ವನಿತಾ ಏಷ್ಯಾ ಕಪ್ ಕ್ರಿಕೆಟ್; ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ
Team Udayavani, Oct 5, 2022, 4:52 PM IST
ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಮೂರನೇ ಮುಖಾಮುಖಿಯಲ್ಲಿ ಮಂಧನಾ ಬಳಗ ಯುಎಇಯನ್ನು 104 ರನ್ನುಗಳ ಭಾರೀ ಅಂತರದಿಂದ ಕೆಡವಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟಿಗೆ 178 ರನ್ ಪೇರಿಸಿತು. ಜವಾಬಿತ್ತ ಯುಎಇ ಟೆಸ್ಟ್ ಶೈಲಿಯಲ್ಲಿ ಆಡಿತು; 20 ಓವರ್‌ಗಳಲ್ಲಿ ಗಳಿಸಿದ್ದು 4 ವಿಕೆಟಿಗೆ 74 ರನ್ ಮಾತ್ರ.
ಭಾರತದ ಅಜೇಯ ಓಟ
ಇದರೊಂದಿಗೆ ಭಾರತ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಬಾಗಿಲಿನ ಸಮೀಪ ನಿಂತಿದೆ. ಮೊದಲೆರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಮಲೇಷ್ಯಾವನ್ನು ಮಣಿಸಿತ್ತು. ಭಾರತದ ಮುಂದಿನ ಎದುರಾಳಿ ಪಾಕಿಸ್ಥಾನ. ಈ ಪಂದ್ಯ ಶುಕ್ರವಾರ ನಡೆಯಲಿದೆ.
ಭಾರತ ಆರಂಭಿಕ ಜೋಡಿಯಲ್ಲಿ ಮತ್ತೆ ಬದಲಾವಣೆ ಮಾಡಿತು. ಎಸ್. ಮೇಘನಾ ಜತೆ ರಿಚಾ ಘೋಷ್ ಆಡಳಿಳಿದರು. ಆದರೆ ಗೋಲ್ಡನ್ ಡಕ್ ಆಗಿ ತೆರಳಿದರು. ಮೇಘನಾ ಗಳಿಕೆ 10 ರನ್ ಮಾತ್ರ. ಡಿ. ಹೇಮಲತಾ 2 ರನ್ ಮಾಡಿ ರನೌಟ್ ಆದರು. 19 ರನ್ನಿಗೆ ಭಾರತದ 3 ವಿಕೆಟ್ ಬಿತ್ತು.
ವನ್‌ಡೌನ್‌ನಲ್ಲಿ ಬಂದ ದೀಪ್ತಿ ಶರ್ಮ, 5ನೇ ಕ್ರಮಾಂಕದಲ್ಲಿ ಆಡಳಿಲಿದ ಜೆಮಿಮಾ ರೋಡ್ರಿಗಸ್ ಬಿರುಸಿನ ಆಟಕ್ಕಿಳಿದರು. 4ನೇ ವಿಕೆಟಿಗೆ 129 ರನ್ ಹರಿದು ಬಂತು. ಲಂಕಾ ವಿರುದ್ಧ ಸಿಡಿದು ನಿಂತಿದ್ದ ಜೆಮಿಮಾ ಇಲ್ಲಿ 45 ಎಸೆತಗಳಿಂದ 75 ರನ್ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಒಳಗೊಂಡಿತ್ತು. ದೀಪ್ತಿ ಶರ್ಮ 49 ಎಸೆತ ಎದುರಿಸಿ 64 ರನ್ ಹೊಡೆದರು (5 ಬೌಂಡರಿ, 2 ಸಿಕ್ಸರ್).
ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಿಂದ ಹೊರಗುಳಿದರು. ಸ್ಮೃತಿ ಮಂಧನಾ ತಂಡವನ್ನು ಮುನ್ನಡೆಸಿದರು. ಆದರೆ ಬ್ಯಾಟಿಂಗ್‌ಗೆ ಇಳಿಯಲಿಲ್ಲ.
ಯುಎಇ ಆಮೆಗತಿಯಾಟ
ಯುಎಇ ಎರಡು ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ತೀರ್ಥ ಸತೀಶ್ (1), ಇಶಾ ರೋಹಿತ್ ಓಜಾ (4), ನತಾಶಾ ಶೆರಿಯತ್ (0) ಬೇಗನೇ ಪೆವಿಲಿಯನ್ ಸೇರಿಕೊಂಡರು. ಆಗ ಸ್ಕೋರ್‌ಬೋರ್ಡ್ ಕೇವಲ 5 ರನ್ ದಾಖಲಿಸುತ್ತಿತ್ತು.
ಮುಂದಿನದು ಕವಿಶಾ ಮತ್ತು ಖುಷಿ ಶರ್ಮ ಅವರ ಆಮೆಗತಿಯ ಆಟ. 15.1 ಓವರ್ ನಿಭಾಯಿಸಿದ ಇವರು ಒಟ್ಟುಗೂಡಿಸಿದ್ದು 58 ರನ್ ಮಾತ್ರ!
ಸಂಕ್ಷಿಪ್ತ ಸ್ಕೋರ್: ಭಾರತ-5 ವಿಕೆಟಿಗೆ 178 (ಜೆಮಿಮಾ ಔಟಾಗದೆ 75, ದೀಪ್ತಿ 64). ಯುಎಇ-4 ವಿಕೆಟಿಗೆ 74 (ಕವಿಶಾ ಔಟಾಗದೆ 30, ಖುಷಿ 29, ರಾಜೇಶ್ವರಿ 29ಕ್ಕೆ 2).
ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.