ಗ್ರಾಹಕರಿಗೆ ಅಪ್ರತಿಮ ಸೇವೆಯೇ ನಮ್ಮ ಗುರಿ: ಆನಂದ ಬಿ. ಮೂಲ್ಯ
Team Udayavani, Oct 2, 2022, 11:20 AM IST
ಡೊಂಬಿವಲಿ: ಕಳೆದ 23 ವರ್ಷಗಳಿಂದ ಡೊಂಬಿವಲಿ ಪರಿಸರದ ತುಳು-ಕನ್ನಡಿಗರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ತುಳುಶ್ರೀ ಕೋ – ಆಪರೇ ಟಿವ್ ಸೊಸೈಟಿ ತನ್ನ ಗ್ರಾಹಕರಿಗೆ ಅಪ್ರತಿಮ ಸೇವೆ ಸಲ್ಲಿಸುವ ಮುಖಾಂತರ ಜನಮಾನಸ ದಲ್ಲಿ ಉತ್ತಮ ಸ್ಥಾನ ನಿರ್ಮಿಸಿ ಕೊಂಡಿದೆ. ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುವ ಗುರಿ ನಮ್ಮ ಸಂಸ್ಥೆಯದ್ದಾಗಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ ಹೇಳಿದರು.
ಡೊಂಬಿವಲಿ ಪೂರ್ವದ ಕೆ. ಡಿ. ಅಗರ್ವಾಲ್ ಸಭಾಗೃಹದಲ್ಲಿ ಸೆ. 25ರಂದು ಸಂಜೆ ನಡೆದ ತುಳುಶ್ರೀ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿ ಡೊಂಬಿವಲಿ 23ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಆಡಳಿತ ಮಂಡಳಿಯ ಉತ್ತಮ ಕಾರ್ಯ ವೈಖರಿ ಹಾಗೂ ಸಿಬಂದಿಯ ಸೇವಾ ತತ್ಪರತೆಯಿಂದ ಸಂಸ್ಥೆ ಉತ್ತಮ ಸಾಧನೆಗೈಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ನಮ್ಮೆಲ್ಲರ ಹೆಮ್ಮೆಯ ಈ ಸಂಸ್ಥೆ ರಜತ ಮಹೋತ್ಸವ ಆಚರಿಸಲಿದ್ದು, ಈ ನಿಟ್ಟಿನಲ್ಲಿ ಶೇರು ಬಂಡವಾಳದ ಠೇವಣಿ ಹೆಚ್ಚಿಸುವ ಹಾಗೂ ಸಾಲವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಸೊಸೈಟಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್ ಸುವರ್ಣ 22ನೇ ವಾರ್ಷಿಕ ಮಹಾಸಭೆಯ ವಾರ್ಷಿಕ ವರದಿ ಮಂಡಿಸಿ, ಟಿ. ಕೆ. ಪುತ್ರನ್ ಅವರ ಸೂಚನೆ ಮತ್ತು ಸಂತೋಷ್ ಶೆಟ್ಟಿ ಅವರ ಅನುಮೋದನೆಯೊಂದಿಗೆ ಮಂಜೂರು ಮಾಡಿದರು. 2021 – 22ರ ವಾರ್ಷಿಕ ವರದಿಯನ್ನು ನಾಗೇಶ ಹೊಸ್ಬೇಟಕರ ಅವರ ಸೂಚನೆ, ಲಕ್ಷ್ಮಣ್ ಸಿ. ಮೂಲ್ಯ ಅವರ ಅನುಮೋದನೆಯೊಂದಿಗೆ ಮಂಜೂರು ಮಾಡಲಾಯಿತು. 2021-22ನೇ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಕೋಶಾಧಿಕಾರಿ ನಾರಾಯಣ ಬಿ. ಪೂಜಾರಿ ಮಂಡಿಸಿದರು. ಜಿ. ಎಸ್. ನಾಯಕ್ ಅವರ ಸೂಚನೆ, ವಸಂತ ಸುವರ್ಣ ಅವರ ಅನುಮೋದನೆಯೊಂದಿಗೆ ಲೆಕ್ಕಪತ್ರವನ್ನು ಮಂಜೂರು ಮಾಡಲಾಯಿತು. 2021-22ನೇ ವರ್ಷದ ಲಾಭಾಂಶದ ವಿಷಯವನ್ನು ಮಂಡಿಸಲಾಯಿತು.
ವಿನೋದಾ ಶೆಟ್ಟಿ ಅವರ ಸೂಚನೆ ಹಾಗೂ ಚಂದ್ರಾ ನಾಯ್ಕ ಅವರ ಅನುಮೋದನೆಯಂತೆ ಶೇ. 6ರಷ್ಟು ಲಾಭಾಂಶವನ್ನು ಶೇರುದಾರರಿಗೆ ಘೋಷಿಸಲಾ ಯಿತು. 2022-23ನೇ ಸಾಲಿನ ಆಂತರಿಕ ಲೆಕ್ಕಪರಿಶೋಧಕರಾಗಿ ಯು. ಪಿ. ಪೈ ಆ್ಯಂಡ್ ಕಂಪೆನಿ ಹಾಗೂ ಲೆಕ್ಕಪರಿಶೋಧಕಕರಾಗಿ ಆರ್. ಕೆ. ಪಾಟೀಲ್ ಅವರನ್ನು ನಾಗೇಶ ಹೊಸ್ಬೇಟಕರ ಅನುಮೋದನೆಯಂತೆ ನೇಮಿಸಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ಕಾರ್ಯದರ್ಶಿ ಲಕ್ಷ್ಮಣ್ ಸುವರ್ಣ, ಕೋಶಾಧಿಕಾರಿ ನಾರಾಯಣ ಬಿ. ಪೂಜಾರಿ, ಸದಸ್ಯ ಎಂ. ಪಿ. ಪೈ, ದೇವದಾಸ್ ಕುಲಾಲ್ ಹಾಗೂ ಲೆಕ್ಕಪರಿಶೋಧಕ ಯು. ಪಿ. ಪೈ ಉಪಸ್ಥಿತರಿದ್ದರು. ಸಭೆಯಲ್ಲಿ ಅನೇಕ ಗಣ್ಯರು ಮಾತನಾಡಿ ಸಲಹೆ-ಸೂಚನೆಗ ಳನ್ನು ನೀಡಿದರು.
ದೇವದಾಸ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್ ಸುವರ್ಣ ವಂದಿಸಿದರು. ಶೇರುದಾರರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
-ಚಿತ್ರ-ವರದಿ: ಗುರುರಾಜ್ ಪೋತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.