ಹುಬ್ಬಳ್ಳಿ: ಬಾಲಕನಿಗೆ ಬೆತ್ತಲೆ ಪೂಜೆ ಮಾಡಿದ ವಿಕೃತರು
ಶ್ರೀಮಂತರಾಗಬೇಕೆಂದು... ಸಾಲವೆಲ್ಲ ತೀರಲೆಂದು ಹೇಯ ಕೃತ್ಯ
Team Udayavani, Oct 3, 2022, 5:30 PM IST
ಕೊಪ್ಪಳ: ನಿಮ್ಮಪ್ಪನ ಸಾಲ ತೀರಬೇಕೆಂದರೆ ನೀವು ಶ್ರೀಮಂತರಾಗಬೇಕೆಂದರೆ, ನಿಮ್ಮ ಸಾಲವೆಲ್ಲ ತೀರಿ ಹೋಗುತ್ತದೆ ಎಂದು ಪುಸಲಾಯಿಸಿ ಅಪ್ರಾಪ್ತ ವಯಸ್ಕ ಬಾಲಕನಿಗೆ ಹುಬ್ಬಳ್ಳಿಯ ತಿಮ್ಮ ಸಾಗರದ ವಾಲ್ಮೀಕಿ ಭವನದಲ್ಲಿ ಬೆತ್ತಲೆ ಪೂಜೆ ಮಾಡಿಸಿ ವಿಡಿಯೋ ಮಾಡಿ ಜೀವ ಬೆದರಿಕೆ ಹಾಕಿದ ಹೇಯ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಹಾಸಗಲ್ ಗ್ರಾಮದ ಶರಣಪ್ಪ ತಳವಾರ, ವಿರುಪನಗೌಡ ಗೌಡ್ರ, ಶರಣಪ್ಪ ಓಜಿನಳ್ಳಿ ಎನ್ನುವ ವ್ಯಕ್ತಿಗಳು ಎರಡುವರೆ ತಿಂಗಳ ಹಿಂದೆ ಗ್ರಾಮದ ಚನ್ನಬಸಪ್ಪ ಅಳ್ಳಳ್ಳಿ ಅವರ 15 ವರ್ಷದ ಪುತ್ರ ಸಂದೀಪ (ಹೆಸರು ಬದಲಿಸಿದೆ) ನನ್ನು ಹುಬ್ಬಳ್ಳಿಯಲ್ಲಿ ಜೆಜೆಎಂ ಕೆಲಸಕ್ಕೆ ಕಳುಹಿಸಿಕೊಡು ಎಂದು ಕೇಳಿದ್ದಾರೆ. ಚೆನ್ನಬಸಪ್ಪ ಅವರು ನನ್ನ ಪುತ್ರನು ಇನ್ನೂ ಅಪ್ತಾಪ್ತನಿದ್ದು ಆತನನ್ನು ಕೆಲಸಕ್ಕೆ ಕಳಿಸುವುದಿಲ್ಲ ಎಂದಿದ್ದಾರೆ.
ಕೆಲಸ ಚೆನ್ನಾಗಿದೆ ಕಳಿಸಿಕೊಡು ಎಂದು ಮತ್ತೆ ಪೀಡಿಸಿದ ಕಾರಣ ಆತನನ್ನು ಕಳಿಸಿಕೊಟ್ಟಿದ್ದಾರೆ. ಆ ಬಾಲಕನನ್ನು ಹುಬ್ಬಳ್ಳಿಯ ತಿಮ್ಮಸಾಗರಕ್ಕೆ ಕರೆದುಕೊಂಡು ತೆರಳಿದ್ದ ಮೂವರು ಆರೋಪಿತರು ತಿಮ್ಮಸಾಗರದ ವಾಲ್ಮೀಕಿ ಭವನದಲ್ಲಿ ರಾತ್ರಿ ವೇಳೆ, ನಿಮ್ಮ ಅಪ್ಪನ ಸಾಲ ತೀರಬೇಕೆಂದರೆ, ನಿಮ್ಮ ಸಾಲ ಯಾರೂ ಕೇಳಬಾರದು ಎಂದರೆ ನೀವು ಶ್ರೀಮಂತರಾಗಬೇಕು. ಎಂಎಲ್‌ಎ ಆಗಬೇಕೆಂದರೆ ನೀನು ಬೆತ್ತಲೆ ಪೂಜೆಯನ್ನು ಮಾಡಬೇಕೆಂದು ಬಾಲಕನ ಮನಸ್ಸು ಕೆಡಿಸಿದ್ದಾರೆ. ಬಾಲಕನನ್ನು ಒತ್ತಾಯ ಪೂರ್ವಕ ಬೆತ್ತಲೆ ಮಾಡಿ ಆತನ ಮೈಗೆಲ್ಲಾ
ವಿಭೂತಿ, ಕುಂಕುಮ ಹಚ್ಚಿ, ನಿಂಬೆ ಹಣ್ಣಿನ ಸರವನ್ನು ಕೊರಳಲ್ಲಿ ಹಾಕಿದ್ದಾರೆ. ಬಾಲಕನ ತಲೆಗೆ ಶರಣಪ್ಪ ಎನ್ನುವ ವ್ಯಕ್ತಿ ನಿಂಬೆಹಣ್ಣಿನ ರಸವನ್ನು ಹಿಂಡಿದ್ದಾನೆ. ಬಾಲಕ ಬೆತ್ತಲೆಯಾಗಿರುವಾಗ ಮರ್ಮಾಂಗವನ್ನು ಮುಟ್ಟಿದ್ದಾರೆ. ಇದೆಲ್ಲವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ನೀನು ಹೀಗೆ ಬೆತ್ತಲೆ ಸೇವೆ ಮಾಡುತ್ತಲೇ ಇರಬೇಕು ಹೇಳಿದ್ದಾರೆ. ಹಲವು