ಪ್ರಕೃತಿ ಹೆಸರಲ್ಲಿ ಅರಣ್ಯಾಧಿಕಾರಿಗಳ ಹಗಲು ದರೋಡೆ ? ಅಧಿಕಾರಿಗಳ ವಿರುದ್ಧ ಬೀದಿಗಿಳಿದ ಜನ !
Team Udayavani, Oct 2, 2022, 8:54 AM IST
ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ದಂಧೆಗೆ ಇಳಿದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ, ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಜನ ಅರಣ್ಯ ಅಧಿಕಾರಿಗಳು ಜಿಲ್ಲೆ ಹಾಗೂ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣದಲ್ಲಿ ಅರಣ್ಯ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಬೀದಿಗಿಳಿದ ಹೋರಾಟ ನಡೆಸಿದ್ದಾರೆ. ಬಲ್ಲಾಳರಾಯನದುರ್ಗದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯ ನೋಡೋ ಕಣ್ಗಳಿಗೆ ಹೊಸದೊಂದು ಪ್ರಪಂಚವನ್ನೇ ಉಣಬಡಿಸುವಂತಿದೆ. ಕಣ್ಣಿನ ದೃಷ್ಠಿ ಮುಗಿದರು ಹಚ್ಚಹಸಿರಿನ ಬೆಟ್ಟಗುಡ್ಡಗಳ ಸಾಲಿಗೆ ಕೊನೆ ಇಲ್ಲ. ತಣ್ಣನೆಯ ಗಾಳಿ. ಚುಮುಚುಮು ಚಳಿ. ಆಗಾಗ್ಗೆ ಪ್ರಕೃತಿ ಹಾಗೂ ಪ್ರವಾಸಿಗರ ಜೊತೆ ಮೋಡಗಳ ಕಣ್ಣಾಮುಚ್ಚಾಲೆ ಆಟ. ಇದೆಲ್ಲಾ ಪ್ರವಾಸಿಗರನ್ನ ಮಂತ್ರಮುಗ್ಧರನ್ನಾಗಿಸುತ್ತೆ. ವರ್ಷದ 365 ದಿನವೂ ನೂರಾರು ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನ ಸವಿದು ಸೂಪರ್…. ಮಾರ್ವಲಸ್…. ಹಾರಿಬಲ್…. ಎಕ್ಸ್ಟ್ರಾಡಿನರಿ… ಅಂತೆಲ್ಲಾ ಇಲ್ಲಿನ ಸೌಂದರ್ಯಕ್ಕೆ ಫಿದಾ ಆಗಿ ಹೋಗುತ್ತಾರೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಿಂಚಿತ್ತು ಮೂಲಭೂತ ಸೌಕರ್ಯ ಇಲ್ಲ ಅನ್ನೋದು ನಂಬಲಾಗದ ಸತ್ಯ.
ತಲೆಗೆ 300 ರೂಪಾಯಿ ಬೆಲೆ : ಈ ಸೌಂದರ್ಯ ರಾಶಿಯನ್ನ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಂದ ಕಳೆದ 4 ವರ್ಷಗಳಿಂದ ಅರಣ್ಯ ಹಾಗೂ ಪ್ರವಾಸೋಧ್ಯಮ ಇಲಾಖೆ ತಲಾ 305 ರೂಪಾಯಿ ಸಂಗ್ರಹ ಮಾಡುತ್ತಿದೆ. ಮಂತ್ಲಿ ನಿಯರ್ ಫೈವ್ ಲ್ಯಾಕ್ಸ್. ಆದರೆ, ಒಂದು ಶೌಚಾಲಯವಿಲ್ಲ. ವಿಶ್ರಾಂತಿ ಗೃಹವೂ ಇಲ್ಲ. ದಿನನಿತ್ಯ ನೂರಾರು ಗಾಡಿಗಳು ಓಡಾಡೋ ಹಳ್ಳಿಯಲ್ಲಿ ನಡೆದಾಡುವ ಸ್ಥಿತಿಯೂ ಇಲ್ಲ. ಹಾಗಾದರೆ, ಬಂದ ಹಣ ಎಲ್ಲಿ ಹೋಯಿತು ಅನ್ನೋದು ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಈ ಬಗ್ಗೆ ಕಳೆದ ಎರಡು ವರ್ಷದಿಂದ ಸ್ಥಳಿಯರು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದ್ರು ನೋ ಯೂಸ್. ಹಾಗಾಗಿ, ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಂದ ಸುಲಿಗೆಗೆ ಇಳಿದಿದೆ ಎಂದು ಆರೋಪಿಸಿ ಸ್ಥಳಿಯರು ಇಲಾಖೆ ವಿರುದ್ಧ ಬೀದಿಗಳಿದು ಹೋರಾಟ ನಡೆಸಿದ್ದಾರೆ. ಯಾರೂ ಗುಡ್ಡಕ್ಕೆ ಹೋಗದಂತೆ ರಸ್ತೆಗೆ ಹಗ್ಗ ಕಟ್ಟಿ ಪ್ರತಿಭಟಿಸಿದ್ದಾರೆ.
