ತ್ಯಾಜ್ಯ ಸಂಗ್ರಹಿಸುವ 12 ಕುಟುಂಬಗಳ ಸೂರಿಗೆ ಸೋಲಾರ್ ಲೈಟ್
Team Udayavani, Oct 6, 2022, 9:37 AM IST
ಮಹಾನಗರ: ಸಮಾಜದ ನಿರ್ಲಕ್ಷಿತ ವರ್ಗ ಗಳನ್ನು ತಲುಪಲು ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನದ ಹೊಸ ಯೋಜನೆಯಡಿ ನಗರದ ಪಚ್ಚನಾಡಿಯಲ್ಲಿ ವಾಸಿಸುವ 12 ತ್ಯಾಜ್ಯ ಸಂಗ್ರಹಿಸುವ ಕುಟುಂಬಗಳಿಗೆ ಅಗತ್ಯ ಒಳಾಂಗಣ ಸೌರ ದೀಪಗಳನ್ನು ಅಳವಡಿಸಿದೆ.
ಈ ಯೋಜನೆಯು ವಿಶೇಷವಾಗಿ ಸುಮಾರು 20 ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ. ಈ ಕುಟುಂಬಗಳು ಹಲವು ವರ್ಷಗಳಿಂದ ತಮ್ಮ ವಸತಿ ಗೃಹಗಳಿಗೆ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಕತ್ತಲಲ್ಲಿಯೇ ಜೀವನ ನಡೆಸುತ್ತಿದ್ದರು.
ವಿಷಜಂತುಗಳ ಭಯದಲ್ಲಿ ಕುಟುಂಬಗಳು ಬದುಕುತಿದ್ದವು. ರಾತ್ರಿ ವೇಳೆ ಮಕ್ಕಳು ಓದಲು ಕಷ್ಟಪಡುತ್ತಿದ್ದರು. ಈ ಕುಟುಂಬಗಳ ದುಃಸ್ಥಿತಿಯ ಬಗ್ಗೆ ತಿಳಿದ ನಂತರ, ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನ ಸೌರ ದೀಪಗಳನ್ನು ಪೂರೈಸುವ ಯೋಜನೆಯನ್ನು ರೂಪಿಸಿತು. ಸೆಲ್ಕೊ ಪ್ರತಿಷ್ಠಾನದ ಅಂಗಸಂಸ್ಥೆಯಾದ ಸೆಲ್ಕೋ ಇಂಡಿಯಾ ಕಡಿಮೆ ದರದಲ್ಲಿ ಸೌರ ದೀಪಗಳನ್ನು ಒದಗಿಸಿತು. ಸ್ಥಳೀಯ ಮತ್ತು ಅನಿವಾಸಿ ದಾನಿಗಳು ಯೋಜನೆಗೆ ಬಾಕಿ ಹಣವನ್ನು ಒದಗಿಸಿದ್ದಾರೆ.
ರವಿ ಕರ್ಕೇರ, ಸಂತೋಷ್ ಶೆಟ್ಟಿ, ಸದಾಶಿವ ಪೂಜಾರಿ, ಸತೀಶ್ ಸಾಲ್ಯಾನ್, ಸಂದೀಪ್ ಚೌಧರಿ, ಗುರುರಾಜ್ ಪೂಜಾರಿ, ವಿರಾಜ್ ಶೆಟ್ಟಿ, ಯೋಗೀಶ್ ಪೂಜಾರಿ, ರೆಮ್ಮಿ ಲೋಬೋ, ಅಶ್ವಿನಿ ದಿನೇಶ್ ಇತರ ದಾನಿಗಳಾಗಿದ್ದಾರೆ. ಯೋಜನೆಯನ್ನು ಹಸಿರು ದಳದಿಂದ ನಾಗರಾಜ್ ಅಂಚನ್, ರೂಪಕಲಾ, ಹೇಮಚಂದ್ರ, ಎಪಿಡಿ ಪ್ರತಿಷ್ಠಾನದಿಂದ ಗೀತಾ ಸೂರ್ಯ ಸಂಯೋಜಿಸಿದ್ದಾರೆ.
ನಗರ ಸೌಂದರ್ಯವರ್ಧಕರು
ನಗರವನ್ನು ಸ್ವಚ್ಛವಾಗಿಡುವಲ್ಲಿ ತ್ಯಾಜ್ಯ ಸಂಗ್ರಹಿಸುವವರು ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಅವರನ್ನು ಅನೌಪಚಾರಿಕ ನಗರ ಸೌಂದರ್ಯವರ್ಧಕರು ಎಂದು ಪರಿಗಣಿಸುತ್ತೇವೆ. ಅವರು ಉತ್ತಮ ಗುಣಮಟ್ಟದ ಜೀವನಕ್ಕೆ ಅರ್ಹರು. ಸೌರ ಬೆಳಕನ್ನು ಒದಗಿಸುವುದರಿಂದ ಅವರು ಸುರಕ್ಷಿತವಾಗಿ ಬದುಕಲು ಸಾಧ್ಯವಾಗುತ್ತದೆ. ಅವರ ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ ಜೀವನದಲ್ಲಿ ಮೇಲೇರಲು ಸಾಧ್ಯ ಎಂದು ಯೋಜನೆಯ ಪ್ರಮುಖ ದಾನಿಗಳಲ್ಲೊಬ್ಬರಾದ ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ಲಾ ಎ. ರೆಹಮಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.