![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 30, 2022, 9:00 PM IST
ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಅ.3ರಿಂದ 7ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಅ.1 ಮತ್ತು 2 ಶನಿವಾರ ಹಾಗೂ ಭಾನುವಾರ ಅದೇ ರೀತಿ ಅ.8 ಮತ್ತು 9 ಕ್ರಮವಾಗಿ ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಒಟ್ಟು 9 ದಿನಗಳ ಕಾಲ ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ರಜೆ ಇರಲಿದೆ.
ತುರ್ತು ಪ್ರಕರಣಗಳ ವಿಚಾರಣೆಗೆ ಅ.6ರಂದು ಬೆಂಗಳೂರು ಪ್ರಧಾನ ಪೀಠದಲ್ಲಿ ರಜಾ ಕಾಲದ ವಿಶೇಷ ಪೀಠಗಳ ಕಲಾಪ ನಡೆಯಲಿದೆ.
ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ರಜಾ ಕಾಲದ ಪೀಠಗಳ ಕಲಾಪ ಇರುವುದಿಲ್ಲ. ಈ ಎರಡೂ ಪೀಠಗಳ ತುರ್ತು ಪ್ರಕರಣಗಳನ್ನು ಬೆಂಗಳೂರು ಪ್ರಧಾನ ಪೀಠದಲ್ಲಿನ ರಜಾ ಕಾಲದ ನ್ಯಾಯಪೀಠಗಳು ವಿಚಾರಣೆ ನಡೆಸಲಿವೆ.
You seem to have an Ad Blocker on.
To continue reading, please turn it off or whitelist Udayavani.