ಸೌಕರ್ಯವಿಲ್ಲದೆ ಕೆಂಪೇಗೌಡ ಬಡಾವಣೆ ನಿವೇಶನದಾರರ ಪರದಾಟ
ಸಮಗ್ರ ಲೆಕ್ಕಪರಿಶೋಧನಾ ವರದಿ ಸಲ್ಲಿಕೆ ವಿಳಂಬದಿಂದ ಅನುದಾನ ಕೊರತೆ; ಬಿಡಿಎ ಎಡವಟ್ಟು ನಿರ್ಧಾರಗಳಿಂದ ನಿವೇಶನದಾರರು ಹೈರಾಣ
Team Udayavani, Oct 6, 2022, 2:00 PM IST
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಸೌಕರ್ಯ ಕಾಮಗಾರಿ ಪ್ರಗತಿ ಹಾಗೂ ಹೆಚ್ಚುವರಿ ಅನುದಾನ ನೀಡುವ ಸಂಬಂಧ ಸಮಗ್ರ ಲೆಕ್ಕಪರಿಶೋಧನಾ ವರದಿ ಸಲ್ಲಿಕೆಯಾಗುವಲ್ಲಿನ ವಿಳಂಬದಿಂದಾಗಿ ನಿವೇಶನದಾರರು ಮನೆ ನಿರ್ಮಾಣ ಮಾಡಲಾದೆ ಪರದಾಡುವಂತಾಗಿದೆ.
ಬಿಡಿಎ 2,652 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಒದಗಿಸುವ ಕಾಮಗಾರಿಯನ್ನು 2017-18ರಿಂದ ಆರಂಭಿಸಲಾಗಿದೆ. ರಸ್ತೆ, ಚರಂಡಿ, ವಿದ್ಯುತ್ ಕಂಬ ಇನ್ನಿತರ ಮೂಲಸೌಕರ್ಯ ಕಾಮಗಾರಿಗಳಿಗಾಗಿ 2,600 ಕೋಟಿ ರೂ. ನಿಗದಿ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದ್ದರೂ, ಅನುದಾನ ಕೊರತೆ ಎದುರಾಗುವಂತಾಗಿದೆ.
ಹೀಗಾಗಿ ಉಳಿದ ಕಾಮಗಾರಿಗಾಗಿ ಹೆಚ್ಚುವರಿಯಾಗಿ 650 ಕೋಟಿ ರೂ. ಅವಶ್ಯಕತೆಯಿದ್ದು, ಅದನ್ನು ಬಿಡುಗಡೆ ಮಾಡುವಂತೆ ಗುತ್ತಿಗೆ ಸಂಸ್ಥೆಗಳು ಕೋರಿವೆ. ಆದರೆ, ಹೆಚ್ಚುವರಿ ಅನುದಾನ ನೀಡುವುದಕ್ಕೂ ಮುಂಚೆ ಅನುದಾನದ ಅಗತ್ಯ ಎಷ್ಟಿದೆ ಎಂಬ ಬಗ್ಗೆ ಮೂರನೇ ಸಂಸ್ಥೆಯಿಂದ ಲೆಕ್ಕಪರಿಶೋಧನೆ ಮಾಡಿಸುವುದಾಗಿ ಬಿಡಿಎ ತಿಳಿಸಿದೆ. ಆದರೆ, ಈವರೆಗೆ ಲೆಕ್ಕಪರಿಶೋಧನೆ ಮಾಡಿಸಲು ಬಿಡಿಎ ಸಮರ್ಪಕ ಕ್ರಮ ಕೈಗೊಂಡಿಲ್ಲ.
ಹೆಚ್ಚುವರಿ ಅನುದಾನಕ್ಕೆ ಗುತ್ತಿಗೆದಾರರು 2016ರಿಂದಲೂ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಬಿಡಿಎ ಅದರ ಬಗ್ಗೆ ಗಮನಹರಿಸಿರಲಿಲ್ಲ. 2021ರ ಜನವರಿಯಲ್ಲಿ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ ಬಿಡಿಎ, ಜಲಮಂಡಳಿ, ಬೆಸ್ಕಾಂ ಸೇರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ಆಂತರಿಕ ಸಮಿತಿಯ ಲೆಕ್ಕಪರಿಶೋಧನೆಗೆ ನಿರ್ಧರಿಸಲಾಯಿತು. ಅದರಂತೆ ಆಂತರಿಕ ಸಮಿತಿಯು ಸ್ಥಳ ಪರಿಶೀಲನೆ ಸೇರಿ ಇನ್ನಿತರ ಕ್ರಮ ಕೈಗೊಂಡು 650 ಕೋಟಿ ರೂ. ಬೇಡಿಕೆ ಸಮ್ಮತವಾಗಿದೆ ಎಂದು ವರದಿಯನ್ನೂ ನೀಡಿತ್ತು.