ಗ್ರಾಮ ಅರಣ್ಯ ಸಮಿತಿಗೆ ಸ್ಥಳಿಯರ ಮನವಿ : ಸರ್ಕಾರ ಕಳೆದ ಮೂರು ವರ್ಷಗಳಿಂದಲೂ “ಎಕೋ ಟೂರಿಸಂ” ಹೆಸರಲ್ಲಿ ಪ್ರವಾಸಿಗರಿಗೆ ಶುಲ್ಕ ವಿಧಿಸುತ್ತಿದೆ. ಆದರೆ, ಆ ಹಣ ಸರ್ಕಾರದ ಖಜಾನೆ ಸೇರುತ್ತಿದೆಯೋ ಇಲ್ಲ ಬೇರೆಲ್ಲಿಗೆ ಹೋಗುತ್ತಿದ್ಯೋ ಗೊತ್ತಿಲ್ಲ. ಆದರೆ, ಪ್ರವಾಸಿಗರಿಗೆ ಮೂಲಭೂತ ಸೌಲಭ್ಯವಂತೂ ಸಿಗುತ್ತಿಲ್ಲ. ಗ್ರಾಮಸ್ಥರು ಕೂಡ ಕಳೆದ ಮೂರು ವರ್ಷಗಳಿಂದಲೂ ಅರಣ್ಯ ಇಲಾಖೆ ಗ್ರಾಮ ಪಂಚಾಯಿತಿಯಡಿ ಗ್ರಾಮ ಅರಣ್ಯ ಸಮಿತಿಯ ಮೂಲಕ ಶುಲ್ಕ ವಿಧಿಸಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಾರಣ ಸ್ಥಳಿಯರೇ ಸರ್ಕಾರದ ವಿರುದ್ಧ ಬೀದಿಗಳಿದು ಅಸಮಾಧಾನ ಹೊರಹಾಕಿದ್ದಾರೆ.
ಆನ್‍ಲೈನ್‍ನಲ್ಲಿ 100 ಜನರಿಗೆ ಅವಕಾಶ : ಇಲ್ಲಿಗೆ ಬರುವ ಪ್ರವಾಸಿಗರಿಂದ ದಿನಕ್ಕೆ ನೂರು ಜನರಿಗೆ ಮಾತ್ರ ಆನ್ ಲೈನ್‍ನಲ್ಲಿ ಹಣವನ್ನ ಕಲೆಕ್ಟ್ ಮಾಡಲಾಗುತ್ತೆ. ಉಳಿದವರಿಗೆ ಆನ್‍ಲೈನ್‍ನಲ್ಲಿ ತೆಗೆದುಕೊಳ್ಳುವ ಅವಕಾಶವಿಲ್ಲ. ಅಂತವರನ್ನೇ ಗುರಿಯಾಗಿಸಿಕೊಂಡು ಅವರಿಂದ ಯಾವುದೇ ರಶೀದಿಯನ್ನ ಪಡೆಯದೇ ದಿನಕ್ಕೆ ಸಾವಿರಾರು ರೂಪಾಯಿಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ದೋಚುತ್ತಿದ್ದಾರೆ ಎಂಬ ಆರೋಪಿಸಿದ್ದಾರೆ. ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಹಣ ಮಾಡುವ ದಂಧೆ ಮಾಡುತ್ತಿದ್ದು ಗ್ರಾಮವನ್ನ ಹಾಳು ಮಾಡುತ್ತಿದ್ದಾರೆ. ಜೊತೆಗೆ ಇವರಿಗೆ ಹಣ ನೀಡಿ ಬರುವ ಪ್ರವಾಸಿಗರಿಗೆ ಕನಿಷ್ಠ ಮೂಲಭೂತ ವ್ಯವಸ್ಥೆಯನ್ನೂ ಮಾಡದಿರೋದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
50 ರೂಪಾಯಿ ಕೆಲೆಕ್ಟ್ ಮಾಡಿ : ಅಧಿಕಾರಿಗಳು ತಕ್ಷಣ ಹಣ ವಸೂಲಿ ಮಾಡುವುದನ್ನ ನಿಲ್ಲಿಸಬೇಕು. ಈವರೆಗೆ ಪಡೆದಿರೋ ಹಣದ ದಾಖಲೆ ನೀಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ. ಇನ್ನುಮುಂದೆ ಗ್ರಾಮ ಅರಣ್ಯ ಸಮಿತಿ ರಚಿಸಿ, ಸಮಿತಿಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಪ್ರವಾಸಿಗರಿಂದ 300 ರೂಪಾಯಿ ವಸೂಲಿ ಮಾಡುವಂತಿಲ್ಲ. 50 ರೂಪಾಯಿ ಟಿಕೆಟ್ ಮಾಡಿ ಅದಕ್ಕೆ ತಕ್ಕಂತೆ ಶೌಚಾಲಯ, ವಿಶ್ರಾಂತಿ ಗೃಹದಂತಹಾ ಮೂಲಭೂತ ಸೌಲಭ್ಯದ ಜೊತೆ ಪ್ರವಾಸಿಗರಿಗೆ ಗೈಡ್‍ಗಳನ್ನ ಕೊಡಬೇಕು ಎಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಂಗಳೂರು, ಉಡುಪಿಯಲ್ಲಿ ಮುಂದುವರಿದ ಮಳೆ; ಇಂದು ಎಲ್ಲೋ ಅಲರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.