂಕಟ್ ರಾಜಾ, ಹೊಸ ತಾಲೂಕು ಹಾಗೂ ಅಲ್ಲೇ ಆರ್‌ಟಿಒ ಕಚೇರಿಯೂ ಇದೆ. ಅಗತ್ಯ ಜಾಗ ಗುರುತಿಸಿಕೊಡಿ ಎಂದು ಕೆಜಿಎಫ್ ತಹಶೀಲ್ದಾರ್ ಸುಜಾತಾ ಅವರಿಗೆ ಸೂಚಿಸಿದರು.
ಮಿನಿ ವಿಧಾನಸೌಧ ಶೀಘ್ರದಲ್ಲೇ ಉದ್ಘಾಟನೆ: ಕೆಜಿಎಫ್ ಮಿನಿ ವಿಧಾನಸೌಧ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಂದಾಯ ಸಚಿವರು ಉದ್ಘಾಟನೆಗೆ ಶೀಘ್ರವೇ ದಿನಾಂಕ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಉಳಿಕೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಿಕೊಡಲು ಶಾಸಕರು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಟ್ಟಡಕ್ಕೆ ಶೀಘ್ರ ಅಗತ್ಯ ಕಾಂಪೌಂಡ್ ನಿರ್ಮಿಸಿಕೊಡಿ, ಸುರಕ್ಷತೆಗೆ ತಂತಿ ಬೇಲಿ ನಿರ್ಮಾಣ ಮಾಡಿಕೊಟ್ಟು, ವಿದ್ಯುತ್ ಸಂಪರ್ಕ ಮತ್ತಿತರ ಕೆಲಸ ಮುಗಿಸಿಕೊಡಿ ಎಂದು ಲೋಕೋಪಯೋಗಿ ಎಇಇ ಸರಸ್ವತಿಗೆ ಸೂಚಿಸಿದರು. ಸಭೆಯಲ್ಲಿ ವಿಭಾಗಾಧಿಕಾರಿ ವೆಂಕಟ ಲಕ್ಷ್ಮಮ್ಮ, ಕೆಜಿಎಫ್ ನಗರಸಭೆ ಅಧ್ಯಕ್ಷ ವಿ.ಮುನಿ ಸ್ವಾಮಿ, ಪೌರಾಯುಕ್ತ ಡಾ.ಮಾಧವಿ, ಕೆಜಿಎಫ್ ತಹಶೀಲ್ದಾರ್ ಸುಜಾತಾ, ಬಂಗಾರಪೇಟೆ ತಹಶೀಲ್ದಾರ್
ದಯಾನಂದ್, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಟಾಸ್, ಎಪಿಎಂಸಿ ಸಹಾಯಕ ನಿರ್ದೇಶಕ ಕಿರಣ್, ನಗರಸಭೆ ಎಇಗಳಾ ಮಂಜು ನಾಥ್, ಶಶಿಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಸರಸ್ವತಿ, ಎಂಜಿನಿಯರ್ ರಾಜಶೇಖರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.