ತುಳು ಭಾಷೆ ಮಾನ್ಯತೆಗಾಗಿ ಪ್ರಯತ್ನ ನಿರಂತರ : ಶಾಸಕ ಡಾ.ಭರತ್ ಶೆಟ್ಟಿ ವೈ
Team Udayavani, Oct 1, 2022, 4:59 PM IST
ಸುರತ್ಕಲ್ : ತುಳುನಾಡಿನ ಆಡುಭಾಷೆ ತುಳುವಾಗಿದ್ದು, ಇಲ್ಲಿನ ಜನತೆ ಬೆಂಗಳೂರಿಗರಂತೆ ಅಪ್ಪಟ ಶುದ್ದ ಮಾತನಾಡುತ್ತಾರೆ. ಯಾವುದೇ ಕಾರಣಕ್ಕೂ ಕನ್ನಡವನ್ನು ಯಾರೂ ವಿರೋಧಿಸುವುದಿಲ್ಲ. ತುಳು ಭಾಷಿಕರ ಬಗ್ಗೆ ಅಪಪ್ರಚಾರ ಸಲ್ಲದು, ಇಂತಹ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಕೋಡಿಕಲ್‍ನ ಹತ್ತು ಅಡ್ಡ ರಸ್ತೆ, ಮೂರು ಮುಖ್ಯ ರಸ್ತೆಗೆ ಸ್ಥಳೀಯ ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಅವರು ಮನಪಾ ಸದಸ್ಯ ಅನುದಾನದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮವಾಗಿ ಕನ್ನಡ ಸಹಿತ ತುಳು ನಾಮಫಲಕ ಅಳವಡಿಸಿದ್ದು ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತುಳು ಲಿಪಿಯ ಮಾನ್ಯತೆಗೆ ಸಚಿವರು, ಶಾಸಕರು ,ಸಂಸದರ ಪ್ರಯತ್ನ ನಿರಂತರವಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಕಾರ್ಯವೂ ನಡೆಯುತ್ತಿದೆ. ಕೆಲವೊಂದು ವಿಚಾರಗಳು ಸಮಯ ತೆಗೆದುಕೊಂಡರು ಯಶಸ್ಸು ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.
ತುಳು ಸಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮಾತನಾಡಿ, ತುಳು ಅಕಾಡೆಮಿಯ ಭವನ ನಿರ್ಮಾಣಕ್ಕೆ 9 ಕೋಟಿ ಅನುದಾನ ವಿವಿಧ ಮೂಲಗಳಿಂದ ಶಾಸಕರು, ಪ್ರಾಧಿಕಾರದ ಅಧ್ಯಕ್ಷರು ಒದಗಿಸಿಕೊಟ್ಟಿದ್ದಾರೆ. ಕನ್ನಡವನ್ನು ತುಳುವರು ವಿರೋಧಿಸುತ್ತಾರೆ ಎಂಬ ಭಾವನೆಯಲ್ಲಿ ಸತ್ಯಾಂಶವಿಲ್ಲ. ನಾವು ಕನ್ನಡವನ್ನು ಅಭಿಮಾನದಿಂದ ಗೌರವಿಸಿಕೊಂಡೇ ತುಳುವನ್ನು ನಮ್ಮ ಆಡು ಭಾಷೆಯ ಮಾನ್ಯತೆಗೆ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯ,ಕಿರಣ್ ಕುಮಾರ್ ಕೋಡಿಕಲ್ ಮನೋಜ್ ಕುಮಾರ್, ನಿಕಟ ಪೂರ್ವ ಉಪಮೇಯರ್ ಸುಮಂಗಳ,ಹಿರಿಯರಾದ ಗೋಪಾಲ್ ಕೋಟ್ಯಾನ್,ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು,ತುಳುನಾಡು ಕುಡ್ಲ ಅಧ್ಯಕ್ಷ ಅಶ್ವಥ್ ತುಳುವೆ, ತುಳುವೆರ್ ಕುಡ್ಲ ಅಧ್ಯಕ್ಷ ಪ್ರತೀಕ್ ಪೂಜಾರಿ,ಪ್ರಮುಖರಾದ ಉಮೇಶ್ ಮಲರಾಯಸಾನ, ಹರಿಪ್ರಸಾದ್ ಶೆಟ್ಟಿ,ಸೀತಾರಾಮ್ ದಂಬೆಲ್,ಬೂತ್ ಅಧ್ಯಕ್ಷರು,ತುಳು ಸಂಘಟನೆಯ ಪದಾಧಿಕಾರಿಗಳು,ಸದಸ್ಯರ,ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.