ಅದಾದ ನಂತರ ಮುಖ್ಯಮಂತ್ರಿಗಳು 3ನೇ ಸಂಸ್ಥೆಯಿಂದ ಲೆಕ್ಕಪರಿಶೋಧನೆ ನಡೆಸಿ ವರದಿ ಪಡೆಯುವಂತೆ ಸೂಚಿಸಿದರು. ಅದರಂತೆ 2022ರ ಫೆಬ್ರವರಿಯಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಲೆಕ್ಕಪರಿಶೋಧನೆಯ ವರದಿ ನೀಡುವ ಹೊಣೆಯನ್ನು ನೀಡಲಾಯಿತು. ಲೆಕ್ಕಪರಿಶೋಧನೆ ಕೆಲಸ ಆರಂಭಿಸಿದ ಸಂಸ್ಥೆ ಮತ್ತು ಬಿಡಿಎ ನಡುವೆ ಟೆಂಡರ್ ಮೊತ್ತದ ನಡುವೆ ಗುದ್ದಾಟ ಆರಂಭವಾಯಿತು. ಖಾಸಗಿ ಸಂಸ್ಥೆ ಲೆಕ್ಕಪರಿಶೋಧನೆಗೆ 9 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದರೆ, ಬಿಡಿಎ ಮಾತ್ರ 2 ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಈ ಕಾರಣದಿಂದಾಗಿ ಲೆಕ್ಕಪರಿಶೋಧನಾ ವರದಿ ಸಿದ್ಧಪಡಿಸುವ ಕಾರ್ಯ
10 ಸಾವಿರ ನಿವೇಶನದಾರರಿಗೆ ಸಮಸ್ಯೆ
ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ 9,971 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ ಬಡಾವಣೆಯಲ್ಲಿ ಒಂದೂ ಕಟ್ಟಡ ನಿರ್ಮಾಣವಾಗಿಲ್ಲ. ಮೂಲಸೌಕರ್ಯ ಕೊರತೆಯ ಕಾರಣದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಯಾವೊಬ್ಬ ನಿವೇಶನದಾರರು ಮನಸ್ಸು ಮಾಡುತ್ತಿಲ್ಲ. ಲೆಕ್ಕಪರಿಶೋಧನೆ ನಡೆಸಿ ಮೂಲಸೌಕರ್ಯ ಅನುಷ್ಠಾನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾದ ಬಿಡಿಎ ವೃಥಾ ಕಾಲಹರಣ ಮಾಡುತ್ತಿರುವುದು ನಿವೇಶನದಾರರು ಸಮಸ್ಯೆ ಅನುಭವಿಸುವಂತಾಗಿದೆ. 2016-17ರಲ್ಲಿ ಮೂಲಸೌಕರ್ಯ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯೋಜನಾ ವೆಚ್ಚ ಸಿದ್ಧಪಡಿಸುವ ಸಂದರ್ಭದಲ್ಲಿ ಕಡಿಮೆ ವೆಚ್ಚವನ್ನು ಅಂದಾಜಿಸಿದ್ದೇ ಈಗಿನ ಸಮಸ್ಯೆಗೆ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಮೂಲಸೌಕರ್ಯ ವೆಚ್ಚದ ಕುರಿತಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಸಂದರ್ಭದಲ್ಲಿ ಭೂಮಿಯ ಸಮರ್ಪಕ ವಿಸ್ತೀರ್ಣ, ರಸ್ತೆಯ ಉದ್ದ ಎಷ್ಟಾಗಲಿದೆ? ವಿದ್ಯುತ್ ಕಂಬಗಳು ಎಷ್ಟು ಅವಶ್ಯಕವಿದೆ? ಚರಂಡಿಯ ಉದ್ದ ಎಷ್ಟಿರಲಿದೆ? ಎಂಬ ಬಗ್ಗೆ ಸಮರ್ಪಕವಾಗಿ ಲೆಕ್ಕ ಹಾಕದ ಕಾರಣ ನಿಖರ ಯೋಜನಾ ವೆಚ್ಚವನ್ನು ನಿಗದಿ ಮಾಡುವಲ್ಲಿ ಬಿಡಿಎ ಅಧಿಕಾರಿಗಳು ಎಡವಿದ್ದು ಗೊಂದಲಕ್ಕೆ ಕಾರಣವಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಡಿಎ ಕಾಲಹರಣ ಮಾಡುತ್ತಿದೆ. ಇದರಿಂದಾಗಿ ನಿವೇಶನದಾರರು ಮನೆ ನಿರ್ಮಾಣ ಸೇರಿ ಇನ್ನಿತರ ಚಟುವಟಿಕೆ ಮಾಡಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಉತ್ತರಿಸುತ್ತಿಲ್ಲ. ಶೀಘ್ರ ವಿವಾದ ಇತ್ಯರ್ಥಪಡಿಸಿ ಮೂಲಸೌಕರ್ಯ ಕಲ್ಪಿಸಬೇಕು. ●ಸೂರ್ಯಕಿರಣ್, ನಿವೇಶನದಾರ
●ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.