ಲಿಂಗ ತಾರತಮ್ಯ: ಫಿಡೆ ಮಹಿಳಾ ಚೆಸ್‌ನಲ್ಲಿ ವೀಕ್ಷಕ ವಿವರಣೆಕಾರಗೆ ಕೊಕ್
Team Udayavani, Sep 30, 2022, 6:45 AM IST
ಆಸ್ತಾನ (ಕಝಕಸ್ತಾನ): ವಿಶ್ವ ಚೆಸ್ ಸಂಸ್ಥೆ (ಫಿಡೆ) ಆಯೋಜಿಸಿರುವ ಮೊದಲನೆಯ ಮಹಿಳಾ ಫಿಡೆ ಗ್ರ್ಯಾನ್‌ಪ್ರೀ ಕೂಟವೇ ವಿವಾದಕ್ಕೆ ಸಿಲುಕಿದೆ. ಕೂಟದ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ಚೆಸ್ ಗ್ರ್ಯಾನ್‌ಮಾಸ್ಟರ್ ಇಲ್ಯಾ ಸ್ಮಿರಿನ್, ಲಿಂಗ ತಾರತಮ್ಯವೆನಿಸುವ ಮಾತುಗಳನ್ನಾಡಿದ್ದರು. ಇದನ್ನು ಆರಂಭದಲ್ಲಿ ಫಿಡೆ ಲಘುವಾಗಿ ಪರಿಗಣಿಸಿದ್ದರೂ, ಕೆಲವು ಆಟಗಾರರು ಗಂಭೀರವಾಗಿ ಪರಿಗಣಿಸಿದ್ದರಿಂದ ಅವರನ್ನು ವೀಕ್ಷಕ ವಿವರಣೆಕಾರ ಸ್ಥಾನದಿಂದ ಹೊರಹಾಕಲಾಗಿದೆ.
ಆಗಿದ್ದೇನು?: ಆಸ್ತಾನದಲ್ಲಿ ಇಬ್ಬರು ಆಟಗಾರ್ತಿಯರ ನಡುವೆ 9ನೇ ಸುತ್ತಿನ ಪಂದ್ಯವೊಂದು ನಡೆಯುತ್ತಿತ್ತು. ಇಲ್ಲಿ ಬೆಲಾರಸ್ ಗ್ರ್ಯಾನ್‌ಮಾಸ್ಟರ್ ಸ್ಮಿರಿನ್, ಮಹಿಳೆ ವಿಮ್ ಫಿಯೋನಾ ಸ್ಟೀಲ್ ಆ್ಯಂಟೋನಿ ವೀಕ್ಷಕ ವಿವರಣೆ ಮಾಡುತ್ತಿದ್ದರು. ಆಗ ಪ್ರೇಕ್ಷಕರೊಬ್ಬರು, ಇಲ್ಲಿ ಮಹಿಳೆಯರೇ ಆಡುತ್ತಿದ್ದಾರೆ. ಈ ಕೂಟದ ಮೂಲಕವೂ ಗ್ರ್ಯಾನ್‌ಮಾಸ್ಟರ್ ಅರ್ಹತೆ ಪಡೆದುಕೊಳ್ಳಲು ಸಾಧ್ಯವೇ ಎಂದು ಕೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸ್ಮಿರಿನ್, “ಚೆಸ್ ಮಹಿಳೆಯರಿಗಲ್ಲ, ಮಹಿಳೆಯರೇಕೆ ಪುರುಷರೆದುರು ಆಡಬೇಕು? ಪುರುಷರೇಕೆ ಮಹಿಳೆಯರೆದುರು ಆಡಬಾರದು? ಮಹಿಳೆಯೇಕೆ ಪುರುಷರ ಜಿಎಂ ಪಟ್ಟ ಪಡೆಯಲು ಯತ್ನಿಸಬೇಕು? ಈಗಂತೂ ಎಲ್ಲವನ್ನೂ ಸಮಾನತೆ ಹೆಸರಿನಲ್ಲೇ ನೋಡಲಾಗುತ್ತಿದೆ’ ಎಂದಿದ್ದರು. ಇದು ಹಲವರನ್ನು ಕೆರಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.