ಬಾರಿ ಬೆತ್ತಲೆ ವಿಡಿಯೋ ಚಿತ್ರಿಕರಿಸಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ನಿನ್ನ ಹಾಗೂ ನಿಮ್ಮಪ್ಪನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಬಾಲಕನ ಬೆತ್ತಲೆ ವೀಡಿಯೋಗಳು ಗ್ರಾಮದ ವ್ಯಕ್ತಿಯೋರ್ವನ ಬಳಿ ಹರಿದಾಡಿವೆ. ತಂದೆ ಚನ್ನಬಸಪ್ಪ ಅಳ್ಳಳ್ಳಿಗೂ ಈ ವಿಷಯ ಗೊತ್ತಾಗಿ ಮಗನನ್ನು ಭಾನುವಾರವಷ್ಟೇ ಊರಿಗೆ ಕರೆಯಿಸಿ ಕೇಳಿದ್ದಾನೆ.
ಆಗ ಮಗನು ತನಗಾಗಿರುವ ನೋವಿನ ಬಗ್ಗೆ ಹೆತ್ತವರ ಮುಂದೆ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಇದರಿಂದ ತಂದೆ ಚನ್ನಬಸಪ್ಪ ಅಳ್ಳಳ್ಳಿ ಅವರು ಶರಣಪ್ಪ ತಳವಾರ, ವಿರುಪನಗೌಡ ಹಾಗೂ ಶರಣಪ್ಪ ಓಜಿನಳ್ಳಿ ಎನ್ನುವ ಮೂವರ ವಿರುದ್ದವೂ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಮಗನ ಬೆತ್ತಲೆ ವಿಡಿಯೋ ಮಾಡಿ ಹರಿ ಬಿಟ್ಟಿದ್ದು, ವಾಮಾಚಾರದಂತೆ ಆತನಿಗೆ ಪೂಜೆ ಮಾಡಲಾಗಿದೆ. ಅಲ್ಲದೇ ಮಗನಿಗೆ ಜೀವ ಬೆದರಿಕೆ ಹಾಕಲಾಗಿದೆ ಎನ್ನುವ ಹಲವು ಕಾರಣ ನೀಡಿ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಅಪ್ತಾಪ್ತ ಬಾಲಕನನ್ನು ಅತ್ಯಂತ ವಿಕೃತಿಯ ರೀತಿಯಲ್ಲಿ ಬೆತ್ತಲೆ ಪೂಜೆ ಮಾಡಿಸಿದ್ದು ನಿಜಕ್ಕೂ ನಾಗರಿಕೆ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಆ ಬಾಲಕನನ್ನು ವಾಮಾಚಾರಕ್ಕೆ ಬಳಕೆ ಮಾಡಲಾಗಿದೆಯೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಸೇರಿದಂತೆ ಕುಟುಂಬ ವರ್ಗ ಒತ್ತಾಯ ಮಾಡಿದೆ.
ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಮೂವರು ಅಪ್ತಾಪ್ತನನ್ನು ಹುಬ್ಬಳ್ಳಿಗೆ ಜೆಜೆಎಂ ಕೆಲಸಕ್ಕೆ ಕರೆದುಕೊಂಡು ಹೋಗಿ ಬೆತ್ತಲೆ ಪೂಜೆ ಮಾಡಿರುವ ವಿಷಯದ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಾಕ್ಷಣ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದೇವೆ. ಮೂವರ ಶೋಧ ಕಾರ್ಯ ನಡೆದಿದೆ. ಈ ಪ್ರಕರಣ ಹುಬ್ಬಳ್ಳಿ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಿದ್ದೇವೆ ಎಂದು ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.