ನಾಳೆಯಿಂದ ಏನೇನು ಬದಲಾವಣೆ?
Team Udayavani, Sep 30, 2022, 6:45 AM IST
ಕ್ರೆಡಿಟ್ ಕಾರ್ಡ್ ಮಿತಿ :
ಅ.1ರಿಂದ ಅಂದರೆ ಶನಿವಾರದಿಂದ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವವರು ತಮ್ಮಿಷ್ಟದಂತೆ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡುವಂತಿಲ್ಲ. ಕಾರ್ಡ್‌ದಾರನ ಲಿಖಿತ ಅನುಮತಿ ಪಡೆದ ಬಳಿಕವಷ್ಟೇ ಮಿತಿ ಹೆಚ್ಚಳ ಮಾಡಬೇಕು.
ಟೋಕನೈಸೇಶನ್ :
ಈವರೆಗೆ ಥರ್ಡ್ ಪಾರ್ಟಿ ಪೇಮೆಂಟ್ ಆ್ಯಪ್‌ಗಳು ನಿಮ್ಮ ಬ್ಯಾಂಕ್‌ನಿಂದ ಯಾವುದೇ ಪ್ಲಾಟ್‌ಫಾರಂಗೆ ಹಣ ಪಾವತಿ ಮಾಡಬೇಕೆಂದರೆ ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ನಂಬರ್, ನಿಮ್ಮ ಹೆಸರು, ಸಿವಿವಿಯನ್ನು ಬಳಸುತ್ತಿದ್ದವು. ಆದರೆ, ಅ.1ರಿಂದ ಆ್ಯಪ್‌ಗ್ಳಲ್ಲಿದ್ದ ನಿಮ್ಮ ಎಲ್ಲ ಮಾಹಿತಿಯೂ ಡಿಲೀಟ್ ಆಗಲಿದೆ. ವಹಿವಾಟಿನ ಸುರಕ್ಷತೆ ದೃಷ್ಟಿಯಿಂದ, ನಿಮ್ಮ ಕಾರ್ಡ್‌ನಲ್ಲಿರುವ ಎಲ್ಲ ವಿವರಗಳನ್ನೂ ಕಡ್ಡಾಯವಾಗಿ ನೀವು ಟೋಕನ್ ಆಗಿ ಪರಿವರ್ತಿಸಬೇಕು. ಆ ಟೋಕನನ್ನೇ ಬಳಸಿಕೊಂಡು ಆ್ಯಪ್‌ಗ್ಳು ಹಣ ಪಾವತಿ ಮಾಡಲಿವೆ.
ಒಟಿಪಿ :
ಕಾರ್ಡ್ ವಿತರಣೆಯಾಗಿ 30 ದಿನಗಳ ಬಳಿಕವೂ ಅದನ್ನು ಆ್ಯಕ್ಟಿವೇಟ್ ಮಾಡದೇ ಇದ್ದರೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವವರು ಕಾರ್ಡ್ ಹೊಂದಿರುವಾತನ ಒಪ್ಪಿಗೆಯನ್ನು ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಮೂಲಕ ಪಡೆಯಬೇಕು. ಗ್ರಾಹಕ ಒಪ್ಪಿಗೆ ನೀಡದಿದ್ದರೆ 7 ದಿನಗಳೊಳಗಾಗಿ ಯಾವುದೇ ಶುಲ್ಕ ವಿಧಿಸದೇ ಕಾರ್ಡನ್ನು ಡೀಆ್ಯಕ್ಟಿವೇಟ್ ಮಾಡಬೇಕು.
ಡಿಮ್ಯಾಟ್ ಖಾತೆ ಲಾಗಿನ್ :
ಶನಿವಾರದಿಂದ ನೀವು ಡಿಮ್ಯಾಟ್ ಖಾತೆಗೆ ಲಾಗಿನ್ ಆಗಬೇಕೆಂದರೆ ಬಯೋಮೆಟ್ರಿಕ್ ದೃಢೀಕರಣ ಅತ್ಯಗತ್ಯ. ಈ ಪ್ರಕ್ರಿಯೆ ಮೂಲಕ ಅಥವಾ ಪಾಸ್‌ವರ್ಡ್, ಪಿನ್, ಒಟಿಪಿ, ಸೆಕ್ಯೂರಿಟಿ ಟೋಕನ್ ಮೂಲಕವೂ ಲಾಗಿನ್ ಆಗಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆ :
ಎನ್‌ಪಿಎಸ್ ಚಂದಾದಾರರ ಅನುಕೂಲಕ್ಕಾಗಿ ಯೋಜನೆಯ ಇ-ನಾಮಿನೇಶನ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಇ-ನಾಮಿನೇಶನ್ ಪ್ರಕ್ರಿಯೆ ಆರಂಭಿಸಿದ ಅನಂತರ ನೋಡಲ್ ಕಚೇರಿಯು ಒಂದೋ ಅದನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು. 30 ದಿನಗಳೊಳಗಾಗಿ ಕಚೇರಿ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ, ಕೋರಿಕೆಯು ತನ್ನಿಂತಾನೇ ಸಿಆರ್‌ಎ ವ್ಯವಸ್ಥೆಯಲ್ಲಿ ಸ್ವೀಕೃತಗೊಳ್ಳುತ್ತದೆ.
ಅಟಲ್ ಪಿಂಚಣಿ ಯೋಜನೆ:
ಅ.1ರಿಂದ ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಗೆ ಅರ್ಹತೆ ಪಡೆಯುವುದಿಲ್ಲ. ಸೀಮಿತ ಸೇವಾ ಪ್ರಯೋಜನಗಳನ್ನು ಪಡೆಯುವಂಥವರಿಗೆ ಯೋಜನೆಯ ಲಾಭ ಸಿಗಬೇಕು ಎನ್ನುವುದು ಇದರ ಉದ್ದೇಶ.
ಎಲ್‌ಪಿಜಿ ದರ ಪರಿಷ್ಕರಣೆ :
ಪ್ರತೀ ತಿಂಗಳಂತೆ ಅ.1ರ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಅಥವಾ ಇಳಿಕೆ ಆಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.