ಗೃಹ ಖರೀದಿದಾರರ ರಕ್ಷಣೆಗೆ ಕಾಯ್ದೆ: ಕೇಂದ್ರ
Team Udayavani, Oct 7, 2022, 7:25 AM IST
ಹೊಸದಿಲ್ಲಿ: ಅಪಾರ್ಟ್ಮೆಂಟ್ ಖರೀದಿದಾರರ ಹಿತರಕ್ಷಣೆಗಾಗಿ “ಮಾರಾಟಗಾರರು ಮತ್ತು ಖರೀದಿದಾರರ ನಡುವಿನ ಒಪ್ಪಂದ’ ವ್ಯವಸ್ಥೆ ಜಾರಿಗೊಳಿಸುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಗುರುವಾರ ತಿಳಿಸಿದೆ.
ರಾಜ್ಯಗಳ ಮಟ್ಟದಲ್ಲಿ ಕೂಡ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಆ ಒಪ್ಪಂದದಲ್ಲಿ ಇರುವ ಷರತ್ತುಗಳನ್ನು ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾ| ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡಿದ್ದಾರೆ,
ಮನೆ ಖರೀದಿದಾರರ ಹಿತರಕ್ಷಣೆಗಾಗಿ 2016ರ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ಅನುಗುಣವಾಗಿ “ಮಾರಾಟಗಾರರು ಮತ್ತು ಖರೀದಿದಾರರ ನಡುವಿನ ಒಪ್ಪಂದ’ ವ್ಯವಸ್ಥೆ ಜಾರಿ ತರಲಾಗುತ್ತದೆ ಎಂದರು. ನ್ಯಾಯಾಲಯ ಅದನ್ನು ಪರಿಶೀಲಿಸಿ, ಒಪ್ಪಿಗೆ ನೀಡಬೇಕು ಎಂದು ಐಶ್ವರ್ಯ ಭಾಟಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.