ಮಕ್ಕಳ ಸಾವು; ಕಫದ ಸಿರಪ್ ಕುರಿತು ತನಿಖೆ ಆರಂಭ
Team Udayavani, Oct 7, 2022, 7:50 AM IST
ಹೊಸದಿಲ್ಲಿ: ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತದ ಕಂಪೆನಿ ತಯಾರಿಸಿದ ಕಫದ ಸಿರಪ್ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದ ಬೆನ್ನಲ್ಲೇ ಭಾರತದ ಔಷಧ ನಿರ್ದೇಶನಾಲಯವು ಈ ಕುರಿತು ತನಿಖೆ ಆರಂಭಿಸಿದೆ.
ಹರಿಯಾಣದ ಸೋನೆಪತ್ ಮೂಲದ ಮೈಡೆನ್ ಫಾರ್ಮಾಸುಟಿಕಲ್ಸ್ ಲಿ.ನಲ್ಲಿ ತಯಾರಿಸಲಾದ ವಿಷಪೂರಿತ, ಕಳಪೆ ಗುಣಮಟ್ಟದ 4 ಬಗೆಯ ಕೆಮ್ಮು ನಿವಾರಕ ಸಿರಪ್‌ನಿಂದಾಗಿಯೇ ಪಶ್ಚಿಮ ಆಫ್ರಿಕಾದ ದೇಶದಲ್ಲಿ ಮೂತ್ರಕೋಶ ಸಮಸ್ಯೆ ಉಂಟಾಗಿ 66 ಮಕ್ಕಳು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಬುಧವಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿತ್ತು.
ಪ್ರೋಮೆಥಝೈನ್ ಓರಲ್ ಸೊಲ್ಯೂಷನ್, ಕಾಫೆಕ್ಸ್‌ಮೆಲಿನ್ ಬೇಬಿ ಕಾಫ್ ಸಿರಪ್, ಮೇಕಾಫ್ ಬೇಬಿ ಕಾಫ್ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಎಂಬ ನಾಲ್ಕು ಸಿರಪ್‌ಗ್ಳಲ್ಲಿ ಸ್ವೀಕಾರಾರ್ಹವಲ್ಲದಷ್ಟು ಪ್ರಮಾಣದಲ್ಲಿ ಡೈಥಿಲೀನ್ ಗ್ಲೆ„ಕೋಲ್ ಮತ್ತು ಇಥೈಲೀನ್ ಗ್ಲೆ„ಕೋಲ್ ಇರುವುದು ಕಂಡುಬಂದಿತ್ತು. ಈ ಅಂಶಗಳು ಮಾರಣಾಂತಿಕವಾಗಿದ್ದು, ಇದನ್ನು ಸೇವಿಸಿದರೆ ಕಿಡ್ನಿ ಹಾಗೂ ನರಸಂಬಂಧಿ ಸಮಸ್ಯೆ ಉಂಟಾಗುತ್ತದೆ. ಡಬ್ಲ್ಯುಎಚ್‌ಒ ಸೂಚನೆ ಬೆನ್ನಲ್ಲೇ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಪ್ರಕರಣದ ಬಗ್ಗೆ ತುರ್ತು ತನಿಖೆ ಆರಂಭಿಸಿದೆ. ಇದೇ ವೇಳೆ, ಸ್ಯಾಂಪಲ್‌ಗಳನ್ನು ಕೋಲ್ಕತಾಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, 2 ದಿನಗಳಲ್ಲಿ ವರದಿ ಬರುವ ಸಾಧ್ಯತೆಯಿದೆ ಎಂದಿದೆ ಕಂಪೆನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.