ಫ್ರೆಂಚ್ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್
Team Udayavani, Oct 6, 2022, 10:18 PM IST
ಸ್ಟಾಕ್‌ಹೋಮ್: ಫ್ರೆಂಚ್ ಲೇಖಕಿ ಆ್ಯನಿ ಎರ್ನಾಕ್ಸ್ ಅವರು ಸಾಹಿತ್ಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
82 ವರ್ಷದ ಆ್ಯನಿ ಎರ್ನಾಕ್ಸ್ 20 ಪುಸ್ತಕಗಳನ್ನು ಬರೆದಿದ್ದಾರೆ. ಇವರು 2014ರ ನಂತರ ಸಾಹಿತ್ಯದಲ್ಲಿ ನೊಬೆಲ್ ಪಡೆದ ಮೊದಲ ಫ್ರೆಂಚ್ ಲೇಖಕರಾಗಿದ್ದಾರೆ. ಎರ್ನಾಕ್ಸ್ ಆತ್ಮಚರಿತ್ರೆ ಬರೆಯುವುದರಲ್ಲಿ ಸಿದ್ಧಹಸ್ತರು.ಎರ್ನಾಕ್ಸ್ ಅವರ ಪುಸ್ತಕಗಳಲ್ಲಿ ಹೆಚ್ಚಿನವು ತುಂಬಾ ಚಿಕ್ಕದಾಗಿದೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳು ಮತ್ತು ಸುತ್ತಲಿರುವವರ ಜೀವನ ಆಧರಿಸಿ ಸಾಹಿತ್ಯವನ್ನು ರಚಿಸಿದ್ದಾರೆ. ಅಲ್ಲದೆ, ಲೈಂಗಿಕ ಸಂಗತಿಗಳು, ಗರ್ಭಪಾತ, ಅನಾರೋಗ್ಯ ಮತ್ತು ತಮ್ಮ ಪೋಷಕರ ಸಾವಿನ ಕುರಿತ ಚಿತ್ರಣವನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಸ್ಟಿಡೀಶ್ ಅಕಾಡೆಮಿ ತಿಳಿಸಿದೆ.
ಇದುವರೆಗೆ 119 ಮಂದಿಗೆ ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಂದಾಯವಾಗಿದೆ. ಈ ಪೈಕಿ ಆ್ಯನಿ ಎರ್ನಾಕ್ಸ್ ಈ ಉನ್ನತ ಪ್ರಶಸ್ತಿಗೆ ಭಾಜನರಾಗುತ್ತಿರುವ 17ನೇ ಮಹಿಳೆಯಾಗಿದ್ದಾರೆ. ಬಹುನಿರೀಕ್ಷಿತ ನೊಬೆಲ್ ಶಾಂತಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.